ಎಟಿಎಂ ಬಳಕೆಗೆ ಹೊಸ ನಿಯಮ: ಆರ್‌ಬಿಐಗೆ 'ಹೈ' ನೋಟೀಸ್
ಎಟಿಎಂ ಉಚಿತ ಬಳಕೆ ಕುರಿತು ಆರ್‌ಬಿಐ ಜಾರಿಗೆ ತಂದಿರುವ ಹೊಸ ನಿಯಮಕ್ಕೆ ಸಂಬಂಧಿಸಿದಂತೆ...

ನವದೆಹಲಿ: ಎಟಿಎಂ ಉಚಿತ ಬಳಕೆ ಕುರಿತು ಆರ್‌ಬಿಐ ಜಾರಿಗೆ ತಂದಿರುವ ಹೊಸ ನಿಯಮಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆರ್‌ಬಿಐಯನ್ನು ತರಾಟೆಗೆ ತೆಗೆದುಕೊಂಡಿದ್ದು, ಗ್ರಾಹಕರಿಗೆ ಅನಗತ್ಯವಾಗಿ ತೆರಿಗೆ ಹಾಕಲಾಗುತ್ತಿದೆ ಎಂದು ಹೇಳಿದೆ.
ಕೆಲವು ತಿಂಗಳ ಹಿಂದೆ ಆರ್‌ಬಿಐ ಎಟಿಎಂ ಬಳಕೆಗೆ ಹೊಸ ನಿಯಮ ಜಾರಿ ತಂದಿತ್ತು. ಈ ನಿಯಮದ ಪ್ರಕಾರ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತಾ, ಹೈದ್ರಾಬಾದ್ ಮತ್ತು ಬೆಂಗಳೂರುನಲ್ಲಿ ಬ್ಯಾಂಕ್ ಗ್ರಾಹಕರು ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ಎಟಿಎಂನಲ್ಲಿ ಹಣ ಪಡೆದರೆ, ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. 5ಕ್ಕಿಂತ ಹೆಚ್ಚು ಬಾರಿ ನಡೆಸುವ ವಹಿವಾಟಿಗೆ ರು.20 ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಿತ್ತು.
ಇದನ್ನು ಪ್ರಶ್ನಿಸಿ ವಕೀಲೆ ಸ್ವಾತಿ ಅರ್ಗವಾಲ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬ್ಯಾಂಕ್‌ಗಳಿಗೆ ನೋಟೀಸ್ ನೀಡಿದೆ.
ನ್ಯಾಯಾಮೂರ್ತಿ ಜಿ.ರೋಹಿಣಿ ಮತ್ತು ನ್ಯಾಯಾಮೂರ್ತಿ ಪಿ.ಎಸ್. ತೆಜಿ ಅವರನ್ನೊಳಗೊಂಡ ನ್ಯಾಯಾಪೀಠ ಅನಗತ್ಯವಾಗಿ ಗ್ರಾಹಕರ ಮೇಲೆ ಹೊರೆ ಆಕಲಾಗುತ್ತಿದೆ. ನಿಮ್ಮ ಗ್ರಾಹಕರಿಗೆ ನಿವೇ ಏಕೆ ಅನಗತ್ಯವಾಗಿ ತೆರಿಗೆ ಹಾಕುತ್ತಿದ್ದೀರಿ? ಎಂದು ಹೇಳಿದ್ದು, ಆರ್‌ಬಿಐ, ಐಬಿಎ ಮತ್ತು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾಗೆ ನೋಟೀಸ್ ನೀಡಿದೆ. ನೋಟೀಸ್‌ಗೆ ಮುಂದಿನ ವಿಚಾರಣೆ ವೇಳೆ ಉತ್ತರಿಸುವಂತೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


