ವಾದ್ರಾ ಹೆಸರಲ್ಲಿ ಮಿತಿಗಿಂತಲೂ ಹೆಚ್ಚು ಭೂಮಿ
ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರದ ಕೃಪಾಕಟಾಕ್ಷದಿಂದ ಬೇಕಾದಷ್ಟು ಭೂಮಿ ಕೊಂಡಿದ್ದಾರೆ...

ನವದೆಹಲಿ: ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರದ ಕೃಪಾಕಟಾಕ್ಷದಿಂದ ಬೇಕಾದಷ್ಟು ಭೂಮಿ ಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾಗೆ ಹೊಸ ಸಂಕಷ್ಟ ಎದುರಾಗಿದೆ.
ಸೋನಿಯಾ ಅಳಿಯ ವಾದ್ರಾರ ಭೂಮಿಯ ದಾಖಲೆಗಳು ಸೋರಿಕೆಯಾಗಿದ್ದು, ಅವರು ಕಾನೂನಿನ ಮಿತಿಗಿಂತ ಹೆಚ್ಚು ಜಮೀನು ಹೊಂದಿರುವುದು ಬೆಳಕಿಗೆ ಬಂದಿದೆ. ಹರ್ಯಾಣದಲ್ಲಿ ವಾದ್ರಾ, ಅವರ ಕಂಪನಿಗಳು ಹಾಗೂ ಪತ್ನಿ ಪ್ರಿಯಾಂಕಾ ಗಾಂಧಿ ಹೆಸರಲ್ಲಿ ಬರೋಬ್ಬರಿ 146,755 ಎಕರೆ ಭೂಮಿಯಿದೆ.
ಆದರೆ ಕಾನೂನಿನ ಅನ್ವಯ ಒಬ್ಬ ವ್ಯಕ್ತಿ ಅಥವಾ ಆತನ ಕುಟುಂಬ 53.8 ಎಕರೆ ಭೂಮಿ ಹೊಂದಲಷ್ಟೇ ಅವಕಾಶವಿದೆ. ಈ ಬಗ್ಗೆ ಸೋರಿಕೆಯಾದ ದಾಖಲೆಗಳು ದೆಹಲಿ ಮೂಲದ ಆಂಗ್ಲ ದೈನಿಕ ಮೇಲ್ ಟುಡೇಗೆ ದೊರೆತಿದೆ. ಒಂದು ವೇಳೆ ವಾದ್ರಾ ವಿರುದ್ಧದ ಈ ಆರೋಪ ಸಾಬೀತಾದರೆ ಅವರಿಗೆ 2 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
2010 ಮತ್ತು 2012ರೊಳಗೆ ವಾದ್ರಾ ಅವರು 82.2 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಆದರೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಈ ವಿಚಾರ ಮುಚ್ಚಿಟ್ಟದ್ದಾರೆ ಎಂದು ವರದಿ ಹೇಳುತ್ತದೆ. ವಾದ್ರಾ ಕೊಂಡಿರುವ ಭೂಮಿ ಗುರ್‌ಗಾಂವ್ ಪರೀದಾಬಾದ್, ಮೇವತ್, ಪಲ್ವಾಲ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


