ಡ್ರಗ್ಸ್ ಹಾಗೂ ಹವಾಲ ಪ್ರಕರಣ: ಸಚಿವ ಬಿಕ್ರಂ ಸಿಂಗ್‌ಗೆ ಇಡಿ ಸಮನ್ಸ್

ಚಂಡೀಗಡ: ಡ್ರಗ್ಸ್ ಮುಕ್ತ ಸಮಾಜ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹವಣಿಸುತ್ತಿದ್ದರೆ. ಪಂಜಾಬ್‌ನಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳದ ಸಚಿವರೊಬ್ಬರು ಮಾದಕ ವಸ್ತು ಜಾಲ ಮತ್ತು ಹವಾಲ ಹಣ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದು, ಎನ್‌ಡಿಎ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.
ಕೇಂದ್ರ ಸಚಿವ ಹರಿಸಿಮ್ರತ್ ಕೌರ್ ಬಾದಲ್ ಅವರ ಕಿರಿಯ ಸಹೋದರನಾಗಿರುವ ಪಂಜಾಬ್‌ನ ಕಂದಾಯ ಸಚಿವ ಬಿಕ್ರಂ ಸಿಂಗ್ ಮಂಜೀತಿಯಾ ಅವರಿಗೆ ಮಾದಕ ವಸ್ತು ಜಾಲ ಮತ್ತು ಹವಾಲ ಹಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೆ ಜಾರಿ ನಿರ್ದೇಶನಾಯಲ ಸಮನ್ಸ್ ಜಾರಿ ಮಾಡಿದ್ದು, ಶೀಘ್ರ ವಿಚಾರಣೆಗೊಳಪಡಿಸಲಿದೆ.
6 ಸಾವಿರ ಕೋಟಿ ರು. ಮೌಲ್ಯದ ಮಾದಕ ವಸ್ತು ಜಾಲ ಮತ್ತು ಹವಾಲ ಪ್ರಕರಣಗಳ ವಿಚಾರಣೆಗೆ ಬಿಕ್ರಂ ಸಿಂಗ್ ಮಂಜೀತಿಯಾ ಅವರು ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗಬೇಕಿದ್ದು. ವಿಚಾರಣೆ 26ರಂದು ನಡೆಯಲಿದೆ ಎನ್ನಲಾಗಿದೆ.
ಪಂಜಾಬ್ ಪೊಲೀಸರು 2013ರಲ್ಲಿ ಮಾಜಿ ಪೊಲೀಸ್ ಜಗದೀಶ್ ಸಿಂಗ್ ಬೋಲಾ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಬೋಲಾ ಬಿಂಕ್ರ ಸಿಂಗ್‌ರ ಹೆಸರನ್ನು ಬಯಲು ಮಾಡಿದ್ದು ಬಹುಕೋಟಿ ಮಾದಕ ವಸ್ತು ಪ್ರಕರಣವನ್ನು ಬಯಲಿಗೆ ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


