ದೇಶ

ನೆರೆಯ ರಾಷ್ಟ್ರಗಳಿಗೆ ಚೀನಾ ಆಮಿಷ..!

ನೆರೆಯ ರಾಷ್ಟ್ರಗಳಿಗೆ 18 ಸಾವಿರ ಕೋಟಿ ನೆರವು ನೀಡುವ ಆಮಿಷ ಒಡ್ಡಿದ...

ನೆರೆಯ ರಾಷ್ಟ್ರಗಳಿಗೆ ಚೀನಾ ಆಮಿಷ..!
ಜಿಎಂಎಸ್ ಸಮಿತ್ ಶೃಂಗಸಭೆಯಲ್ಲಿ ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಭಾಗವಹಿಸಿದ್ದರು (ಸಂಗ್ರಹ ಚಿತ್ರ)
Published On :

ನೆರೆಯ ರಾಷ್ಟ್ರಗಳಿಗೆ 18 ಸಾವಿರ ಕೋಟಿ ನೆರವು ನೀಡುವ ಆಮಿಷ ಒಡ್ಡಿದ ಚೀನಾ ಸರ್ಕಾರ
ಬ್ಯಾಂಕಾಕ್:
ಏಷ್ಯಾದ ಮೇಲೆ ಪ್ರಭುತ್ವ ಸಾಧಿಸಲು ಚೀನಾ ಈಗ ನೆರೆಹೊರೆಯ ದೇಶಗಳಿಗೆ ಹಣದ ಆಮಿಷ ನೀಡುವ ತಂತ್ರ ಅನುಸರಿಸುತ್ತಿದೆ.

ಕಾಂಬೋಡಿಯಾ, ವಿಯಾಟ್ನಾಂ, ಮ್ಯಾನ್ಮಾರ್ , ಥಾಯ್‌ಲ್ಯಾಂಡ್ ಮತ್ತು ಲಾವೋಸ್‌ನಲ್ಲಿ ಮೂಲ ಸೌಲಭ್ಯ, ಉತ್ಪಾದನೆ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಹೆಸರಿನಲ್ಲಿ 18 ಸಾವಿರ ಕೋಟಿ ನೆರವು ನೀಡಲಾಗುತ್ತಿದೆ.

ನಾವು ಈ 5 ರಾಷ್ಚ್ರಗಳ ಜತೆ ಬಾಂಧವ್ಯವೃದ್ಧಿಗಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ಜತೆಗೆ, ಈ ದೇಶಗಳ ಜತೆಗಿನ ಸಮಗ್ರ ಪಾಲುದಾರಿಕೆಯನ್ನು ಕೆಲಸ ಹೊಸ ಮಜಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಬ್ಯಾಂಕಾಕ್‌ನಲ್ಲಿ ನಡೆದ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಹೇಳಿದ್ದಾರೆ.

ಅದರಂತೆ ಪ್ರಾದೇಶಿಕ ಸಾರಿಗೆ ಮಾರ್ಗಗಳ ಮೂಲಕ ಚೀನಾ ಈ ದೇಶಗಳಲ್ಲಿ ಟೆಲಿಕಮ್ಯುನಿಷೇನ್, ವಿದ್ಯುತ್, ಉಕ್ಕು, ಸಿಮೆಂಟ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಸೌಕರ್ಯಗಳ ರಫ್ತಿಗೂ ಚೀನಾ ಉದ್ದೇಶಿಸಿದೆ. ಇದಕ್ಕಾಗಿ ಆ ದೇಶಗಳಿಗೆ ವಿಶೇಷ ಸಾಲ ನೀಡಲಿದೆ. ಥಾಯ್‌ಲ್ಯಾಂಡ್‌ನಲ್ಲಿ 867 ಕಿ.ಮೀ. ಉದ್ದ ರೈಲು ಮಾರ್ಗ ನಿರ್ಮಾಣ, ಥಾಯ್‌ಲ್ಯಾಂಡ್‌ನಿಂದ 2 ದಶಲಕ್ಷ ಟನ್ ಅಕ್ಕಿ ಖರೀದಿಸಲೂ ಚೀನಾ ನಿರ್ಧರಿಸಿದೆ. ಚೀನಾ-ಆಸಿಯಾನ್ ಸಹಕಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.