ದೇಶ

ಕಾಶ್ಮೀರದಲ್ಲಿ ಮತ್ತೊರ್ವ ಸರಪಂಚ್‌ನ ಹತ್ಯೆ

ಕಾಶ್ಮೀರದಲ್ಲಿ ಮತ್ತೊರ್ವ ಸರಪಂಚ್‌ನ ಹತ್ಯೆ
ಉಗ್ರ(ಸಂಗ್ರಹ ಚಿತ್ರ)
Published On :

ಸೊಪೋರ್: ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ಶಂಕಿತ ಉಗ್ರರು ಗ್ರಾಮದ ಮತ್ತೊರ್ವ ಸರ್‌ಪಂಚ್‌ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇತ್ತೀಚೆಗಷ್ಟೇ ಸೊಪೋರ್ ಪಂಚಾಯತ್‌ನ ಸರಪಂಚ್ 62 ವರ್ಷದ ಗುಲಾಮ್ ಮೊಹಮ್ಮದ್ ಮೀರ್‌ರನ್ನು ಹತ್ಯೆ ಮಾಡಿದ್ದರು. ಬಳಿಕ ಇದೀಗ ಮತ್ತೊರ್ವ ಸರಪಂಚ್ ಗುಲಾಮ್ ಮೊಹಮ್ಮದ್ ಭಟ್‌ನನ್ನು ಶಂಕಿತ ಉಗ್ರರು ಬೊಮೈನ ಮಾರುಕಟ್ಟೆ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಬೈಕ್‌ನಲ್ಲಿ ಬಂದ ಇಬ್ಬರು ಉಗ್ರರು ಗುಲಾಮ್ ಮೊಹಮ್ಮದ್ ಭಟ್‌ನನ್ನು ಸಮೀಪದಿಂದ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಭಟ್ ಉಗ್ರ ಗುಂಡೇಟಿಗೆ ಬಲಿಯಾದ ನಾಲ್ಕನೇ ಸರಪಂಚ್ ಆಗಿದ್ದಾರೆ.

ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ ಉಗ್ರರು ತಮ್ಮ ಕ್ರೌರ್ಯ ಮೆರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.