ಖ್ಯಾತ ಸಂಗೀತ ನಿರ್ದೇಶಕ ಚಕ್ರಿ ಹೃದಯಾಘಾತದಿಂದ ನಿಧನ
2 ವರ್ಷಗಳ ಹಿಂದೆ ತಂದೆ ಜಿಲ್ಲಾ ವೆಂಕಟ ನಾರಾಯಣ ಅವರು ಸಹ ಹೃದಯಾಘಾತದಿಂದ ನಿಧನರಾಗಿದ್ದರು.

ತೆಲಂಗಾಣ: ಕಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಚಕ್ರಿ(40) ಹೃದಯಾಘಾತದಿಂದ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಬೊಜ್ಜು ಸಂಬಂಧಿತ ಕಾಯಿಲೆಯಿಂದ ನರಳುತ್ತಿದ್ದ ಚಕ್ರಿ, ಚಿಕಿತ್ಸೆ ಪಡೆಯುತ್ತಿದ್ದರು. ಚಕ್ರಿಯವರ ನಿಧನದಿಂದಾಗಿ ತೆಲುಗು ಚಿತ್ರರಂಗ ಬರಡಾಗಿದೆ. ಚಕ್ರಿಯವರು ಪತ್ನಿ ಶ್ರವಣಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ತೆಲುಗಿನ 'ಇಡಿಯಟ್', 'ಸಿಂಹಾ', 'ದೇಶ ಮುದುರು', 'ಅಮ್ಮ ನನ್ನ ಓ ತಮಿಳ ಅಮ್ಮಾಯಿ' ಸೇರಿದಂತೆ 85ಕ್ಕೂ ಅಧಿಕ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ 'ವೀರ ಕನ್ನಡಿಗ' ಸೇರಿದಂತೆ ಹಲವು ಕನ್ನಡ ಚಿತ್ರಗಳಿಗೂ ಚಕ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
'ಸಿಂಹ' ಚಿತ್ರಕ್ಕೆ ಪ್ರತಿಷ್ಠಿತ ನಂದಿ ಪ್ರಶಸ್ತಿಗೂ ಚಕ್ರಿ ಭಾಜನರಾಗಿದ್ದರು.
ಚಕ್ರಿ ಮೂತಹ ತೆಲಂಗಾಣ ಮಹಬೂಬಬಾದ್‌ನ ವಾರಾಂಗಲ್ ಜಿಲ್ಲೆಯವರಾಗಿದ್ದು, 1974 ಜೂನ್ 15 ತೆಲಂಗಾಣದಲ್ಲಿ ಜನಿಸಿದ್ದರು.
ಚಕ್ರಿಯವರ ತಂದೆ ಜಿಲ್ಲಾ ವೆಂಕಟ ನಾರಾಯಣ ಅವರು ಸಹ 2 ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು.
ಕಾಲಿವುಡ್ ಇದೀಗ ಚಕ್ರಿಯವರ ನಿಧನದಿಂದಾಗಿ ಶೋಕದ ಮಡುವಿನಲ್ಲಿ ಮುಳುಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


