ಮತ್ತೆಂದು ರಾಜಕೀಯಕ್ಕೆ ಕಾಲಿಡಲ್ಲ: ಅಮಿತಾಬ್ ಬಚ್ಚನ್
ರಾಜಕೀಯದಿಂದ ಬಹಳ ವರ್ಷಗಳಿಂದ...

ನವದೆಹಲಿ: ರಾಜಕೀಯದಿಂದ ಬಹಳ ವರ್ಷಗಳಿಂದ ದೂರ ಉಳಿದಿದ್ದ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಾನು ಮತ್ತೆಂದು ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಹೇಳಿದ್ದಾರೆ.
ನಾನು ರಾಜಕೀಯ ಪ್ರವೇಶಿಸಿದ್ದೊಂದು ಅಚಾತುರ್ಯ. ಅಂಥ ತಪ್ಪನ್ನು ಇನ್ನೆಂದು ಮಾಡುವುದಿಲ್ಲ ಎಂದು ಅಮಿತಾಬ್ ಬಚ್ಚನ್ ಅಜೆಂಡಾ ಆಜ್‌ತಕ್ ಕಾರ್ಯಕ್ರಮದಲ್ಲಿ ಶನಿವಾರ ಹೇಳಿದ್ದಾರೆ.
ಈ ಹಿಂದೆ ನಾನು ಸಂಸದನಾಗಿದ್ದೇ ಹಲವು ಕನಸುಗಳನ್ನು ಹೊತ್ತು ರಾಜಕೀಯಕ್ಕೆ ಬಂದೆ. ಆದರೆ ಕನಸುಗಳಿಗೂ ವಾಸ್ತವಕ್ಕೂ ಇರುವ ಸತ್ಯ ರಾಜಕೀಯಕ್ಕೆ ಬಂದ ಮೇಲೆ ಗೊತ್ತಾಯಿತು. ಆಗ ರಾಜಕಾರಣಕ್ಕೆ ಬಂದು ತಪ್ಪು ಮಾಡಿದೆ ಎಂದೆನಿಸಿತ್ತು ಎಂದು 72 ವರ್ಷದ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಆಪ್ತರಾಗಿದ್ದ ಅಮಿತಾಬ್ ಬಚ್ಚನ್, 1984ರಲ್ಲಿ ಅಲಹಾಬಾದ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಬಳಿಕ ಮೂರು ವರ್ಷಗಳಲ್ಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮತ್ತೆ ರಾಜಕಾರಣಕ್ಕೆ ಬರುವ ಬಗ್ಗೆ ಅನಾಸಕ್ತರಾಗಿರುವ ಅವರು ಮತ್ತೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


