ದೇಶ

ಅಸಮಾಧಾನ ಇದೆ, ಆದ್ರೂ ಒಬಾಮ ಭಾರತಕ್ಕೆ ಬರ್ತಾರೆ

ರಷ್ಯಾ ಜತೆಗಿನ ಬಾಂಧವ್ಯವನ್ನು ಮುಂದುವರಿಸುವುದಾಗಿ ಭಾರತ ಹೇಳಿರುವುದು ಅಮೆರಿಕಕ್ಕೆ ರುಚಿಸಿಲ್ಲ...

ಅಸಮಾಧಾನ ಇದೆ, ಆದ್ರೂ ಒಬಾಮ ಭಾರತಕ್ಕೆ ಬರ್ತಾರೆ
ಬರಾಕ್ ಒಬಾಮ & ನರೇಂದ್ರ ಮೋದಿ
Published On :

ವಾಷಿಂಗ್ಟನ್: ರಷ್ಯಾ  ಜತೆಗಿನ ಬಾಂಧವ್ಯವನ್ನು ಮುಂದುವರಿಸುವುದಾಗಿ ಭಾರತ ಹೇಳಿರುವುದು ಅಮೆರಿಕಕ್ಕೆ ರುಚಿಸಿಲ್ಲ. ಆದರೂ ಭಾರತದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಲು ಮನಸ್ಸಿಲ್ಲ.

ರಷ್ಯಾ- ಭಾರತ ಒಪ್ಪಂದದ ಬಗ್ಗೆ ಅಸಮಾಧಾನವಾಗಿದೆ ನಿಜ, ಆದರೆ ಅಧ್ಯಕ್ಷ ಒಬಾಮ ಭಾರತ ಭೇಟಿಯಲ್ಲಿ ಬದಲಾವಣೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿರುವುದೇ ಇದಕ್ಕೆ ಸಾಕ್ಷಿ . ಇತ್ತೀಚಿಗೆಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಭಾರತದೊಂದಿಗೆ ತೈಲ,  ರಕ್ಷಣೆ, ಪರಮಾಣು ಶಕ್ತಿ ಸೇರಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಉಕ್ರೇನ್ ವಿಚಾರವನ್ನು ಮುಂದಿಟ್ಟುರೊಡು ಅಮೆರಿಕ, ಐರೋಪ್ಯ ಒಕ್ಕೂಟವು ಈಗಾಗಲೇ ರಷ್ಯಾಗೆ ನಿರ್ಬಂಧ ಹೇರಿವೆ. ಪರಿಸ್ಥಿತಿ ಹೀಗಿರುವಾಗ ಭಾರತವು ರಷ್ಚಾ ಜತೆ ಉತ್ತಮ ಸಂಬಂಧ ಕಾಯ್ದುಕೊಂಡಿರುವುದು  ಅಮೆರಿಕಕ್ಕೆ ಅಸಮಾಧಾನ ಮೂಡಿಸಿದೆ.

ತಾಜ್‌ಮಹಲ್‌ಗೆ ಭೇಟಿ?:  ಜ.25, 26ರಂದು ಭಾರತ ಪ್ರವಾಸ ಕೈಗೊಳ್ಳುವ ವೇಳೆ ಬರಾಕ್ ಒಬಾಮ ಜಗತ್ ಪ್ರಸಿದ್ಧ ತಾಜ್ ಮಹಲ್‌ಗೂ ಭೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ  ಅಂತಿಮ ನಿರ್ಧಾರವಾಗಿಲ್ಲ. ಅವರು ಐಟಿಐ ಮೌರ್ಯ  ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಒಬಾಮ ಜತೆಗೆ ಪತ್ನಿ ಮಿಷಲ್ ಕೂಡಾ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆಯೇ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.