ದೇಶ

ಕನ್ನಡದ ಆಶಾ ಭಟ್ ಗೆ 'ಮಿಸ್ ಸುಪ್ರಾ ನ್ಯಾಷನಲ್' ಕಿರೀಟ

ಕರ್ನಾಟಕದ ಭದ್ರಾವತಿ ಮೂಲದವರಾದ ಆಶಾ ಭಟ್ ಸುಪ್ರಾ ನ್ಯಾಷನಲ್...

ಕನ್ನಡದ ಆಶಾ ಭಟ್ ಗೆ 'ಮಿಸ್ ಸುಪ್ರಾ ನ್ಯಾಷನಲ್' ಕಿರೀಟ
ಆಶಾ ಭಟ್
Published On :

ಕರ್ನಾಟಕದ ಭದ್ರಾವತಿ ಮೂಲದವರಾದ ಆಶಾ ಭಟ್ ಸುಪ್ರಾ ನ್ಯಾಷನಲ್ ಸೌಂದರ್ಯ ಕಿರೀಟ ಧರಿಸಿದ್ದಾರೆ.

ಪೊಲೆಂಡಿನಲ್ಲಿ ನಡೆದ ಸುಪ್ರಾ ನ್ಯಾಷನಲ್ ಸೌಂದರ್ಯ ಸ್ಫರ್ಧೆಯಲ್ಲಿ ಆಶಾ ಭಟ್ 'ಮಿಸ್ ಸುಪ್ರಾ ನ್ಯಾಷನಲ್ ಕಿರೀಟ' ಧರಿಸಿದ್ದು, ದಕ್ಷಿಣ ಆಫ್ರಿಕಾ ಮೂಲದ ಸಂಸ್ಥೆ ನಡೆಸಿದ ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಭಾರತೀಯರೆಂಬ ಕೀರ್ತಿಗೂ ಆಶಾ ಭಟ್ ಭಾಜನರಾಗಿದ್ದಾರೆ.

ಭದ್ರಾವತಿಯವರಾದ ಆಶಾ ಭಟ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಚಾರ್ಲ್ಸ್ನಲ್ಲಿ ಪೂರೈಸಿದ್ದು ಪ್ರಸ್ತುತ ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದಲ್ಲದೇ ಆಶಾ ಭಟ್ ಹಾಡುಗಾರಿಕೆ, ಚಿತ್ರಕಲೆ ಸೇರಿದಂತೆ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ.

ಆಶಾ ಭಟ್ 2009ರ ಸಾರ್ಕ್ ಸಮ್ಮೇಳನದ ವೇಳೆ ಎನ್ಸಿಸಿ ವತಿಯಿಂದ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.