ದೇಶ

ಅಮಿರ್ ಖಾನ್ ಸಂಚಾರ ಸುರಕ್ಷೆ ರಾಯಭಾರಿ

ಭಾರತದ ಪ್ರವಾಸೋದ್ಯಮದ 'ಅತಿಥಿ ದೇವೋ ಭವ' ಅಭಿಯಾನದಿಂದ ಜನರಿಗೆ ಹತ್ತಿರವಾಗಿದ್ದ ಬಾಲಿವುಡ್...

ಅಮಿರ್ ಖಾನ್ ಸಂಚಾರ ಸುರಕ್ಷೆ ರಾಯಭಾರಿ
ಅಮಿರ್ ಖಾನ್
Published On :

ನವದೆಹಲಿ: ಭಾರತದ ಪ್ರವಾಸೋದ್ಯಮದ 'ಅತಿಥಿ ದೇವೋ ಭವ' ಅಭಿಯಾನದಿಂದ ಜನರಿಗೆ ಹತ್ತಿರವಾಗಿದ್ದ ಬಾಲಿವುಡ್ ನಟ ಅಮಿರ್ ಖಾನ್ ಈಗ ಸಂಚಾರ ಸುರಕ್ಷೆಯ ರಾಯಭಾರಿಯಾಗಲಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಸಂಚಾರ ಸುರಕ್ಷೆ ಅಭಿಯಾನಕ್ಕೆ ಅಮಿರ್‌ಖಾನ್ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಅಧಿಕೃತವಾಗಿ ಆದೇಶ ಹೊರಬೀಳಬೇಕಿದೆ.

ಈ ಸಂಬಂಧ ಈಗಾಗಲೇ ಅಮಿರ್‌ಖಾನ್ ಅವರು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ಅಭಿಯಾನದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ವರ್ಷಕ್ಕೆ ಸುಮಾರು 1.4 ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಸಂಚಾರ ವ್ಯವಸ್ಥೆ ಮತ್ತು ಸುರಕ್ಷಿತ ಚಾಲನೆ ಕುರಿತು ಜಾಗೃತಿ ಮೂಡಿಸಲು ಅಮಿರ್‌ಖಾನ್ ಕೇಂದ್ರ ಸಾರಿಗೆ ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.