"ಕಿಸ್' ಪ್ರತಿಭಟನೆಗೆ ನಿಷೇಧವೇರಲ್ಲ: ಕೇರಳ ಸರ್ಕಾರ
ಕಿಸ್ ಪ್ರತಿಭಟನೆ ಮೇಲೆ ನಿಷೇಧವೇರಲ್ಲ ಎಂದು ಕೇರಳ ಸರ್ಕಾರ ಸೋಮವಾರ ಹೇಳಿದೆ...

ತಿರುವನಂತಪುರಂ: "ಕಿಸ್ ಪ್ರತಿಭಟನೆ' ಮೇಲೆ ನಿಷೇಧವೇರಲ್ಲ ಎಂದು ಕೇರಳ ಸರ್ಕಾರ ಸೋಮವಾರ ಹೇಳಿದೆ.
ಪ್ರಜಾಪ್ರಭುತ್ವದ ನಾಡಲ್ಲಿ ಯಾರು ಬೇಕಾದರೂ ಪ್ರತಿಭಟನೆ ನಡೆಸಬಹುದು. ಅದು ಅವರ ಹಕ್ಕಾಗಿರುತ್ತದೆ. ಅವರ ಹಕ್ಕಿನ ಮೇಲೆ ನಿಷೇಧವೇರುವುದು ಸಮಂಜಸವಲ್ಲ. ಆದರೆ, ಪ್ರತಿಭಟನೆ ಕಾನೂನು ನಿಯಮಗಳನ್ನು ಉಲ್ಲಂಘಸಿದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಿ, ಕ್ರಮ ಕೈಗೊಳ್ಳುತ್ತದೆ ಎಂದು ಕೇರಳ ಸರ್ಕಾರದ ಗೃಹ ಸಚಿವ ರಮೇಶ್ ಚೆನ್ನಿಥಲಾ ತಿಳಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ವಿರೋಧಿಸಿ ಕೇರಳದ ಕೋಝಿಕ್ಕೋಡ್‌ನಲ್ಲಿ ಭಾನುವಾರ ನಡೆದ 2ನೇ ಹಂತದ ಕಿಸ್ ಇನ್ ದಿ ಸ್ಟ್ರೀಟ್ ಪ್ರತಿಭಟನೆ ತಾರಕ್ಕೇರಿತ್ತು. ಪ್ರತಿಭಟನೆಗೆ ಅನುಮತಿ ನಿರಾಕರಿಸಿದರೂ ಕಿಸ್ ಆಫ್ ಲವ್‌ನ ಹೊಸ ಸಮೂಹವೊಂದು ಕಿಸ್ ಇನ್ ದಿ ಸ್ಟ್ರೀಟ್ ಎಂಬ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ವೇಳೆ ಹನುಮಾನ್ ಸೇನಾ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಲ್ಲು ತೂರಾಟ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಗುಂಪುಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದು ತದ ನಂತರ ಬಿಡುಗಡೆಗೊಳಿಸಿದ್ದಾರೆ. ಆದರೆ ಕಿಸ್ ಇನ್ ದಿ ಸ್ಟ್ರೀಟ್ ಪ್ರತಿಭಟನಾಕಾರರು ಪೊಲೀಸರನ್ನು ದೂರುತ್ತಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕೇರಳ ಸರ್ಕಾರ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ. ಆದರೆ, ಅಲ್ಲಿ ಕಾನೂನು ಉಲ್ಲಂಘನೆಯಾಗಬಾರದು ಎಂದು ಸ್ಪಷ್ಟನೇ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


