Kitchen Hacks: ಮಾನ್ಸೂನ್‌ನಲ್ಲಿ ಅಕ್ಕಿ ಹಾಳಾಗ್ತಿದ್ಯಾ? ಈ ಟ್ರಿಕ್‌ಗಳಿಂದ ಅಕ್ಕಿ ವರ್ಷಗಟ್ಟಲೆ ಸೇಫ್! ಏನು ಗೊತ್ತಾ?
ಅಡುಗೆಮನೆಯಲ್ಲಿನ ಅಕ್ಕಿಯ ಡಬ್ಬದಲ್ಲಿ ಹುಳುಗಳು ಬರುವುದು ಸಾಮಾನ್ಯ ಸಮಸ್ಯೆ. ವಿಶೇಷವಾಗಿ ಮಳೆಗಾಲದಲ್ಲಿ ತೇವಾಂಶದಿಂದಾಗಿ ಅಕ್ಕಿಯಲ್ಲಿ ಬೇಗನೆ ಹುಳಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ರಾಸಾಯನಿಕವಿಲ್ಲದೆ ಮನೆಯಲ್ಲಿರುವ ವಸ್ತುಗಳಿಂದಲೇ ಅಕ್ಕಿಗೆ ಹುಳು ತಗದಂತೆ ತಡೆಯುವುದು ಹೇಗೆ?

Kitchen Hacks: ಅಡುಗೆಮನೆಯಲ್ಲಿನ ಅಕ್ಕಿಯ ಡಬ್ಬದಲ್ಲಿ ಹುಳುಗಳು ಬರುವುದು ಸಾಮಾನ್ಯ. ಒಮ್ಮೆ ಹುಳು ಬಂದರೆ ಅಕ್ಕಿ ಅಡುಗೆಗೆ ಯೋಗ್ಯವಾಗುವುದಿಲ್ಲ ಮತ್ತು ವೇಸ್ಟ್ ಆಗುತ್ತದೆ. ಈ ವೇಳೆ ರಾಸಾಯನಿಕ ವಸ್ತುಗಳನ್ನು ಬಳಸದೆ, ಮನೆಯಲ್ಲೇ ಇರುವ ವಸ್ತುಗಳಿಂದಲೇ ಅಕ್ಕಿಯಿಂದ ಹುಳಗಳನ್ನು ಓಡಿಸಬಹುದು! ಆ ಕುರಿತ ಸಿಂಪಲ್ ಕಿಚನ್ ಹಾಕ್ಸ್ ಇಲ್ಲಿದೆ; ಏನು ಗೊತ್ತಾ?
ಬೇವಿನ ಎಲೆ ಮತ್ತು ಒಣ ಮೆಣಸಿನಕಾಯಿ ಟ್ರಿಕ್:
ಅಕ್ಕಿ ಡಬ್ಬಿಯ ಕೆಳಗೆ 8-10 ಒಣಗಿದ ಬೇವಿನ ಎಲೆ ಮತ್ತು 3-4 ಒಣ ಮೆಣಸಿನಕಾಯಿ ಇಡಿ. ಬೇವಿನಲ್ಲಿರುವ ಕಹಿ ಮತ್ತು ಮೆಣಸಿನಕಾಯಿಯ ವಾಸನೆಗೆ ಹುಳುಗಳು ಹತ್ತಿರವೂ ಸುಳಿಯುವುದಿಲ್ಲ. ಪ್ರತಿ 2 ತಿಂಗಳಿಗೊಮ್ಮೆ ಎಲೆಗಳನ್ನು ಬದಲಾಯಿಸಿ.
ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ:
ತಿಂಗಳಿಗೊಮ್ಮೆ ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಹರಡಿ 30 ನಿಮಿಷ ಬಿಸಿಲಿನಲ್ಲಿ ಇಡಿ. ಇದರಿಂದ ಡಬ್ಬಿಯಲ್ಲಿರುವ ಸೂಕ್ಷ್ಮ ತೇವಾಂಶ ಮತ್ತು ಈಗಾಗಲೇ ಇರುವ ಮೊಟ್ಟೆಗಳು ನಾಶವಾಗುತ್ತವೆ. ಸಂಪೂರ್ಣವಾಗಿ ತಣ್ಣಗಾದ ನಂತರವೇ ಡಬ್ಬಿಗೆ ಹಾಕಿ.

ಬೆಳ್ಳುಳ್ಳಿ ಮತ್ತು ಲವಂಗ ಬಳಸಿ:
ಅಕ್ಕಿಯ ಮಧ್ಯದಲ್ಲಿ ಸಿಪ್ಪೆ ಸುಲಿಯದ 4-5 ಬೆಳ್ಳುಳ್ಳಿ ಎಸಳು ಮತ್ತು 5-6 ಲವಂಗವನ್ನು ಬಟ್ಟೆಯಲ್ಲಿ ಕಟ್ಟಿ ಇಡಿ. ಇದರ ವಾಸನೆಗೆ ಹುಳುಗಳು ಓಡುತ್ತವೆ. ಅಕ್ಕಿಯ ರುಚಿಯೂ ಕೆಡುವುದಿಲ್ಲ.
ಗಾಳಿ ಆಡದ ಡಬ್ಬಿ ಮತ್ತು ಒಣ ಚಮಚ:
ಅಕ್ಕಿಯನ್ನು ಯಾವಾಗಲೂ ಗಾಳಿ ಆಡದ ಸ್ಟೀಲ್ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಸಂಗ್ರಹಿಸಿ. ಅಕ್ಕಿ ತೆಗೆಯುವಾಗ ಒದ್ದೆ ಚಮಚ ಬಳಸಬೇಡಿ. ಒಂದು ಹನಿ ನೀರು ಬಿದ್ದರೂ ಹುಳು ಬರಲು ಕಾರಣವಾಗುತ್ತದೆ.
ಉಪ್ಪಿನ ಟ್ರಿಕ್:
1 ಕೆಜಿ ಅಕ್ಕಿಗೆ 1 ಚಮಚ ಕಲ್ಲುಪ್ಪನ್ನು ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು ತೇವಾಂಶವನ್ನು ಹೀರಿಕೊಂಡು ಹುಳು ಬರದಂತೆ ತಡೆಯುತ್ತದೆ. ಅಡುಗೆ ಮಾಡುವಾಗ ಅಕ್ಕಿಯನ್ನು 2 ಬಾರಿ ತೊಳೆದರೆ ಉಪ್ಪಿನ ರುಚಿ ಹೋಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



