ಸೋಪಿನ ಚೂರು ಎಸೆಯಬೇಡಿ! 5 ನಿಮಿಷದಲ್ಲಿ ಮನೆಯಲ್ಲೇ ರೆಡಿ ಮಾಡಿ ಲಿಕ್ವಿಡ್ ಹ್ಯಾಂಡ್ ವಾಶ್
ಸ್ನಾನದ ಸೋಪು ಬಳಸಿದಂತೆ ಕರಗಿ ಚಿಕ್ಕದಾಗಿ, ಚೂರ್ ಚೂರಾಗಿ ಕೈಗೆ ಸಿಗುವುದಿಲ್ಲ ಅಲ್ವಾ? ಚಿಕದಾಯಿತು ಅಂದ್ರೆ ಅದನ್ನು ಎಸೆಯುವುದೇ ಲೇಸು ಎಂದುಕೊಂಡು ಕಸದ ಡಬ್ಬಕ್ಕೆ ಹಾಕುತ್ತೇವೆ! ಆದ್ರೆ, ನಿಮಗೆ ಗೊತ್ತಾ, ಆ ಸಣ್ಣ ಚೂರುಗಳಿಂದಲೇ 5 ನಿಮಿಷದಲ್ಲಿ ಫೋಮ್ ಬರುವ ಲಿಕ್ವಿಡ್ ಹ್ಯಾಂಡ್ ವಾಶ್ ಮಾಡಬಹುದು ಎಂದು?

ಸ್ನಾನದ ಸೋಪು ಬಳಸಿದಂತೆ ಕರಗಿ ಚಿಕ್ಕದಾಗಿ, ಚೂರ್ ಚೂರಾಗಿ ಕೈಗೆ ಸಿಗುವುದಿಲ್ಲ ಅಲ್ವಾ? ಚಿಕದಾಯಿತು ಅಂದ್ರೆ ಅದನ್ನು ಎಸೆಯುವುದೇ ಲೇಸು ಎಂದುಕೊಂಡು ಕಸದ ಡಬ್ಬಕ್ಕೆ ಹಾಕುತ್ತೇವೆ! ಆದ್ರೆ, ನಿಮಗೆ ಗೊತ್ತಾ, ಆ ಸಣ್ಣ ಚೂರುಗಳಿಂದಲೇ 5 ನಿಮಿಷದಲ್ಲಿ ಫೋಮ್ ಬರುವ ಲಿಕ್ವಿಡ್ ಹ್ಯಾಂಡ್ ವಾಶ್ ಮಾಡಬಹುದು ಎಂದು.? ಕೆಮಿಕಲ್ ಕಡಿಮೆ, ಹಣ ಉಳಿತಾಯ ಮತ್ತು ಬಾತ್‌ರೂಮ್ ಕ್ಲೀನ್ ಆಗಿ ಇರುತ್ತದೆ. ಹಾಗಾಗಿ, ವಾರದಲ್ಲಿ 2-3 ಬಾರಿ ಸೋಪು ಬದಲಿಸುವ ಬದಲು ಒಂದು ಬಾಟಲ್ ಹ್ಯಾಂಡ್ ವಾಶ್ 1 ತಿಂಗಳು ಬರುತ್ತದೆ. ಹಾಗಾದ್ರೆ, 5 ನಿಮಿಷದಲ್ಲಿ ಮನೆಯಲ್ಲೇ ರೆಡಿ ಮಾಡೋದು ಹೇಗೆ ಗೊತ್ತಾ ಲಿಕ್ವಿಡ್ ಹ್ಯಾಂಡ್ ವಾಶ್ ಅನ್ನು?
ಮನೆಯಲ್ಲೇ ಲಿಕ್ವಿಡ್ ಹ್ಯಾಂಡ್ ವಾಶ್ ಮಾಡಲು ಬೇಕಾಗುವ ಸಾಮಗ್ರಿಗಳು:
ಸೋಪಿನ ಚೂರುಗಳು - 2 ರಿಂದ 3 ಸಣ್ಣ ಚೂರು ಅಥವಾ 1 ದೊಡ್ಡ ಸೋಪಿನ ಅರ್ಧ
ಬಿಸಿ ನೀರು - 1 ಲೋಟ
ಸಾಮಾನ್ಯ ನೀರು - 2 ಲೋಟ
ಲಿಕ್ವಿಡ್ ಸೋಪ್ ಬಾಟಲ್ - ಖಾಲಿ ಪಂಪ್ ಬಾಟಲ್
ವಾಸನೆಗೆ ಬೇಕಾದ್ರೆ: 5 ಹನಿ ಎಣ್ಣೆ ಮತ್ತು ನಿಂಬೆ ಹಣ್ಣು
5 ನಿಮಿಷದಲ್ಲಿ ಮಾಡುವ ವಿಧಾನ:
Step 1: ಸೋಪು ತುರಿಯಿರಿ:
ಸೋಪು ಚೂರುಗಳನ್ನು ಚಿಕ್ಕದಾಗಿ ತುರಿದುಕೊಳ್ಳಿ. ತುರಿದರೆ ಬೇಗ ಕರಗುತ್ತದೆ. ಮಿಕ್ಸಿ ಮಾಡಿದರೂ ಓಕೆ.
Step 2: ಬಿಸಿ ನೀರಿನಲ್ಲಿ ಕರಗಿಸಿ:
ಒಂದು ಪಾತ್ರೆಯಲ್ಲಿ 1 ಲೋಟ ಬಿಸಿ ನೀರು ಕುದಿಸಿ. ಅದಕ್ಕೆ ತುರಿದ ಸೋಪು ಹಾಕಿ. ಗ್ಯಾಸ್ ಆಫ್ ಮಾಡಿ 2 ನಿಮಿಷ ಕೈಯಿಂದ ಕಲಕಿ. ಸೋಪು ಸಂಪೂರ್ಣ ಕರಗಬೇಕು.
Step 3: ಸಾಮಾನ್ಯ ನೀರು ಮಿಕ್ಸ್ ಮಾಡಿ:
ಈಗ ಅದಕ್ಕೆ 2 ಲೋಟ ಸಾಮಾನ್ಯ ನೀರು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಜಾಸ್ತಿ ಗಟ್ಟಿಯಾದರೆ ಇನ್ನೂ ಸ್ವಲ್ಪ ನೀರು ಸೇರಿಸಬಹುದು.
Step 4: ವಾಸನೆ ಮತ್ತು ಬಾಟಲಿಗೆ ಹಾಕಿ:
ತೆಂಪಾದ ನಂತರ 5 ಹನಿ ಎಸೆನ್ಷಿಯಲ್ ಎಣ್ಣೆ ಸೇರಿಸಿ. ನಂತರ ಅದನ್ನು ಪಂಪ್ ಬಾಟಲಿಗೆ ಸೋಸಿ ಹಾಕಿ. ರೆಡಿ ಆಯ್ತು ನಿಮ್ಮ ಹೋಮ್‌ಮೇಡ್ ಹ್ಯಾಂಡ್ ವಾಶ್.
ಇದರಿಂದ ಸಿಗುವ 3 ಲಾಭಗಳೇನು?
ಹಣ ಉಳಿತಾಯ: ₹150 ರ ಹ್ಯಾಂಡ್ ವಾಶ್ ಬಾಟಲ್ ಬದಲು ಸೋಪು ಚೂರು ಉಪಯೋಗಿಸಿ
ವೇಸ್ಟ್ ಕಡಿಮೆ: ಸೋಪಿನ ಪ್ರತಿ ಚೂರನ್ನು ಬಳಸಿದಂತಾಗುತ್ತದೆ
ನೈಸರ್ಗಿಕ: ಅಂಗಡಿಯ ಹ್ಯಾಂಡ್ ವಾಶ್‌ನಲ್ಲಿ ಇರುವ ಜಾಸ್ತಿ ಕೆಮಿಕಲ್ ಇರುವುದಿಲ್ಲ. ಕೈ ಡ್ರೈ ಆಗುವುದಿಲ್ಲ
ಯಾವ ಸೋಪು ಬಳಸಬಹುದು? - ಡೆಟಾಲ್, ಲೈಫ್‌ಬಾಯ್, ಲಕ್ಸ್, ಸ್ಯಾಂಡಲ್ ಯಾವುದೇ ಬಾತ್ ಸೋಪು ಓಕೆ
ಎಷ್ಟು ದಿನ ಇರುತ್ತದೆ? - 3 ರಿಂದ 4 ವಾರ ಫ್ರೆಶ್ ಆಗಿ ಇರುತ್ತದೆ. ಫ್ರಿಡ್ಜ್‌ನಲ್ಲಿ ಇಟ್ಟರೆ ಇನ್ನೂ ಜಾಸ್ತಿ ದಿನ ಬರುತ್ತದೆ
ಫೋಮ್ ಬೇಕಾ? - ಪಂಪ್ ಬಾಟಲ್‌ನಲ್ಲಿ ಫೋಮ್ ಪಂಪ್ ಬಳಸಿದರೆ ಜಾಸ್ತಿ ಫೋಮ್ ಬರುತ್ತದೆ
ಹಾಗಾಗಿ, ಮುಂದಿನ ಬಾರಿ ಸೋಪು ಚಿಕ್ಕದಾದಾಗ ಡಸ್ಟ್‌ಬಿನ್‌ಗೆ ಎಸೆಯುವ ಬದಲು ಈ ಟ್ರಿಕ್ ಮಾಡಿ. ಕೈ ಸ್ವಚ್ಛವಾಗುತ್ತದೆ, ಪೈಸೆಯೂ ಉಳಿಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




