ಗಿಟಾರ್ ಬ್ಯಾಗ್‌ಗೆ ಹೆಲ್ಮೆಟ್ ಹಾಕಿಲ್ಲವೆಂದು ₹500 ದಂಡ! ಬೆಂಗಳೂರಿನಲ್ಲಿ AI ಕ್ಯಾಮೆರಾದಿಂದ ಮತ್ತೊಂದು ಎಡವಟ್ಟು
ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಅಳವಡಿಸಲಾಗಿರುವ AI ಕ್ಯಾಮೆರಾವೊಂದು, ಸ್ಕೂಟರ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಪ್ರತ್ಯೇಕ ವ್ಯಕ್ತಿ ಎಂದು ಭಾವಿಸಿ, ಆತ ಹೆಲ್ಮೆಟ್ ಹಾಕಿಲ್ಲ ಎನ್ನುತ್ತಾ ₹500 ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ವಾಹನ ಸಂಚಾರರಿಗೆ AI ಕ್ಯಾಮೆರಾಗಳ ಎಡವಟ್ಟುಗಳಿಂದ ಉಂಟಾಗುತಿರುವ ತೊಂದರೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಬೆಳಗಾವಿ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಅಳವಡಿಸಲಾಗಿರುವ AI ಕ್ಯಾಮೆರಾವೊಂದು, ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ₹500 ದಂಡದ ನೋಟಿಸ್ ಕಳುಹಿಸಿತ್ತು. ಇದರ ಬೆನ್ನಲ್ಲೇ, ಈಗ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಅಳವಡಿಸಲಾಗಿರುವ AI ಕ್ಯಾಮೆರಾವೊಂದು, ಸ್ಕೂಟರ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಪ್ರತ್ಯೇಕ ವ್ಯಕ್ತಿ ಎಂದು ಭಾವಿಸಿ, ಆತ ಹೆಲ್ಮೆಟ್ ಹಾಕಿಲ್ಲ ಎನ್ನುತ್ತಾ ₹500 ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಸೌವಿಕ್ ದತ್ತ ಎಂಬುವವರು ತಮ್ಮ ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಅವರು ತಮ್ಮ ಗಿಟಾರ್ ಅನ್ನು ಬೆನ್ನಿಗೆ ತಗುಲಿಸಿಕೊಂಡಿದ್ದರು. ಅದರಂತೆ, ಹೆಬ್ಬಾಳದ ಟಿನ್ ಫ್ಯಾಕ್ಟರಿ ಟ್ರಾಫಿಕ್ ಸಿಗ್ನಲ್ ಬಳಿ ಅಳವಡಿಸಲಾಗಿರುವ ಇಂಟೆಲಿಜೆಂಟ್ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ನ AI ಕ್ಯಾಮೆರಾವು, ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿದೆ. ಜೊತೆಗೆ, ಆ ಗಿಟಾರ್ ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಸ್ವಯಂಚಾಲಿತವಾಗಿ ₹500 ದಂಡದ ಇ-ಚಲನ್ ಅನ್ನು ಸವಾರನ ಪತ್ನಿಯ ಮೊಬೈಲ್‌ಗೆ ರವಾನಿಸಿದೆ.
ಇನ್ನು, ಆನ್‌ಲೈನ್‌ನಲ್ಲಿ ಬಂದ ಚಲನ್ ಮತ್ತು ಅದರಲ್ಲಿದ್ದ ಫೋಟೋ ನೋಡಿ ಶಾಕ್ ಆದ ಸವಾರ, ಈ ತಾಂತ್ರಿಕ ಯಡವಟ್ಟಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದಕ್ಕೆ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದು, ಪರಿಶೀಲನೆಗಾಗಿ ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಸುರಕ್ಷತೆಗಾಗಿ ಇರುವ ಇಂತಹ ಅತ್ಯಾಧುನಿಕ ಕ್ಯಾಮೆರಾಗಳು ಕಳುಹಿಸುವ ದಂಡದ ಚಲನ್‌ಗಳನ್ನು ಪೊಲೀಸರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮುನ್ನ ಮ್ಯಾನುವಲ್ ಆಗಿ (ಮನುಷ್ಯರೇ ಖುದ್ದಾಗಿ) ಪರಿಶೀಲಿಸಬೇಕು ಎಂಬ ನಿಯಮವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಯಡವಟ್ಟುಗಳು ತಿದ್ದುಪಡಿಯಾಗದೆ ನೇರವಾಗಿ ಸಾರ್ವಜನಿಕರ ಕೈ ಸೇರುತ್ತಿವೆ. ಏತನ್ಮಧ್ಯೆ, ಸಿಕ್ಕಿಂನಲ್ಲೂ ಸಹ ಮಾರುತಿ ವ್ಯಾನ್ ಚಾಲಕನಿಗೆ ಇದೇ ರೀತಿ ಹೆಲ್ಮೆಟ್ ಧರಿಸಿಲ್ಲ ಎಂದು ₹1,000 ದಂಡ ವಿಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



