ಕೃಷ್ಣಾ ನೀರು ಬಿಡುಗಡೆಗೆ ಕರ್ನಾಟಕ ಸಮ್ಮತಿ: ಜುರಾಲಾ ಗೇಟ್ಸ್ ತೆರೆದ ತೆಲಂಗಾಣ; ಒಣಗುತ್ತಿದ್ದ 5.5 ಲಕ್ಷ ಎಕರೆ ಬೆಳೆಗೆ ಜೀವದಾನ..!
ಜುರಾಲಾ, ಭೀಮಾ, ನೆಟ್ಟಂಪಾಡು ಹಾಗೂ ಕೊಯಿಲ್‌ಸಾಗರ್ ಯೋಜನೆಗಳ ಅಡಿಯಲ್ಲಿ 5.5 ಲಕ್ಷ ಎಕರೆ ಪ್ರದೇಶದಲ್ಲಿರುವ ಬೆಳೆಗಳನ್ನು ರಕ್ಷಿಸಲು 30 ದಿನಗಳ ಕಾಲ ಪ್ರತಿದಿನ ನಿರಂತರವಾಗಿ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ತೆಲಂಗಾಣ ನಿಯೋಗ ಕರ್ನಾಟಕವನ್ನು ಕೋರಿತ್ತು.

ಹೈದರಾಬಾದ್/ಬೆಂಗಳೂರು: ತೀವ್ರ ರಾಜಕೀಯ ಕಸರತ್ತು ಹಾಗೂ ರೈತರ ಪ್ರತಿಭಟನೆಗಳ ಬೆನ್ನಲ್ಲೇ, ಕೃಷ್ಣಾ ನದಿ ಜಲಾನಯನ ಪ್ರದೇಶದಿಂದ ನೀರು ಬಿಡಲು ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇದರ ಬೆನ್ನಲ್ಲೇ ತೆಲಂಗಾಣದ ಅಧಿಕಾರಿಗಳು ಇಂದು (ಬುಧವಾರ) ಮುಂಜಾನೆ ಪ್ರಿಯದರ್ಶಿನಿ ಜುರಾಲಾ ಯೋಜನೆಯ ಗೇಟ್‌ಗಳನ್ನು ತೆರೆದು ರೈತರ ಜಮೀನುಗಳಿಗೆ ನೀರು ಹರಿಸಿದ್ದಾರೆ.
ಮಹಬೂಬ್‌ನಗರ ಜಿಲ್ಲೆಯಲ್ಲಿನ ಬೆಳೆಗಳನ್ನು ರಕ್ಷಿಸಲು ಕರ್ನಾಟಕದ ನಾರಾಯಣಪುರ ಯೋಜನೆಯಿಂದ ತೆಲಂಗಾಣಕ್ಕೆ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಕೋರಿ ತೆಲಂಗಾಣ ಸಚಿವರ ನಿಯೋಗ ಮಂಗಳವಾರ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿತ್ತು.
ಜುರಾಲಾ, ಭೀಮಾ, ನೆಟ್ಟಂಪಾಡು ಹಾಗೂ ಕೊಯಿಲ್‌ಸಾಗರ್ ಯೋಜನೆಗಳ ಅಡಿಯಲ್ಲಿ 5.5 ಲಕ್ಷ ಎಕರೆ ಪ್ರದೇಶದಲ್ಲಿರುವ ಬೆಳೆಗಳನ್ನು ರಕ್ಷಿಸಲು 30 ದಿನಗಳ ಕಾಲ ಪ್ರತಿದಿನ ನಿರಂತರವಾಗಿ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ತೆಲಂಗಾಣ ನಿಯೋಗ ಕರ್ನಾಟಕವನ್ನು ಕೋರಿತ್ತು. ತೆಲಂಗಾಣ ಸಚಿವರ ಮನವಿಗೆ ಕರ್ನಾಟಕ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಇದರ ಬೆನ್ನಲ್ಲೇ ತೆಲಂಗಾಣ ಪಶುಸಂಗೋಪನಾ ಸಚಿವ ವಕಿತಿ ಶ್ರೀಹರಿ ಬುಧವಾರ ಅಧಿಕಾರಿಗಳಿಗೆ ಜುರಾಲಾ ಯೋಜನೆಯಡಿ ರೈತರಿಗೆ ನೀರು ಬಿಡುಗಡೆ ಮಾಡುವಂತೆ ಸೂಚಿಸಿದರು. ಬಳಿಕ ಅಧಿಕಾರಿಗಳು ಜಲಾಶಯದ ಗೇಟ್‌ಗಳನ್ನು ತೆರೆದು ನೀರು ಹರಿಸಿದರು.
ಶ್ರೀಹರಿ ಅವರು ಪ್ರವಾಸೋದ್ಯಮ ಸಚಿವ ಜುಪಲ್ಲಿ ಕೃಷ್ಣರಾವ್ ಅವರೊಂದಿಗೆ ಮಂಗಳವಾರ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



