ಯುಜಿ ಸಿಇಟಿ ಸೀಟು ಹಂಚಿಕೆ ಮುಕ್ತಾಯ: ಉಳಿಕೆಯಾದ 24,283 ಎಂಜಿನಿಯರಿಂಗ್ ಸೀಟುಗಳು ಕಾಲೇಜು ಆಡಳಿತ ಮಂಡಳಿಗಳಿಗೆ ಹಸ್ತಾಂತರ
ಇಂಜಿನಿಯರಿಂಗ್ ಹೊರತುಪಡಿಸಿದರೆ, ನರ್ಸಿಂಗ್ ಕೋರ್ಸ್‌ನಲ್ಲಿ ಅತಿ ಹೆಚ್ಚು ಖಾಲಿ ಸೀಟುಗಳಿವೆ. ಒಟ್ಟು 36,238 ನರ್ಸಿಂಗ್ ಸೀಟುಗಳ ಪೈಕಿ ಕೇವಲ 13,407 ಸೀಟುಗಳು ಮಾತ್ರ ಹಂಚಿಕೆಯಾಗಿದ್ದು, 22,832 ಸೀಟುಗಳು ಹಂಚಿಕೆಯಾಗದೆ ಉಳಿದಿವೆ.

ಬೆಂಗಳೂರು: ಎಂಜಿನಿಯರಿಂಗ್ ಸಹಿತ ಯುಜಿ ಸಿಇಟಿ ಕೋರ್ಸ್‌ಗಳ 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣ ಆಗಿದ್ದು, ಒಪ್ಪಂದದ ಪ್ರಕಾರ ಉಳಿಕೆ ಸೀಟುಗಳನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಸ್ತಾಂತರ ಮಾಡಿದೆ.
ಸೀಟು ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ 11ರೊಳಗೆ ಸಂಬಂಧಿತ ಕಾಲೇಜುಗಳಿಗೆ ಹಾಜರಾಗಿ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ವಿವಿಧ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಒಟ್ಟು 24,283 ಸೀಟುಗಳು ಮತ್ತು ಆರ್ಕಿಟೆಕ್ಚರ್‌ನಲ್ಲಿ 252 ಸೀಟುಗಳು ಹಂಚಿಕೆಯಾಗದೆ ಉಳಿದಿವೆ.
ಇಂಜಿನಿಯರಿಂಗ್ ಹೊರತುಪಡಿಸಿದರೆ, ನರ್ಸಿಂಗ್ ಕೋರ್ಸ್‌ನಲ್ಲಿ ಅತಿ ಹೆಚ್ಚು ಖಾಲಿ ಸೀಟುಗಳಿವೆ. ಒಟ್ಟು 36,238 ನರ್ಸಿಂಗ್ ಸೀಟುಗಳ ಪೈಕಿ ಕೇವಲ 13,407 ಸೀಟುಗಳು ಮಾತ್ರ ಹಂಚಿಕೆಯಾಗಿದ್ದು, 22,832 ಸೀಟುಗಳು ಹಂಚಿಕೆಯಾಗದೆ ಉಳಿದಿವೆ," ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಎಂಜಿನಿಯರಿಂಗ್ ಕೋರ್ಸ್‌ಗಳ 24,283 ಸೀಟು, ಆರ್ಕಿಟೆಕ್ಚರ್ ಕೋರ್ಸ್ ನ 252 ಸೀಟು ಹಂಚಿಕೆಯಾಗಿಲ್ಲ. ಎಂಜಿನಿಯರಿಂಗ್ ಹೊರತುಪಡಿಸಿದರೆ ನರ್ಸಿಂಗ್‌ನಲ್ಲಿ ಹೆಚ್ಚು ಸೀಟು ಉಳಿದಿವೆ. 36,238 ಸೀಟುಗಳ ಪೈಕಿ 13,407 ಸೀಟು ಮಾತ್ರ ಹಂಚಿಕೆಯಾಗಿ, 22,832 ಸೀಟು ಉಳಿದಿವೆ.
ಪಶು ವೈದ್ಯಕೀಯ ಕೋರ್ಸ್‌ನ ಎಲ್ಲ 366 ಸೀಟು ಹಂಚಿಕೆಯಾಗಿವೆ. ಫಾರ್ಮಸಿ ಕೋರ್ಸ್‌ನ 489, ಬಿಪಿಟಿ- 22, ಕೃಷಿ ಮತ್ತು ಸಂಬಂಧಿತ ಕೋರ್ಸ್‌ಗಳ 20, ಬಿಎಸ್ಸಿ ಎಎಚ್‌ಎಸ್‌ನ 2,465 ಸೀಟು ಉಳಿದಿವೆ. ಯೋಗಾ ಮತ್ತು ನ್ಯಾಚು ರೋಪತಿ ಕೋರ್ಸ್‌ನ 520 ಸೀಟು ಗಳಲ್ಲಿ 214 ಸೀಟು ಉಳಿದಿವೆ.
ಸೀಟು ಹಂಚಿಕೆಯಾದವರಿಗೆ ಕಾಲೇಜಿಗೆ ಸೇರುವುದು ಕಡ್ಡಾಯವಾಗಿರುವುದರಿಂದ, ಎಲ್ಲಾ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ, ಸೀಟು ಹಂಚಿಕೆಯ ಎರಡನೇ ಸುತ್ತು ಪ್ರಸ್ತುತ ನಡೆಯುತ್ತಿದೆ," ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



