ರಾಜ್ಯ

ಹುಬ್ಬಳ್ಳಿ: 'ಗೌರಿ ಲಂಕೇಶ್' ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ!

ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಮಿತ್ ಬದ್ದಿ ಎಂಬುವವರು ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.

ಹುಬ್ಬಳ್ಳಿ: 'ಗೌರಿ ಲಂಕೇಶ್' ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ!
ಆರೋಪಿಗಳಿಂದ ಸನ್ಮಾನ ಸ್ವೀಕರಿಸಿದ ನೂತನ ಪೊಲೀಸ್ ಆಯುಕ್ತರು
Published On :

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಭೂಷಣ್ ಬೋರಸೆ ಅವರಿಗೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿ ಹಾಗೂ ಗಾಂಜಾ ಪ್ರಕರಣದ ಆರೋಪಿ ಸನ್ಮಾನ ಮಾಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಮಿತ್ ಬದ್ದಿ ಎಂಬುವವರು ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.

ಇದೇ ವೇಳೆ ಎನ್‌ಡಿಪಿಎಸ್‌ ಪ್ರಕರಣ(NDPS Case)ದಲ್ಲಿ ಆರೋಪಿ ಎನ್ನಲಾದ ಖೇತ್‌ಸಿಂಗ್ ರಾಜಪುರೋಹಿತ ಎಂಬುವವರು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡಿರುವ ಫೋಟೋಗಳು ಕೂಡಾ ವೈರಲ್ ಆಗಿವೆ.

ಈ ಮೊದಲು ಕಮಿಷನರ್ ಆಗಿದ್ದ ಎನ್‌ ಶಶಿಕುಮಾರ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು. ಅವರ ಸ್ಥಾನಕ್ಕೆ ನೂತನ ಆಯುಕ್ತರಾಗಿ ಭೂಷಣ್ ಬೋರಸೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಈ ಆರೋಪಿಗಳು ಪೊಲೀಸ್‌ ಆಯುಕ್ತರ ಕಚೇರಿಗೆ ಪ್ರವೇಶಿಸಿ ಸನ್ಮಾನ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಭೂಷಣ್ ಬೋರಸೆ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದೀಗ ಡ್ರಗ್ಸ್ ಪ್ರಕರಣದ ಆರೋಪಿಯಿಂದಲೇ ನೂತನ ಆಯುಕ್ತರಿಗೆ ಸನ್ಮಾನ ನಡೆದಿರುವ ಫೋಟೋಗಳು ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಪರಾಧ ಹಿನ್ನೆಲೆಯುಳ್ಲವರು ಪೊಲೀಸ್ ಕಚೇರಿ ಪ್ರವೇಶಿಸಲು, ಅದರಲ್ಲೂ ಕಮಿಷನರ್ ಬಳಿ ಬರಲು ಭಯ ಪಡುತ್ತಾರೆ. ಆದರೆ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರು ಪೊಲೀಸ್ ಕಚೇರಿಗೆ ಬಂದು ಕಮಿಷನರ್‌ಗೆ ಹೂಗುಚ್ಚ ನೀಡಿ ಸನ್ಮಾನಿಸುತ್ತಿರುವುದು ಅಚ್ಚರಿ ಹುಟ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.