ರಾಜ್ಯ

ಪ್ರದೋಷ್ ಮಾಫಿ ಸಾಕ್ಷಿ ಟೆನ್ಶನ್‌: ಕೋಪ, ಮಾನಸಿಕ ಒತ್ತಡ ತಣಿಸಿಕೊಳ್ಳಲು ಮಳೆಯಲ್ಲೇ ದರ್ಶನ್‌ ವಾಕಿಂಗ್‌!

ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿರುವ ಪ್ರದೋಷ್ ರಾವ್ ಅವರು ಸೋಮವಾರ ಮತ್ತು ಮಂಗಳವಾರ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿ, ತನ್ನ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್‌ನಲ್ಲಿ ದಾಖಲಿಸಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿ ಟೆನ್ಶನ್‌: ಕೋಪ, ಮಾನಸಿಕ ಒತ್ತಡ ತಣಿಸಿಕೊಳ್ಳಲು ಮಳೆಯಲ್ಲೇ ದರ್ಶನ್‌ ವಾಕಿಂಗ್‌!
ದರ್ಶನ್
Published On :

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರು ತಮ್ಮ ಹಳೆಯ ಸ್ನೇಹಿತ ಪ್ರದೋಷ್ ರಾವ್ ತನ್ನ ವಿರುದ್ಧವೇ ತಿರುಗಿಬಿದ್ದು ಮಾಫಿ ಸಾಕ್ಷಿ ಹೇಳುತ್ತಿದ್ದು, ಇದರಿಂದ ತೀವ್ರ ಆಕ್ರೋಶಗೊಂಡಿದ್ದಾರೆ.

ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿರುವ ಪ್ರದೋಷ್ ರಾವ್ ಅವರು ಸೋಮವಾರ ಮತ್ತು ಮಂಗಳವಾರ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿ, ತನ್ನ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್‌ನಲ್ಲಿ ದಾಖಲಿಸಿದ್ದಾರೆ. ಇದರಿಂದ ದರ್ಶನ್ ಅವರಿಗೆ ಭಾರೀ ಟೆನ್ಶನ್‌ ಆಗಿದೆ.

ಬುಧವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಿದ ದರ್ಶನ್, ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆಯಿಂದ ತೀವ್ರ ಬೇಸರ ಹಾಗೂ ಕೋಪಗೊಂಡಿದ್ದಾರೆ ಎನ್ನಲಾಗಿದೆ.

ವಿಚಾರಣೆ ಮುಗಿದ ಬಳಿಕ ತಮ್ಮ ಕ್ವಾರಂಟೈನ್ ಸೆಲ್ ಗೆ ತೆರಳಿದ ದರ್ಶನ್, ಬಳಿಕ ಜೋರು ಮಳೆಯಲ್ಲೇ ಜೈಲಿನ ಆವರಣದಲ್ಲಿ ಸಾಕಷ್ಟು ಹೊತ್ತು ವಾಕಿಂಗ್ ಮಾಡಿದ್ದಾರೆ. ಪ್ರದೋಷ್ ನೀಡಿದ ಮಾಫಿ ಸಾಕ್ಷಿ ಹೇಳಿಕೆಯಿಂದ ಉಂಟಾದ ಕೋಪ ಹಾಗೂ ಮಾನಸಿಕ ಒತ್ತಡವನ್ನು ತಣಿಸಿಕೊಳ್ಳಲು ಹೀಗೆ ಮಳೆಯಲ್ಲೇ ನೆನೆಯುತ್ತಾ ವಾಕಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ಈ ಮಾಫಿ ಸಾಕ್ಷಿ ವಿರುದ್ಧ ಎರಡೇರಡು ಬಾರಿ ಹೈಕೋರ್ಟ್ ಹಾಗೂ ವಿಚಾರಣಾ ಕೋರ್ಟ್ ಕದ ತಟ್ಟಿದ್ದ ನಟ ದರ್ಶನ್ ಅವರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಸಹ ಮೇಲ್ಮನವಿ ಸಲ್ಲಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಒಟ್ಟು 3 ಮೇಲ್ಮನವಿಗಳನ್ನು ದರ್ಶನ್ ಸಲ್ಲಿಸಿದ್ದಾರೆ.

ಇದೇ ವಾರ ದರ್ಶನ್ ಅರ್ಜಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮಾಫಿ ಸಾಕ್ಷಿ ಆದೇಶಕ್ಕೂ ಮುನ್ನ ಸಹ ಆರೋಪಿಯ ವಾದ ಕೇಳಬೇಕಿಲ್ಲ ಎಂದು ಹೈಕೋರ್ಟ್ ನೀಡಿರುವ ತೀರ್ಪುನ್ನು ಪ್ರಶ್ನಿಸಿ ದರ್ಶನ್ ಮೇಲ್ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.