ರಾಜ್ಯ

ಬೆಂಗಳೂರು: ಕುಸಿದ ಅಂತರ್ಜಲ ಮಟ್ಟ; ಸಾಂಪ್ರದಾಯಿಕ ಬಾವಿ ತೋಡುವವರಿಗೆ ಮತ್ತೆ ಹೆಚ್ಚಿದ ಬೇಡಿಕೆ!

28 ವರ್ಷಗಳಿಂದ ಬಾವಿ ತೋಡುವ ಕೆಲಸ ಮಾಡುವ ರಾಮಶಂಕರ್, ಕೆಲವು ಸ್ಥಳಗಳಲ್ಲಿ ನೀರಿನ ಮಟ್ಟ 20 ಅಡಿ ಆಳದಲ್ಲಿದೆ. ಇತರ ಸ್ಥಳಗಳಲ್ಲಿ, 10 ಅಡಿ ಆಳದಲ್ಲಿ ನೀರು ಸಿಗುತ್ತದೆ ಎಂದು ಹೇಳಿದರು.

ಬೆಂಗಳೂರು: ಕುಸಿದ ಅಂತರ್ಜಲ ಮಟ್ಟ; ಸಾಂಪ್ರದಾಯಿಕ ಬಾವಿ ತೋಡುವವರಿಗೆ ಮತ್ತೆ ಹೆಚ್ಚಿದ ಬೇಡಿಕೆ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಪೂರ್ವ ಮಾನ್ಸೂನ್ ಮಳೆ ಆರಂಭವಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ, ಸಾಂಪ್ರದಾಯಿಕ ಬಾವಿ ತೋಡುವವರಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ.

ಬಾವಿ ತೋಡುವವರು ಹೇಳುವಂತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೇಡಿಕೆ ಹೆಚ್ಚಾಗಿದೆ. ಹೂಳು ತೆಗೆಯಲು ಮತ್ತು ಆಳವಾದ ಬಾವಿಗಳನ್ನು ಅಗೆಯಲು ತಮ್ಮ ಹಳೆಯ ಗ್ರಾಹಕರು ಮಾತ್ರವಲ್ಲದೆ, ಬಾವಿಗಳನ್ನು ತೆಗೆಯಲು ಬಯಸುವ ಹೊಸ ಗ್ರಾಹಕರೂ ಸಹ ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದಿದ್ದಾರೆ.

28 ವರ್ಷಗಳಿಂದ ಬಾವಿ ತೋಡುವ ಕೆಲಸ ಮಾಡುವ ರಾಮಶಂಕರ್, ಕೆಲವು ಸ್ಥಳಗಳಲ್ಲಿ ನೀರಿನ ಮಟ್ಟ 20 ಅಡಿ ಆಳದಲ್ಲಿದೆ. ಇತರ ಸ್ಥಳಗಳಲ್ಲಿ, 10 ಅಡಿ ಆಳದಲ್ಲಿ ನೀರು ಸಿಗುತ್ತದೆ ಎಂದು ಹೇಳಿದರು. ನಾವು ಹೊಸ ಬಾವಿಯನ್ನು ಅಗೆಯುವ ಮೊದಲು ಸ್ಥಳ ಪರಿಶೀಲನೆ ಮಾಡುತ್ತೇವೆ, ಮಣ್ಣಿನ ಗುಣಮಟ್ಟವನ್ನು ನೋಡುತ್ತೇವೆ, ಹತ್ತಿರದ ಕೆರೆ ಚರಂಡಿ, ಕಣಿವೆ ಅಥವಾ ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇದೆಯೇ ಎಂದು ಪರಿಶೀಲಿಸುತ್ತೇವೆ.

ಭೂಮಿಯು ಒಣಗಿದ ಪ್ರದೇಶವಾಗಿದ್ದರೆ ಮತ್ತು ಹತ್ತಿರದಲ್ಲಿ ಅನೇಕ ಕಾಂಕ್ರೀಟ್ ಕಟ್ಟಡಗಳಿದ್ದರೇ, ನಾವು ನೀರಿಗಾಗಿ ಆಳವಾಗಿ ಅಗೆಯಬೇಕು, ಇಲ್ಲದಿದ್ದರೆ ಅದು ಅಷ್ಟು ಕಷ್ಟವಲ್ಲ ಎಂದು ಅವರು ಹೇಳಿದರು. ಹತ್ತು ವರ್ಷಗಳ ಹಿಂದೆ, ಬೋರ್‌ವೆಲ್‌ಗಳನ್ನು ಕೊರೆಯುತ್ತಿದ್ದರಿಂದ ನಮ್ಮ ವ್ಯವಹಾರವು ಬಹುತೇಕ ನಿಂತೇ ಹೋಗಿತ್ತು. ಆದರೆ ಈಗ ನೀರಿನ ಮಟ್ಟ ಕುಸಿದು ಅನೇಕ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ, ಅವುಗಳನ್ನು ಮರುಪೂರಣ ಮಾಡಲು ಬಾವಿ ತೋಡುವವರ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.