ರಾಜ್ಯ

ಶೇಣಿ ಗೋಪಾಲಕೃಷ್ಣ ಭಟ್ ರಂತಹ ಹಿರಿಯ ಕಲಾವಿದರು ಕೂಡ ಪ್ರೇಕ್ಷಕರ ಅಸಂಬದ್ಧ ವರ್ತನೆಗಳನ್ನು ಸಹಿಸುತ್ತಿರಲಿಲ್ಲ: ಉಜಿರೆ ಅಶೋಕ್ ಭಟ್

ಕೃಷ್ಣನ ಪಾತ್ರಧಾರಿ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಅವರು ರಂಗಸ್ಥಳದಿಂದ ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ಬೈದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ಯಕ್ಷಗಾನ ಪ್ರೇಮಿಗಳಿಂದ ಬಂದಿದೆ.

ಶೇಣಿ ಗೋಪಾಲಕೃಷ್ಣ ಭಟ್ ರಂತಹ ಹಿರಿಯ ಕಲಾವಿದರು ಕೂಡ ಪ್ರೇಕ್ಷಕರ ಅಸಂಬದ್ಧ ವರ್ತನೆಗಳನ್ನು ಸಹಿಸುತ್ತಿರಲಿಲ್ಲ: ಉಜಿರೆ ಅಶೋಕ್ ಭಟ್
ಕೃಷ್ಣನ ಪಾತ್ರಧಾರಿಯಾಗಿ ಉಜಿರೆ ಅಶೋಕ್ ಭಟ್
Published On :

ಬೆಳ್ತಂಗಡಿ: ಕುಂದಾಪುರದ ಹೆನ್ನಬೈಲು ಬಕ್ರ ಮನೆ ಎಂಬಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಿದ್ದ ವೇಳೆ ಪ್ರೇಕ್ಷಕರು ಶಿಳ್ಳೆ ಹಾಕಿದ್ದಕ್ಕೆ ಸಿಟ್ಟಿನಿಂದ ರಂಗಸ್ಥಳದಿಂದಲೇ ಕೃಷ್ಣನ ಪಾತ್ರಧಾರಿ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಅವರು ಬೈದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ಯಕ್ಷಗಾನ ಪ್ರೇಮಿಗಳಿಂದ ಬಂದಿದೆ.

ಈ ಬಗ್ಗೆ ಸ್ವತಃ ಉಜಿರೆ ಅಶೋಕ್ ಭಟ್ ಅವರೇ ಸಮಜಾಯಿಷಿ ನೀಡಿದ್ದಾರೆ. ಪ್ರೈಮರಿ, ಹೈಸ್ಕೂಲ್ ವಿದ್ಯಾರ್ಥಿಗಳಂತೆ ಕಾಣುತ್ತಿದ್ದ ಸುಮಾರು 10 ಮಂದಿ ಹುಡುಗರ ತಂಡ ಯಕ್ಷಗಾನ ಶುರು ಆದಾಗಿನಿಂದ ಅಂಗಡಿಯಲ್ಲಿ ಸಿಗುವ ಬಿಗಿಲು ಊದುತ್ತಿತ್ತು. ಆ ಶಬ್ಧ ಕಿರಿಕಿರಿ ಉಂಟುಮಾಡುತ್ತಿತ್ತು. ಕಲಾವಿದರು ಸಹಿಸಿಕೊಂಡಿದ್ದರು.

ಅತಿ ಎನಿಸಿದಾಗ, ನಾನು ಪ್ರೇಕ್ಷಕ ಹೇಗೆ ಇರಬೇಕೆಂದು ಬುದ್ಧಿ ಹೇಳಿದ್ದೇನೆ. ನಾನು ಮಾತ್ರ ಅಲ್ಲ. ಅಲ್ಲಿದ್ದ ಇತರ ಪ್ರೇಕ್ಷಕರೂ ಅವರಿಗೆ ಬೈದಿದ್ದರು. ಪ್ರೇಕ್ಷಕನಿಗೆ ಕಲಾವಿದನ ಅಭಿನಯ ಖುಷಿ ಆದಲ್ಲಿ ಆತ ನಿರ್ಗಮಿಸುವ ವೇಳೆ ಚಪ್ಪಾಳೆ ತಟ್ಟಬೇಕು, ವೇದಿಕೆಯಲ್ಲಿ ಇರುವಾಗ, ವೇದಿಕೆ ಏರುವಾಗ ಚಪ್ಪಾಳೆ, ಶಿಳ್ಳೆ ಹಾಕುವುದು ಸಮಂಜಸವಲ್ಲ. ಹಿಂದೆ ಶೇಣಿ ಗೋಪಾಲಕೃಷ್ಣ ಭಟ್ ಹಾಗೂ ಇತರ ಹಿರಿಯ ಕಲಾವಿದರು ಇಂತಹ ವರ್ತನೆ ವಿರುದ್ಧ ರಂಗಸ್ಥಳದಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.