ನಮ್ಮ ರಾಜಕೀಯ ಸಂಸ್ಕೃತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ; ದೇಶಕ್ಕೆ ಸೇವೆ ಮಾಡಿದವರು ತಲೆಬಾಗಬೇಕೆ? ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಫೋಟೋ!
ಭಾರತಕ್ಕೆ ಹೆಮ್ಮೆ ತಂದ ರಾಷ್ಟ್ರೀಯ ನಾಯಕ ವೆಂಕಟೇಶ್ ಪ್ರಸಾದ್, ಪಾಕಿಸ್ತಾನ ವಿರುದ್ಧದ ಅವರ ಅದ್ಭುತ ಆಟ ಇಂದಿಗೂ ನಮ್ಮ ನೆನಪಿನಲ್ಲಿ ಇದೆ, ಅಂಥವರು ಇಂದು ಒಬ್ಬ ಮುಖ್ಯಮಂತ್ರಿ ಮುಂದೆ ಕೈಮುಗಿದು ನಿಂತಿದ್ದಾರೆ.

ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಒಂದು ಫೋಟೋ ಸಾವಿರ ಮಾತುಗಳನ್ನು ಹೇಳುತ್ತದೆ. ಇದು ನಮ್ಮ ರಾಜಕೀಯ ಸಂಸ್ಕೃತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ತೋರಿಸುತ್ತದೆ. ಭಾರತಕ್ಕೆ ಹೆಮ್ಮೆ ತಂದ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಇಂದು ಒಬ್ಬ ಮುಖ್ಯಮಂತ್ರಿ ಮುಂದೆ ಕೈಮುಗಿದು ನಿಂತಿದ್ದಾರೆ ಏಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಭಾರತಕ್ಕೆ ಹೆಮ್ಮೆ ತಂದ ರಾಷ್ಟ್ರೀಯ ನಾಯಕ ವೆಂಕಟೇಶ್ ಪ್ರಸಾದ್, ಪಾಕಿಸ್ತಾನ ವಿರುದ್ಧದ ಅವರ ಅದ್ಭುತ ಆಟ ಇಂದಿಗೂ ನಮ್ಮ ನೆನಪಿನಲ್ಲಿ ಇದೆ, ಅಂಥವರು ಇಂದು ಒಬ್ಬ ಮುಖ್ಯಮಂತ್ರಿ ಮುಂದೆ ಕೈಮುಗಿದು ನಿಂತಿದ್ದಾರೆ. ಅವರು ತಪ್ಪು ಮಾಡಿಲ್ಲ. ತಮ್ಮ ಕೆಲಸವನ್ನು ಸರಿಯಾಗಿ ಮಾಡಿದದ್ದಕ್ಕೆ ಮಾತ್ರ ಈ ರೀತಿ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
ರಾಜಕಾರಣಿಗಳ ಅಹಂಕಾರಕ್ಕೆ ಧಕ್ಕೆ ಆಗಬಹುದು ಎಂದು ಊಹಿಸದೇ ಇದ್ದದ್ದಕ್ಕೆ. ಉಚಿತ ಸೌಲಭ್ಯ, ವಿಶೇಷ ಸವಲತ್ತುಗಳಿಗೆ ತಲೆಬಾಗದೆ ಇದ್ದದ್ದಕ್ಕೆ. ಇದು ದುಃಖಕರ ಸಂಗತಿ. ದೇಶಕ್ಕೆ ಸೇವೆ ಮಾಡಿದವರು ತಲೆಬಾಗಬೇಕಾದರೆ, ಅಧಿಕಾರದಲ್ಲಿರುವವರು ಹೊಣೆಗಾರಿಕೆಗೆ ಬದಲು ವಿಶೇಷ ಹಕ್ಕು ಕೇಳುತ್ತಿದ್ದರೆ, ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ.
ಇದು ಒಂದು ಘಟನೆ ಮಾತ್ರ ಅಲ್ಲ - ಇದು ದೊಡ್ಡ ಸಮಸ್ಯೆಯ ಲಕ್ಷಣ. ಅಧಿಕಾರವನ್ನು ಜವಾಬ್ದಾರಿಯಂತೆ ನೋಡದ ರಾಜಕೀಯ ಹೋಗಬೇಕು. ಅಹಂಕಾರಕ್ಕೆ ಮಣಿಯುವ ವ್ಯವಸ್ಥೆ ಬದಲಾಗಬೇಕು. ಹೊಸ ರಾಜಕೀಯ ಪೀಳಿಗೆ ಅಗತ್ಯವಾಗಿದೆ.
ಅಲ್ಲದೆ ಈ ಪರಿಸ್ಥಿತಿಯಿಂದ ನಾವು ಕಳವಳಗೊಳ್ಳದಿದ್ದರೆ, ಇನ್ನೇನು ಕಳವಳಗೊಳಿಸಲು ಸಾಧ್ಯ. ಭಾರತ ಇನ್ನಷ್ಟು ಉತ್ತಮ ಸಮಾಜಕ್ಕೆ ಅರ್ಹವಾಗಿದೆ. ನಾನು ವೆಂಕಟೇಶ್ ಪ್ರಸಾದ್ ಅವರ ಜೊತೆ ಇದ್ದೇನೆ - ಲಕ್ಷಾಂತರ ಜನರೂ ಹಾಗೆಯೇ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



