ವೆಂಕಟೇಶ್ ಪ್ರಸಾದ್

ನಮ್ಮ ರಾಜಕೀಯ ಸಂಸ್ಕೃತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ; ದೇಶಕ್ಕೆ ಸೇವೆ ಮಾಡಿದವರು ತಲೆಬಾಗಬೇಕೆ? ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಫೋಟೋ!
ಭಾರತಕ್ಕೆ ಹೆಮ್ಮೆ ತಂದ ರಾಷ್ಟ್ರೀಯ ನಾಯಕ ವೆಂಕಟೇಶ್ ಪ್ರಸಾದ್, ಪಾಕಿಸ್ತಾನ ವಿರುದ್ಧದ ಅವರ ಅದ್ಭುತ ಆಟ ಇಂದಿಗೂ ನಮ್ಮ ನೆನಪಿನಲ್ಲಿ ಇದೆ, ಅಂಥವರು ಇಂದು ಒಬ್ಬ ಮುಖ್ಯಮಂತ್ರಿ ಮುಂದೆ ಕೈಮುಗಿದು ನಿಂತಿದ್ದಾರೆ.
IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ; ಪರಮೇಶ್ವರ ಜತೆ ಸಭೆ ಸಕಾರಾತ್ಮಕ- ಸರ್ಕಾರದ ಅಂಗಳದಲ್ಲಿ ಚೆಂಡು!
ಅವರು (RCB) ಕಳೆದ ಬಾರಿ ಗೆದ್ದ ಕಾರಣ, ಅವರು ಅಲ್ಲಿ (ಬೆಂಗಳೂರಿನಲ್ಲಿ) ಉದ್ಘಾಟನಾ ಪಂದ್ಯವನ್ನು ಆಯೋಜಿಸಲು ಬಯಸುತ್ತಾರೆ. ಆದರೆ, ಅನುಮತಿಸಬೇಕೆ ಅಥವಾ ಬೇಡವೇ ಎಂಬುದನ್ನು ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕು.
'ಕೆಲವು ಗ್ರೇ ಏರಿಯಾಗಳಿವೆ': ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜಿಸುವ ಬಗ್ಗೆ ಮೌನ ಮುರಿದ RCB!
ಕಳೆದ ವರ್ಷ ಜೂನ್ 4 ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವಿಗೀಡಾದ ನಂತರ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ನಾವು ರೆಡಿ, ಆದರೆ RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್
ಕಾಲ್ತುಳಿತ ಪ್ರಕರಣ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಆಡುವಂತೆ ಮಾಡಲು ನಾವು ಹರಸಾಹಸ ಪಡುತ್ತಿದ್ದೇವೆ. ಆದರೆ RCB ಮಾತ್ರ ಹಿಂಜರಿಯುತ್ತಿದೆ ಎಂದು ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಉದ್ಘಾಟನಾ ಪಂದ್ಯ: ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮತ್ತೆ ಆಯೋಜಿಸುವ ವಾತಾವರಣ ನಿರ್ಮಿಸುವುದು ಸುಲಭವಿರಲಿಲ್ಲ.

KSCA ಗೆ ಹೊಸ ಸದಸ್ಯರ ಸೇರ್ಪಡೆ: ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ- ವೆಂಕಟೇಶ್ ಪ್ರಸಾದ್
ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಸ್ಥಗಿತಗೊಂಡಿರುವ ಕ್ಲಬ್‌ಹೌಸ್ ನಿರ್ಮಾಣ ಯೋಜನೆಗಳ ಕುರಿತು ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.

KSCA ಚುನಾವಣೆ: 191 ಮತಗಳ ಅಂತರದಿಂದ ಗೆದ್ದ ವೆಂಕಟೇಶ್ ಪ್ರಸಾದ್; ನೂತನ ಅಧ್ಯಕ್ಷರಾಗಿ ಆಯ್ಕೆ
ವೆಂಕಟೇಶ್ ಪ್ರಸಾದ್‌ಗೆ ಒಟ್ಟು 749 ಮತಗಳು ದೊರೆತರೆ, ಬ್ರಿಜೇಶ್ ಪಾಟೀಲ್ ಬಣದ ಶಾಂತಕುಮಾರ್‌ಗೆ 558 ಮತಗಳು ಲಭಿಸಿವೆ.

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!
ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು KSCA ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರೋಧಿ ಬಣದ ಅಭ್ಯರ್ಥಿ ಶಾಂತಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

KSCA ಚುನಾವಣೆ ಎರಡನೇ ಬಾರಿ ಮುಂದೂಡಿಕೆ: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಆಕ್ಷೇಪ
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವೆಂಕಟೇಶ್ ಪ್ರಸಾದ್ ಅವರ ತಂಡದ ವಿನಯ್ ಮೃತ್ಯುಂಜಯ, ಚುನಾವಣಾಧಿಕಾರಿ ನವೆಂಬರ್ 14 ಮತ್ತು 15 ರಂದು ಪತ್ರಗಳ ಮೂಲಕ ವ್ಯವಸ್ಥಾಪಕ ಸಮಿತಿಯೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದರು.

