ವಿಶ್ವದ ಅತಿದೊಡ್ಡ NGO ಎಂದು ಹೇಳಿಕೊಳ್ಳುವ RSS ವಿವರ ನೀಡಲು ನಿಮಗೇನು ಸಮಸ್ಯೆ: ಬಿ.ಕೆ ಹರಿಪ್ರಸಾದ್; Video
ಯಾವುದೇ ಸಂಘಟನೆ ಸಾರ್ವಜನಿಕವಾಗಿ ಕಾರ್ಯನಿರ್ವಹಿಸಲು ಬಯಸಿದರೆ ಅದು ನೋಂದಾಯಿತವಾಗಿರಬೇಕು, ಅದರ ಹಣಕಾಸು ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಬಿ ಕೆ ಹರಿಪ್ರಸಾದ್ ಬೆಂಬಲಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ನೋಂದಣಿ ಕುರಿತು ಸಂವಿಧಾನದ ಚೌಕಟ್ಟಿನೊಳಗೆ ಪ್ರಶ್ನೆ ಎತ್ತಿದ್ದಾರೆ. ರಾಷ್ಟ್ರಧ್ವಜವಾದ ತ್ರಿವರ್ಣ ಧ್ವಜಕ್ಕೆ ಗೌರವ ತೋರದಿರುವುದು ರಾಷ್ಟ್ರವಿರೋಧಿ ಕೃತ್ಯವಾಗುತ್ತದೆ. ಸಂವಿಧಾನಕ್ಕೆ ಗೌರವ ನೀಡದಿರುವುದೂ ರಾಷ್ಟ್ರವಿರೋಧಿ ಕೃತ್ಯವೇ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ ಎಸ್ ಎಸ್ ಸಂಘಟನೆಯ ಸದಸ್ಯರು ಯಾರು ಎಂಬುದರ ಸಂಪೂರ್ಣ ವಿವರವನ್ನು ನೀಡಿ. ನೀವು ಅದನ್ನು ವಿಶ್ವದ ಅತಿದೊಡ್ಡ ಎನ್‌ಜಿಒ ಎಂದು ಕರೆಯುತ್ತೀರಿ; ಹಾಗಾದರೆ ಅದರ ಸದಸ್ಯರು ಯಾರು ಎಂಬುದನ್ನೂ ಬಹಿರಂಗಪಡಿಸಬಾರದೇ? ಈ ಶ್ರೀಮಂತ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ? ಆ ಹಣವನ್ನು ಹೇಗೆ ಬಳಸಲಾಗುತ್ತಿದೆ? ಅದು ಜನಸೇವೆಗೆ ಬಳಸಲಾಗುತ್ತಿದೆಯೇ ಅಥವಾ ನಿಮ್ಮ ಸ್ವಂತ ಲಾಭಕ್ಕಾಗಿ ಬಳಸಲಾಗುತ್ತಿದೆಯೇ? ಈ ಲೆಕ್ಕಪತ್ರಗಳು ಮತ್ತು ವಿವರಗಳನ್ನು ಕೇಳುವುದು ಸಂಪೂರ್ಣವಾಗಿ ಸಂವಿಧಾನದ ವಿಧಿ-ವಿಧಾನಗಳ ವ್ಯಾಪ್ತಿಯಲ್ಲಿದೆ ಎಂದರು.
ಯಾವುದೇ ಸಂಘಟನೆ ಸಾರ್ವಜನಿಕವಾಗಿ ಕಾರ್ಯನಿರ್ವಹಿಸಲು ಬಯಸಿದರೆ ಅದು ನೋಂದಾಯಿತವಾಗಿರಬೇಕು, ಅದರ ಹಣಕಾಸು ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಬಿ ಕೆ ಹರಿಪ್ರಸಾದ್ ಬೆಂಬಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



