ರಾಜ್ಯ

ಬೆಂಗಳೂರು-ತುಮಕೂರು RRTS ಯೋಜನೆ: ಮೆಟ್ರೋ ವಿಸ್ತರಣೆ ವಿಷಯ ಮತ್ತೆ ಮುನ್ನಲೆಗೆ; ಚರ್ಚೆ

RRTS ದೀರ್ಘ ಅಂತರ-ನಗರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಮೊಬಿಲಿಟಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಮೆಟ್ರೋ ಕಾರಿಡಾರ್ ವಿಸ್ತರಿಸುವುದಕ್ಕಿಂತ ಇದು ಹೆಚ್ಚು ಪರಿಣಾಮಕಾರಿ ಪರಿಹಾರವಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು.

ಬೆಂಗಳೂರು-ತುಮಕೂರು RRTS ಯೋಜನೆ: ಮೆಟ್ರೋ ವಿಸ್ತರಣೆ ವಿಷಯ ಮತ್ತೆ ಮುನ್ನಲೆಗೆ; ಚರ್ಚೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ನಡುವೆ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಪರಿಚಯಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯು ತುಮಕೂರು ನಗರಕ್ಕೆ ಯೋಜಿತ ಮೆಟ್ರೋ ವಿಸ್ತರಣೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

RRTS ದೀರ್ಘ ಅಂತರ-ನಗರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಮೊಬಿಲಿಟಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಮೆಟ್ರೋ ಕಾರಿಡಾರ್ ವಿಸ್ತರಿಸುವುದಕ್ಕಿಂತ ಇದು ಹೆಚ್ಚು ಪರಿಣಾಮಕಾರಿ ಪರಿಹಾರವಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು.

TNIE ಜೊತೆ ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಆಶಿಶ್ ವರ್ಮಾ, ವಿವಿಧ ಸಂದರ್ಭಗಳಲ್ಲಿ ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅತ್ಯುತ್ತಮಗೊಳಿಸುವುದು ವ್ಯವಸ್ಥೆಯಯಲ್ಲಿ ಪ್ರಮುಖವಾಗಿದೆ.

ಅನೇಕ ನಿಲ್ದಾಣಗಳ ಪ್ರವೇಶದ ಅಗತ್ಯವಿರುವ ನಗರ ಕಾರಿಡಾರ್‌ಗಳಿಗೆ ಮೆಟ್ರೋ ಅತ್ಯುತ್ತಮವಾಗಿದ್ದರೂ, ಬೆಂಗಳೂರಿನಿಂದ ತುಮಕೂರಿನಂತಹ ಉದ್ದದ ಕಾರಿಡಾರ್‌ಗಳು RRTS ಗೆ ಹೆಚ್ಚು ಸೂಕ್ತವಾಗಿವೆ, ಇದು ಪ್ರಯಾಣಿಕರ ಪ್ರಯಾಣದ ಸಮಯವನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ” ಎಂದು ನಗರ ಚಲನಶೀಲತೆ ತಜ್ಞ ಸಂಜೀವ್ ದ್ಯಾಮನ್ವರ್ ತಿಳಿಸಿದ್ದಾರೆ

ಆರ್‌ಆರ್‌ಟಿಎಸ್ 50-100 ಕಿ.ಮೀ ದೂರದ ಅಂತರವಿರುವ ನಗರ ಪ್ರಯಾಣಕ್ಕಾಗಿ ಉದ್ದೇಶಿಸಲಾಗಿದೆ, ಇದು ಗಂಟೆಗೆ 120 ಕಿ.ಮೀ ವೇಗ, ಕಡಿಮೆ ನಿಲ್ದಾಣಗಳು, ಹೆಚ್ಚಿನ ಆಸನಗಳು, ಲಗೇಜ್ ಸ್ಥಳ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ನೀಡುತ್ತದೆ ಎಂದು ಅವರು ವಿವರ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.