ಬೆಂಗಳೂರು: Ice cream ಕೇಳಿದ್ದಕ್ಕಾಗಿ ಬಾಲಕಿ ಕೊಲೆ? ತಲೆಮರೆಸಿಕೊಂಡಿದ್ದ ವಕೀಲೆ ಬಂಧನ; ಲಿವ್ ಇನ್ ಪಾರ್ಟ್ನರ್ ಬಿಚ್ಚಿಟ್ಟ ರಹಸ್ಯ!
ಕೊಟ್ಟಐಸ್ಕ್ರೀಂ ಬೇಡವೆಂದು ಬೇರೆ ಫ್ಲೇವರ್ ತಂದುಕೊಡುವಂತೆ ಹಠ ಹಿಡಿದಿತ್ತು. ಆಗ ಆರೋಪಿಯು ಕೋಪಗೊಂಡು ಮಗುವಿನ ಹೊಟ್ಟೆಗೆ ಹೊಡೆದಿದ್ದ. ನೋವು ತಾಳದೆ ಅಳುತ್ತಿದ್ದಂತೆ ಉಸಿರುಗಟ್ಟಿಸಿ, ಕೊಲೆ ಮಾಡಿ ಕಾರಿನ ಹಿಂಭಾಗದ ಸೀಟಿನಲ್ಲಿ ಮಲಗಿಸಿದ್ದ.

ಬೆಂಗಳೂರು: ತನ್ನ ಐದೂವರೆ ವರ್ಷದ ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ವಕೀಲೆ ಪ್ರಿಯಾಂಕಾ (44) ಅವರನ್ನು ಗುರುವಾರ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 24ರಂದು ಆರೋಪಿ ಹಾಗೂ ಪ್ರಿಯಕರ ಕಾರಿನಲ್ಲಿ ಹೊರ ಹೋಗಿದ್ದ ವೇಳೆ ಮಗು ಐಸ್ ಕ್ರೀಂ ಕೇಳಿತ್ತು. ಕೊಟ್ಟಐಸ್ಕ್ರೀಂ ಬೇಡವೆಂದು ಬೇರೆ ಫ್ಲೇವರ್ ತಂದುಕೊಡುವಂತೆ ಹಠ ಹಿಡಿದಿತ್ತು. ಆಗ ಆರೋಪಿಯು ಕೋಪಗೊಂಡು ಮಗುವಿನ ಹೊಟ್ಟೆಗೆ ಹೊಡೆದಿದ್ದ. ನೋವು ತಾಳದೆ ಅಳುತ್ತಿದ್ದಂತೆ ಉಸಿರುಗಟ್ಟಿಸಿ, ಕೊಲೆ ಮಾಡಿ ಕಾರಿನ ಹಿಂಭಾಗದ ಸೀಟಿನಲ್ಲಿ ಮಲಗಿಸಿದ್ದ ಎಂದು ಆರೋಪಿ ಮೋಹನ್ ತಿಳಿಸಿದ್ದಾನೆ.
ಆರೋಪಿ ತಾಯಿ ಪ್ರಿಯಾಂಕಾ ಮತ್ತು ಅವರ ಲಿವ್-ಇನ್ ಪಾರ್ಟ್ನರ್ ರಿಯಲ್ ಎಸ್ಟೇಟ್ ಡೆವಲಪರ್ ಮೋಹನ್ ಜಿ ಮಹಾಲಿಂಗಪ್ಪ (40). ಬಾಲಕಿ ಪಿ ವೆನ್ನೆಲಾ ವಾಸಿಸುತ್ತಿದ್ದರು. ದಾವಣಗೆರೆಯಲ್ಲಿ ಖಾಸಗಿ ಶಾಲೆಯ ಮಾಲೀಕರಾಗಿರುವ ಪ್ರಿಯಾಂಕಾ ಮತ್ತು ಅವರ ಪತಿ ಪ್ರವೀಣ್ ಇತ್ತೀಚೆಗೆ ಬೇರ್ಪಟ್ಟಿದ್ದರು. ಅವರ ಹಿರಿಯ ಮಗಳು ಪ್ರವೀಣ್ ಜೊತೆ ವಾಸಿಸುತ್ತಿದ್ದಾರೆ.
ಪ್ರಿಯಾಂಕಾ ವಿರುದ್ಧ ಎಫ್ಐಆರ್ ದಾಖಲಾದ ನಂತರ ಆಕೆ ತಲೆಮರೆಸಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಟಿಎನ್ಐಇಗೆ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಆಕೆಯನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಯಿತು. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಹೆಚ್ಚಿನ ತನಿಖೆಗಾಗಿ ಆಕೆಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಿಯಾಂಕಾ ತನ್ನ ಫೋನ್ ಮತ್ತು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಬಳಸುವುದನ್ನು ನಿಲ್ಲಿಸಿದ್ದಳು. ಅವಳು ಮೋಹನ್ನ ಸ್ನೇಹಿತನ ಒಡೆತನದ ಫಾರ್ಮ್ಹೌಸ್ನಲ್ಲಿ ವಾಸಿಸುತ್ತಿದ್ದಳು.
10 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಮೋಹನ್, ಮಾರ್ಚ್ 24 ರ ರಾತ್ರಿ, ಪ್ರಿಯಾಂಕಾ ಇಂದಿರಾನಗರ ಬಳಿ ಶಾಪಿಂಗ್ಗೆ ಹೋಗಿದ್ದಾಗ, ವೆನ್ನೆಲಾ ಜೊತೆ ಕಾರಿನಲ್ಲಿದ್ದ ಎಂದು ಬಹಿರಂಗಪಡಿಸಿದ್ದಾನೆ ಎಂದು ವರದಿಯಾಗಿದೆ. ಮಗು ಐಸ್ ಕ್ರೀಮ್ ಕೇಳಿತು. ಈ ವೇಳೆ ನನಗಾಗಿ ಒಂದು ಐಸ್ ಕ್ರೀಮಿ ಖರೀದಿಸಿದ್ದೆ. ತಾನು ಖರೀದಿಸಿದ ಐಸ್ ಕ್ರೀಮ್ ನಿರಾಕರಿಸಿ ಬೇರೊಂದ್ಪ ಫ್ಲೇವರ್ ಐಸ್ ಕ್ರೀಮ್ ಗಾಗಿ ಒತ್ತಾಯಿಸಿದಾಗ, ಅವನು ಅವಳ ಹೊಟ್ಟೆಯ ಮೇಲೆ ಹಲ್ಲೆ ಮಾಡಿದನು ಎಂದು ಆರೋಪಿಸಲಾಗಿದೆ. ಮಗು ಜೋರಾಗಿ ಅಳಲು ಪ್ರಾರಂಭಿಸಿದಾಗ, ಅವನು ಅವಳ ಬಾಯಿ ಮತ್ತು ಮೂಗನ್ನು ಮುಚ್ಚಿದ್ದಾನೆ, ಇದರಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.
ಪ್ರಮುಖ ಆರೋಪಿ ಪ್ರಿಯಾಂಕಾ ಕೊಲೆಯಲ್ಲಿ ತನ್ನ ಪಾತ್ರವನ್ನು ಇನ್ನೂ ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳ ಹೇಳಿಕೆಗಳನ್ನು ಹೋಲಿಕೆ ಮಾಡಿದ ನಂತರವೇ ಅವರು ಕೊಲೆ ಮತ್ತು ಸಾಕ್ಷ್ಯಗಳ ನಾಶದ ಸ್ಪಷ್ಟ ಚಿತ್ರಣವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಅಪರಾಧವನ್ನು ಮುಚ್ಚಿಡಲು, ಪ್ರಿಯಾಂಕಾ ತನ್ನ ಕುಟುಂಬ ಸದಸ್ಯರಿಗೆ ಘಟನೆಗಳ ಎರಡು ವಿಭಿನ್ನ ಹೇಳಿಕೆ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಮಗು ಊಟ ತಿಂದು ಮಲಗಿತ್ತು, ಮರುದಿನ ಬೆಳಿಗ್ಗೆ ಅವಳು ಸತ್ತಿದ್ದಾಳೆ ಎಂದು ಅವಳು ಹೇಳಿಕೊಂಡಳು. ಇನ್ನೊಮ್ಮೆ ತಾನು ಮತ್ತು ಮೋಹನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಕೋಲಾರದ ರೆಸ್ಟೋರೆಂಟ್ಗೆ ಹೋಗಿದ್ದೆವು ಮತ್ತು ವೆನ್ನೆಲಾಳನ್ನು ಕಾರಿನೊಳಗೆ
ಏರ್ ಕಂಡಿಷನರ್ ಆನ್ ಮಾಡಿ ಮಲಗಿಸಿದ್ದೆವು ಎಂದು ಹೇಳಿದ್ದಾಳೆ. ನಂತರ, ಅವರು ಮಗುವನ್ನು ಮನೆಗೆ ಕರೆದೊಯ್ದು ಮಲಗಿಸಿದರು, ಆದರೆ ಮರುದಿನ ಬೆಳಿಗ್ಗೆ ಅವಳು ಮೃತಪಟ್ಟಿರುವುದು ಕಂಡುಬಂದಿತು ಎಂದು ಹೇಳಿದ್ದಾರೆ. ಮಾರನೇ ದಿನ ಮಗು ಮೃತಪಟ್ಟಿರುವ ವಿಚಾರ ಪ್ರಿಯಾಂಕಾ ಮೊದಲ ಪತಿ ಪ್ರವೀಣ್ ಗೆ ಗೊತ್ತಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಆರೋಪಿಗಳಿಬ್ಬರೂ ನೀಡಿದ್ದ ಹೇಳಿಕೆ ಅನುಮಾನ ಮೂಡಿಸಿತ್ತು. ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ವರದಿ ನೀಡಿದ್ದರೂ
ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಆರೋಪಿಯ ಪತಿ ಪ್ರವೀಣ್ ವಿದೇಶದಲ್ಲಿರುವ ತನ್ನ ಸಹೋದರಿ, ಮಕ್ಕಳ ವೈದ್ಯೆಗೆ ವರದಿ ಕಳುಹಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದರು.ಸಹೋದರಿಯು ಲೋಕಾಯುಕ್ತ ಐಜಿಪಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅದಕ್ಕೆ ಪೂರಕವಾಗಿ ಪ್ರವೀಣ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




