ಸಂಪ್ರದಾಯಕ್ಕೆ CM ಬ್ರೇಕ್: ರಾಜ್ಯದ ಸರ್ಕಾರಿ ಸಿಬ್ಬಂದಿಗಳೊಂದಿಗೆ ಡಿ.ಕೆ ಶಿವಕುಮಾರ್ ನೇರ ಸಂವಾದ
ಸಿಎಂ ಮತ್ತು ನೌಕರರ ನಡುವಿನ ನೇರ ವೀಡಿಯೊ ಸಂವಹನಕ್ಕೆ ಅನುಕೂಲವಾಗುವಂತೆ ಆಡಿಯೋ-ವಿಶುವಲ್ ಮೂಲಸೌಕರ್ಯ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಸ್ಥಳಗಳನ್ನು ಗುರುತಿಸಲು ಸೂಚಿಸಿದೆ.

ಬೆಂಗಳೂರು: ಆಡಳಿತಾತ್ಮಕವಾಗಿ ಮಹತ್ವಾಕಾಂಕ್ಷೆಯ ಕಾರ್ಯತಂತ್ರದಲ್ಲಿ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಂಪ್ರದಾಯಿಕ ಅಧಿಕಾರಶಾಹಿ ಶ್ರೇಣಿಯನ್ನು ಬಿಟ್ಟು ರಾಜ್ಯಾದ್ಯಂತ ಸರ್ಕಾರಿ ನೌಕರರೊಂದಿಗೆ ನೇರವಾಗಿ ಸಂವಹನ ನಡೆಸಲು ನಿರ್ಧರಿಸಿದ್ದಾರೆ.
ಜುಲೈ 28 ರಂದು ಹೊರಡಿಸಲಾದ ಸರ್ಕಾರಿ ಸುತ್ತೋಲೆಯು ಜಿಲ್ಲಾಡಳಿತಗಳಿಗೆ ಸಿಎಂ ಮತ್ತು ನೌಕರರ ನಡುವಿನ ನೇರ ವೀಡಿಯೊ ಸಂವಹನಕ್ಕೆ ಅನುಕೂಲವಾಗುವಂತೆ ಆಡಿಯೋ-ವಿಶುವಲ್ ಮೂಲಸೌಕರ್ಯ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಸ್ಥಳಗಳನ್ನು ಗುರುತಿಸಲು ಸೂಚಿಸಿದೆ.
ಜಿಲ್ಲಾ ಮಟ್ಟದಲ್ಲಿ 500 ರಿಂದ 1,000 ಉದ್ಯೋಗಿಗಳು, ತಾಲ್ಲೂಕು ಮಟ್ಟದಲ್ಲಿ 200 ರಿಂದ 500 ಉದ್ಯೋಗಿಗಳು ಮತ್ತು ಹೋಬಳಿ ಮಟ್ಟದಲ್ಲಿ 100 ರಿಂದ 200 ಉದ್ಯೋಗಿಗಳನ್ನು ಒಳಗೊಂಡ ಸಭೆಗಳಿಗೆ ವ್ಯವಸ್ಥೆ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನೋಡಲ್ ಅಧಿಕಾರಿಗಳನ್ನು ನೇಮಿಸಲು ಮತ್ತು ವಿವರವಾದ ವರದಿಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪ್ರತಿ ಜಿಲ್ಲೆಯ ಕನಿಷ್ಠ ಒಂದು ತಾಲ್ಲೂಕು ಮತ್ತು ಒಂದು ಹೋಬಳಿಯಲ್ಲಿ ವೈಯಕ್ತಿಕವಾಗಿ ಸಂವಾದ ನಡೆಸಲು ಮುಖ್ಯಮಂತ್ರಿ ಯೋಜಿಸಿದ್ದಾರೆ. ಅಧಿಕಾರಶಾಹಿ ವಿಳಂಬ, ಕೆಂಪು ಟೇಪ್ ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿನ ಅಂತರಗಳ ಕುರಿತು ಟೀಕೆಗಳ ನಡುವೆ ಈ ನಿರ್ಧಾರ ಕೈಗೊಂಡಿದ್ದಾರೆ. ನೌಕರರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ, ಅಡಚಣೆಗಳನ್ನು ಗುರುತಿಸಲು, ಸಮನ್ವಯ ಸುಧಾರಿಸಲು, ಹೊಣೆಗಾರಿಕೆ ಹೆಚ್ಚಿಸಲು ಮತ್ತು ಕಾರ್ಯಕ್ರಮಗಳನ್ನು ತಲುಪಿಸಲು ಆಡಳಿತ ಯಂತ್ರವನ್ನು ಪ್ರೇರೇಪಿಸಲು ಸರ್ಕಾರ ಆಶಿಸುತ್ತದೆ.
ರಾಜಕೀಯ ವೀಕ್ಷಕರು ಈ ನಿರ್ಧಾರವು ನಿಯಮಿತ ಆಡಳಿತಾತ್ಮಕ ಪರಿಶೀಲನೆಯನ್ನು ಮೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಡಿಕೆ ಶಿವಕುಮಾರ್ ಒಬ್ಬ ಪ್ರಾಯೋಗಿಕ ಆಡಳಿತಗಾರ ಎಂದು ನಿರೂಪಿಸಿಕೊಳ್ಳು ಪ್ರಯತ್ನದ ಪ್ರತಿಬಿಂಬವಾಗಿದೆ ಎಂದಿದ್ದಾರೆ.
ಆದರೆ ಈ ಯೋಜನೆ ಆಡಳಿತದಲ್ಲಿ ಸ್ಪಷ್ಟ ಸುಧಾರಣೆಗಳಾಗಿ ಪರಿವರ್ತನೆಯಾಗುತ್ತದೆಯೇ ಎಂಬುದು, ಈ ಸಂವಾದಗಳ ಸಮಯದಲ್ಲಿ ಸ್ವೀಕರಿಸಿದ ಪ್ರತಿಕ್ರಿಯೆಯ ಮೇಲೆ ಕಾರ್ಯನಿರ್ವಹಿಸಲು ಸರ್ಕಾರ ಹೊಂದಿರುವ ಇಚ್ಛಾಶಕ್ತಿ ಮೇಲೆ ಅವಲಂಬಿಸಿರುತ್ತದೆ.
ರಾಜ್ಯ ಮತ್ತು ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಮಾಜಿ ಹಿರಿಯ ಐಎಎಸ್ ಅಧಿಕಾರಿ ಡಿವಿ ಪ್ರಸಾದ್, "ಇದು ಸ್ವಾಗತಾರ್ಹ ಹೆಜ್ಜೆ. ಕ್ಷೇತ್ರ ಅಧಿಕಾರಿಗಳಿಗೆ ನೇರ ಧ್ವನಿ ನೀಡುವ ಮೂಲಕ, ಸಿಎಂ ಅವರ ಈ ಉಪಕ್ರಮವು ನಾಗರಿಕರ ಮೇಲೆ ಮತ್ತೆ ಗಮನ ಹರಿಸುತ್ತದೆ. ಇದರಿಂದ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು ಎಂದಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆಯನ್ನು ಡಿಕೆಎಸ್ ಖಂಡನೆ
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಖಂಡಿಸಿದ್ದಾರೆ, ಇದು ಕೇಂದ್ರದಿಂದ ವಿವರಣೆಯನ್ನು ಕೋರಿದ ಅಭೂತಪೂರ್ವ ಮತ್ತು ತೀವ್ರ ಗೊಂದಲದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಪೊಲೀಸ್ ಕ್ರಮದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಕ್ಕೆ ಸಂಬಂಧಿಸಿದಂತೆ, ಡಿಕೆಎಸ್ ತಮ್ಮ ರಾಜಕೀಯ ಜೀವನದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್‌ಗಳನ್ನು ಬಳಸುವುದನ್ನು ನೋಡುತ್ತಿರುವುದು ಇದೇ ಮೊದಲು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



