ರಾಜಕೀಯ

ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ100 ರ ಸಂಭ್ರಮ: KPCC ಅಧ್ಯಕ್ಷರ ಅಸಮಾಧಾನಕ್ಕೆ CM ಸ್ಪಷ್ಟನೆ; ಹೈಕಮಾಂಡ್ ಕದ ತಟ್ಟಿದ್ರಾ ಹರಿಪ್ರಸಾದ್?

ಬಿ.ಕೆ.ಹರಿಪ್ರಸಾದ್​​ಗೆ ಆಹ್ವಾನ ನೀಡಿಲ್ಲ ಎಂದು ಯಾರು ಹೇಳಿದ್ದು, ಹರಿಪ್ರಸಾದ್ ಹೇಳಿದರೇ? ಸರ್ಕಾರವು ಎಲ್ಲಾ ಶಾಸಕರು ಮತ್ತು ವಿರೋಧ ಪಕ್ಷದ ಶಾಸಕರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತದೆ, ಎಂದು ಅವರು ಹೇಳಿದರು.

ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ100 ರ ಸಂಭ್ರಮ: KPCC ಅಧ್ಯಕ್ಷರ ಅಸಮಾಧಾನಕ್ಕೆ CM ಸ್ಪಷ್ಟನೆ; ಹೈಕಮಾಂಡ್ ಕದ ತಟ್ಟಿದ್ರಾ ಹರಿಪ್ರಸಾದ್?
ಸಿಎಂ ಡಿಕೆ ಶಿವಕುಮಾರ್-ಬಿಕೆ ಹರಿಪ್ರಸಾದ್
Published On :

ಬೆಂಗಳೂರು: ಡಿಕೆ ಶಿವಕುಮಾರ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರ್ಣಗೊಳಿಸಿದ್ದು, ಈ ಶತಕದ ಸಂಭ್ರಮವನ್ನು ಡಿಕೆ ಶಿವಕುಮಾರ್ ಮೊನ್ನೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ನಲ್ಲಿ ಅಸಮಧಾನ ಭುಗಿಲೆದ್ದಿದೆ.

ಸ್ವತಃ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಅಸಮಾಧಾನಗೊಂಡಿದ್ದಾರೆ. ಪಕ್ಷದ ಅಧ್ಯಕ್ಷರಿಗೆ ಆಹ್ವಾನ ಕೊಟ್ಟಿಲ್ಲ. ವಿಧಾನಪರಿಷತ್ ಸದಸ್ಯನಾಗಿದ್ದೇನೆ. ಆದರೂ ಒಂದು ಕರೆ ಮಾಡಿ ಆಹ್ವಾನ ಕೊಟ್ಟಿಲ್ಲ. ಶಿಷ್ಟಾಚಾರಕ್ಕಾದರೂ ಒಂದು ಸಣ್ಣ ಫೋಟೋ ಕೂಡ ಹಾಕಿಲ್ಲ ಎಂದು ಹರಿಪ್ರಸಾದ್ ಬೇಸರಗೊಂಡಿದ್ದು, ಇದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಸಾಲದಕ್ಕೆ ಎಐಸಿಸಿ ನಾಯಕರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ಶಾಸಕರನ್ನೂ ಕರೆದಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರಿಗೂ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ. ಪ್ರೋಟೋಕಾಲ್​ನಿಂದಾಗಿ ವೇದಿಕೆ ಮೇಲೆ ಕರೆದಿಲ್ಲ.

ಬಿ.ಕೆ.ಹರಿಪ್ರಸಾದ್​​ಗೆ ಆಹ್ವಾನ ನೀಡಿಲ್ಲ ಎಂದು ಯಾರು ಹೇಳಿದ್ದು, ಹರಿಪ್ರಸಾದ್ ಹೇಳಿದರೇ? ಸರ್ಕಾರವು ಎಲ್ಲಾ ಶಾಸಕರು ಮತ್ತು ವಿರೋಧ ಪಕ್ಷದ ಶಾಸಕರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತದೆ," ಎಂದು ಅವರು ಹೇಳಿದರು.

"ನಮ್ಮ ಪಕ್ಷದ ಅಧ್ಯಕ್ಷರ ವಿಷಯಕ್ಕೆ ಬಂದರೆ, ಪಕ್ಷವು ನೀಡುವ ನಿರ್ದೇಶನಗಳಂತೆ ನಾವು ಪಕ್ಷದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಒಟ್ಟಾಗಿ ಮುನ್ನಡೆಯುತ್ತೇವೆ. ನಾವು ನಮ್ಮ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಎಲ್ಲರಿಗೂ ಆಹ್ವಾನಗಳನ್ನು ಕಳುಹಿಸಿದ್ದೇವೆ," ಎಂದು ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದಕ್ಕೆ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯರೂ ಆಗಿರುವ ಹರಿಪ್ರಸಾದ್, ಈ ವಿಷಯವನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ ಎಂಬ ವರದಿಗಳ ನಡುವೆ ಅವರ ಈ ಹೇಳಿಕೆಗಳು ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.