ಬೆಂಗಳೂರಿನ ORRಗೆ ಹೈಟೆಕ್ ಟಚ್; ಬಸ್, ಸೈಕಲ್ ಟ್ರ್ಯಾಕ್, ಡೆಲಿವರಿ ಬಾಯ್ಸ್‌ಗೆ ಅತ್ಯಾಧುನಿಕ 'ಗಿಗ್ ಹಬ್ಸ್' ನಿರ್ಮಾಣ!
ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಕೆ.ಆರ್. ಪುರಂ ನಡುವಿನ ನವೀಕರಿಸಿದ ಹೊರ ವರ್ತುಲ ರಸ್ತೆ(ORR), ನಮ್ಮ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಜೊತೆಗೆ ಬಸ್ ಮತ್ತು ಸೈಕಲ್ ಗಳಿಗೆ ಮೀಸಲಾದ ಲೇನ್‌ಗಳನ್ನು ಹೊಂದಿರುತ್ತದೆ.

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಹೊರ ವರ್ತುಲ ರಸ್ತೆಯ(ORR) ಸಂಚಾರ ದಟ್ಟಣೆ ನಿವಾರಿಸಲು ಮತ್ತು ಮೂಲಸೌಕರ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು 450 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಗೆ ಚಾಲನೆ ನೀಡಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಕೆ.ಆರ್. ಪುರಂ ನಡುವಿನ ನವೀಕರಿಸಿದ ಹೊರ ವರ್ತುಲ ರಸ್ತೆ(ORR), ನಮ್ಮ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಜೊತೆಗೆ ಬಸ್ ಮತ್ತು ಸೈಕಲ್ ಗಳಿಗೆ ಮೀಸಲಾದ ಲೇನ್‌ಗಳನ್ನು ಹೊಂದಿರುತ್ತದೆ. ಅಲ್ಲದೆ ದೇಶದಲ್ಲೇ ಮೊದಲ ಬಾರಿಗೆ ಡೆಲಿವರಿ ಬಾಯ್ಸ್‌ಗೆ ಅತ್ಯಾಧುನಿಕ 'ಗಿಗ್ ಹಬ್ಸ್' ನಿರ್ಮಿಸಲಾಗುತ್ತಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ (B-SMILE) ಸಿದ್ಧಪಡಿಸಿರುವ ಪ್ರಸ್ತಾವನೆಯಂತೆ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರಂವರೆಗಿನ 17 ಕಿಲೋಮೀಟರ್ ರಸ್ತೆಯನ್ನು 450 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ.
ಈ ರಸ್ತೆಯು ಬಸ್ ಲೇನ್, ಸೈಕಲ್ ಟ್ರ್ಯಾಕ್, ಸುಸಜ್ಜಿತ ಪಾದಚಾರಿ ಮಾರ್ಗಗಳನ್ನು ಒಳಗೊಂಡಿರಲಿದ್ದು, ಇಡೀ ರಸ್ತೆಯನ್ನು ಸುಸಂಘಟಿತ 'ಬಹುಮಾದರಿ ಮೊಬಿಲಿಟಿ ಕಾರಿಡಾರ್' ಆಗಿ ಪರಿವರ್ತಿಸಲಿದೆ.
ಈ ಯೋಜನೆಯ ಅಡಿಯಲ್ಲಿ ಒಆರ್‌ಆರ್ ವ್ಯಾಪ್ತಿಯ ಆರು ಪ್ರಮುಖ ಜಂಕ್ಷನ್‌ಗಳಾದ ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಅಗರ, ಇಬ್ಬಲೂರು, ಮಾರತಹಳ್ಳಿ ಮತ್ತು ಲೌರಿ ಜಂಕ್ಷನ್‌ಗಳನ್ನು ಸಮಗ್ರವಾಗಿ ನವೀಕರಿಸಲಾಗುತ್ತದೆ. ಇಲ್ಲಿನ ಫ್ಲೈಓವರ್‌ಗಳ(ಮೇಲ್ಸೇತುವೆ) ಕೆಳಗಿರುವ ವ್ಯರ್ಥ ಜಾಗವನ್ನು ಸೃಜನಾತ್ಮಕವಾಗಿ ಬಳಸಿಕೊಂಡು, ಸುಮಾರು 21,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಸಾರ್ವಜನಿಕ ಸಮುದಾಯ ಸ್ಥಳಗಳಾಗಿ ಮಾರ್ಪಡಿಸಲಾಗುತ್ತದೆ. ಈ ಸ್ಥಳಗಳಲ್ಲಿ ಆಸನ ವ್ಯವಸ್ಥೆ, ಸುಸಜ್ಜಿತ ವಿಶ್ರಾಂತಿ ಕೊಠಡಿಗಳು, ಸಣ್ಣ ಮಾರುಕಟ್ಟೆಗಳು, ವೆಂಡಿಂಗ್ ವಲಯಗಳು, ಗೇಮ್ ಕೋರ್ಟ್‌ಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಗಿಗ್ ಹಬ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಇನ್ನು ನಗರದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಪ್ ಆಧಾರಿತ ಡೆಲಿವರಿ ಬಾಯ್ಸ್ (ವಿತರಣಾ ಕಾರ್ಯನಿರ್ವಾಹಕರು) ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಪ್ರವಾಸಗಳ ನಡುವೆ ಅವರು ವಿಶ್ರಾಂತಿ ಪಡೆಯಲು ಫ್ಲೈಓವರ್‌ಗಳ ಕೆಳಗೆ ಮೀಸಲಾದ 'ಗಿಗ್ ಹಬ್ಸ್' ನಿರ್ಮಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



