ರಾಜ್ಯ

ರಾಯಚೂರು: KKRTC ಬಸ್ ಹರಿದು 4 ವರ್ಷದ ಹೆಣ್ಣುಮಗು ಸಾವು

ಗಬ್ಬೂರು ಗ್ರಾಮದ ವಿದ್ಯಾಶ್ರೀ ಮೃತ ಬಾಲಕಿ . ಸಾರಿಗೆ ಬಸ್ ಗಬ್ಬೂರಿನಿಂದ ದೇವದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಅಡ್ಡ ಬಂದ ಕಾರಣ ಮಗುವಿನ ಮೇಲೆ ಬಸ್ ಹರಿದು ದುರ್ಘಟನೆ ಸಂಭವಿಸಿದೆ.

ರಾಯಚೂರು: KKRTC ಬಸ್ ಹರಿದು 4 ವರ್ಷದ  ಹೆಣ್ಣುಮಗು ಸಾವು
ವಿದ್ಯಾಶ್ರೀ
Published On :

ರಾಯಚೂರು: ಕೆಕೆಆರ್‌ಟಿಸಿ ಬಸ್ ಹರಿದು ನಾಲ್ಕು ವರ್ಷದ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ನಡೆದಿದೆ.

ಗಬ್ಬೂರು ಗ್ರಾಮದ ವಿದ್ಯಾಶ್ರೀ ಮೃತ ಬಾಲಕಿ . ಸಾರಿಗೆ ಬಸ್ ಗಬ್ಬೂರಿನಿಂದ ದೇವದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಅಡ್ಡ ಬಂದ ಕಾರಣ ಮಗುವಿನ ಮೇಲೆ ಬಸ್ ಹರಿದು ದುರ್ಘಟನೆ ಸಂಭವಿಸಿದೆ.

ಬಸ್ ಬರುವುದನ್ನು ಗಮನಿಸದೆ ಮಗು ರಸ್ತೆ ದಾಟಲು ಮುಂದಾದಾಗ ಅಪಘಾತ ನಡೆದಿದೆ. ಧಿಡೀರ್ ಆಗಿ ಅಡ್ಡ ಬಂದ ಕಾರಣ ಬಸ್ಸಿನ ಚಕ್ರದಡಿಗೆ ಸಿಲುಕಿ ಮಗು ಮೃತಪಟ್ಟಿದೆ. ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.