Girl died

ಬಂಟ್ವಾಳ: ಶಾಲಾ ಬಸ್ ಮೇಲೆ ಬಿದ್ದ ಮರ; 4 ವರ್ಷದ ಬಾಲಕಿ ಸಾವು, ಹಲವರಿಗೆ ಗಾಯ
ಮೃತಳನ್ನು ಚಿರನ್ವಿ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರು: ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಅವಘಡ; ಬಾಲಕಿ ಸಾವು, 9 ಮಂದಿಗೆ ಗಾಯ
ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ.

ರಾಯಚೂರು: KKRTC ಬಸ್ ಹರಿದು 4 ವರ್ಷದ ಹೆಣ್ಣುಮಗು ಸಾವು
ಗಬ್ಬೂರು ಗ್ರಾಮದ ವಿದ್ಯಾಶ್ರೀ ಮೃತ ಬಾಲಕಿ . ಸಾರಿಗೆ ಬಸ್ ಗಬ್ಬೂರಿನಿಂದ ದೇವದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಚಾನಕ್ಕಾಗಿ ಅಡ್ಡ ಬಂದ ಕಾರಣ ಮಗುವಿನ ಮೇಲೆ ಬಸ್ ಹರಿದು ದುರ್ಘಟನೆ ಸಂಭವಿಸಿದೆ.

ಕಲಬುರಗಿ: ತಲೆ ಮೇಲೆ ಶಾಲಾ ವಾಹನ ಹರಿದು 3 ವರ್ಷದ ಬಾಲಕಿ ದುರ್ಮರಣ
ಅಣ್ಣ ಬಸ್ನಿಂದ ಇಳಿದ ಬಳಿಕ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್ನಡಿಗೆ ಸಿಲುಕಿದ್ದು, ಆಕೆಯ ತಲೆ ಮೇಲೆ ಶಾಲಾ ಬಸ್ ಹರಿದಿದೆ.

ಉತ್ತರ ಕನ್ನಡ: ಸಿದ್ದಾಪುರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಮತ್ತೋರ್ವ ಬಾಲಕಿ ಸಾವು
ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ಡಿ) ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐದು ವರ್ಷದ ಬಾಲಕಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ. ಸಿದ್ದಾಪುರ ತಾಲ್ಲೂಕಿನ ಹೊಸ ಪ್ರದೇಶಗಳಿಗೆ ಕೆಎಫ್ಡಿ ನಿಧಾನವಾಗಿ ಹರಡುತ್ತಿದೆ.

ಪಂಜಾಬ್: ಹುಟ್ಟುಹಬ್ಬದಂದು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು
ಕಳೆದ ವಾರ ಪಂಜಾಬ್ನಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ತಿಂದ ನಂತರ ಶಂಕಿತ ವಿಷಾಹಾರದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ. ಬಾಲಕಿ ತಂಗಿ ಸೇರಿದಂತೆ ಇಡೀ ಕುಟುಂಬ ಕೇಕ್ ತಿಂದ ನಂತರ ಅಸ್ವಸ್ಥಗೊಂಡಿತು. ಪಟಿಯಾಲಾದ ಬೇಕರಿಯಿಂದ ಆನ್ಲೈನ್ನಲ್ಲಿ ಕೇಕ್ ಆರ್ಡರ್ ಮಾಡಲಾಗಿದೆ ಎಂದು ಬಾಲಕಿಯ ತಾತ ತಿಳಿಸಿದ್ದಾರೆ.

ಪ್ರೇಮ ಪ್ರಸ್ತಾಪ ತಿರಸ್ಕರಿಸಿದ ಯುವತಿಯ ಕತ್ತು ಸೀಳಿದ ಭಗ್ನ ಪ್ರೇಮಿ!
ನೆಲ್ಲೈಯಪ್ಪರ್ ದೇವಸ್ಥಾನದ ಬಳಿಯ ಫ್ಯಾನ್ಸಿ ಸ್ಟೋರ್ನ ಗೋದಾಮಿನಲ್ಲಿ ಯುವಕನೋರ್ವ ಕುಡುಗೋಲಿನಿಂದ ಯುವತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಭೀಕರ ದೃಶ್ಯ: ಬಾಲಕಿಯ ದುಪಟ್ಟಾ ಎಳೆದ ಬೈಕ್ ಸವಾರ; ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಮತ್ತೊಂದು ಬೈಕ್ ಹರಿದು ಸಾವು!
ಉತ್ತರ ಪ್ರದೇಶದ ಅಂಬೇಡ್ಕರ್ನಗರ ಜಿಲ್ಲೆಯಿಂದ ನಾಚಿಕೆಗೇಡಿನ ಮತ್ತು ನೋವಿನ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ದುಪಟ್ಟಾವನ್ನು ಬೈಕ್ ಸವಾರನೊಬ್ಬ ಎಳೆದ ಪರಿಣಾಮ ಆಕೆ ರಸ್ತೆಗೆ ಬಿದ್ದಿದ್ದಾಳೆ.

ದಾವಣಗೆರೆ: ಟಿಪ್ಪರ್ ಲಾರಿ ಹರಿದು 2 ವರ್ಷದ ಬಾಲಕಿ ಸಾವು
ಟಿಪ್ಪರ್ ಲಾರಿ ಹರಿದು 2 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಇಂದು ನಡೆದಿದೆ.

