ರಾಜ್ಯ

Video: 'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ', 'ಹತ್ತಿದ್ರೆ ಹತ್ತು.. ಇಲ್ಲ ಹೋಗು'; ಮಹಿಳೆ-ಆಟೋ ಚಾಲಕರ ಜಟಾಪಟಿ!

ಇಂದು ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ 5.15ರ ಸುಮಾರಿಗೆ ಮಹಿಳೆಯೊಬ್ಬರು ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದ್ದಾರೆ.

Video: 'ಮೆಜೆಸ್ಟಿಕ್ to ಕತ್ರಿಗುಪ್ಪೆಗೆ 700 ರೂ', 'ಹತ್ತಿದ್ರೆ ಹತ್ತು.. ಇಲ್ಲ ಹೋಗು'; ಮಹಿಳೆ-ಆಟೋ ಚಾಲಕರ ಜಟಾಪಟಿ!
ಮಹಿಳೆ ಜೊತೆ ಆಟೋ ಚಾಲಕರ ಜಗಳ
Published On :

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ಜಗಳವಾಗಿದ್ದು, ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಇಂದು ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ 5.15ರ ಸುಮಾರಿಗೆ ಮಹಿಳೆಯೊಬ್ಬರು ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದ್ದು, ಈ ವೇಳೆ ಆಟೋ ಚಾಲಕರು ದುಬಾರಿ ಹಣ ಕೇಳಿದ್ದು ಮಾತ್ರವಲ್ಲದೇ ಇದನ್ನು ಪ್ರಶ್ನಿಸಿದ ಆಕೆಗೆ ನಿರ್ಲಕ್ಷ್ಯದ ಉತ್ತರ ನೀಡುತ್ತಾರೆ.

ಈ ವೇಳೆ ಮಹಿಳೆ ತನ್ನ ಮೊಬೈಲ್ ತೆಗೆದು ವಿಡಿಯೋ ಮಾಡಿಕೊಳ್ಳುತ್ತಾರೆ. ಇದೇ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಸೋನು ಸೌಮ್ಯ ಗೌಡ (sonu_sowmya_gowda_) ಎಂಬುವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಆಟೋ ಚಾಲಕರ ಮೇಲಿನ ನಿಯಂತ್ರಣ ಇಲ್ಲದೇ ಇರುವುದನ್ನು ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಆಗಿದ್ದೇನು?

ಸೋನು ಸೌಮ್ಯ ಗೌಡ ಅವರು ಇಂದು ಬೆಳಗಿನ ಜಾವ ಮೆಜೆಸ್ಟಿಕ್ ನಿಂದ ಕತ್ರಿಗುಪ್ಪೆಗೆ ತೆರಳಲು ಆಟೋ ಕೇಳಿದ್ದಾರೆ. ಈ ವೇಳೆ ಓರ್ವ ಆಟೋ ಚಾಲಕ ಅವರನ್ನು ಆಟೋಗೆ ಹತ್ತಿಸಿಕೊಂಡು, ದುಬಾರಿ ಹಣ ಕೇಳಿದ್ದಾರೆ. ಈ ವೇಳೆ ಅದಕ್ಕೊಪ್ಪದ ಸೋನು ಸೌಮ್ಯಗೌಡ ಆಕ್ಷೇಪವೆತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮತ್ತೋರ್ವ ಆಟೋ ಚಾಲಕ ಪ್ರಯಾಣಿಕರನ್ನು ಆಟೋದಿಂದ ಕೆಳಗಿಳಿಸು ಎಂದು ಗದರಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಆಟೋದಿಂದ ಕೆಳಗಿಳಿದು ತಮ್ಮ ಮೊಬೈಲ್ ತೆಗೆದು ವಿಡಿಯೋ ಮಾಡುತ್ತಾರೆ.

ಈ ವೇಳೆ ಆಟೋ ಚಾಲಕ ಮತ್ತು ಮತ್ತೋರ್ವ ಆಟೋ ಚಾಲಕ ಮಹಿಳೆಯೊಂದಿಗೆ ಜಗಳಕ್ಕಿಳಿದಿದ್ದಾರೆ. ಪ್ರಮುಖವಾಗಿ ಮತ್ತೋರ್ವ ಚಾಲಕ ಹತ್ತಿದ್ರೆ ಹತ್ತು.. ಇಲ್ಲ ಹೋಗು ಎಂದು ಏಕವಚನದಲ್ಲೇ ಜಟಾಪಟಿ ನಡೆಸಿದ್ದಾರೆ.

ಇನ್ ಸ್ಟಾಗ್ರಾಂ ಪೋಸ್ಟ್

ಈ ಘಟನೆಯ ವಿಡಿಯೋವನ್ನು ಮಹಿಳೆ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಆಟೋ ಚಾಲಕರ ಹೆಚ್ಚುವರಿ ಹಣ ಪೀಕುವ ದಂಧೆ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಇವರಿಂದ ನಿಯತ್ತಾಗಿ ಆಟೋ ಓಡಿಸುವ ಚಾಲಕರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.