ಸಾಮೂಹಿಕ ಅತ್ಯಾಚಾರ: ಕೊನೆಗೂ ಮೌನ ಮುರಿದ ಸಂತ್ರಸ್ಥೆ; 'ನ್ಯಾಯಬೇಕು.. ನನ್ನಂತೆಯೇ ಸಾಕಷ್ಟು ಯುವತಿಯರಿಗೆ ದೌರ್ಜನ್ಯ'
ಬೆಂಗಳೂರಿನ ಜಕ್ಕೂರು ಬಳಿಯ ರೆಕ್ಸ್ ವಿಲ್ಲಾ ಎಂಬ ಸ್ಥಳದಲ್ಲಿ ಪಾರ್ಟಿಗೆ ಹೋಗಿದ್ದ ಯುವತಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರವೆಸಗಿದ್ದರು.

ಬೆಂಗಳೂರು: ಬೆಂಗಳೂರು ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದ್ದು, ಇದೇ ಮೊದಲ ಬಾರಿಗೆ ಮೌನಮುರಿದಿರುವ ಸಂತ್ರಸ್ಥ ಯುವತಿ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಜಕ್ಕೂರು ಬಳಿಯ ರೆಕ್ಸ್ ವಿಲ್ಲಾ ಎಂಬ ಸ್ಥಳದಲ್ಲಿ ಪಾರ್ಟಿಗೆ ಹೋಗಿದ್ದ ಯುವತಿ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಸ್ಯಾಂಡ್ರೊ (21) ಮತ್ತು ಅವನ ಸ್ನೇಹಿತ ನಿಖಿಲ್ (35)ರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ?
ಸಂತ್ರಸ್ಥ ಯುವತಿ ತಮಿಳುನಾಡು ಮೂಲದವರಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿಗೆ ದಾಖಲಾದ ಮೊದಲ ವರ್ಷದ ಬಿಎ ವಿದ್ಯಾರ್ಥಿನಿ. ಆಕೆ ಸುಮಾರು ಒಂದು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಸ್ಯಾಂಡ್ರೊ (21) ಎಂಬಾತನನ್ನು ಸಂಪರ್ಕಿಸಿದ್ದಳು. ಬೆಂಗಳೂರಿನ ಕೋರಮಂಗಲದಲ್ಲಿರುವ ಕೆಫೆಯಲ್ಲಿ ಇಬ್ಬರೂ ಭೇಟಿಯಾಗಿದ್ದರು.
ಫೆಬ್ರವರಿ 14 ರ ರಾತ್ರಿ, ಆರೋಪಿ ಡಿಕ್ಸನ್ ಜಕ್ಕೂರು ಬಳಿಯ ರೆಕ್ಸ್ ವಿಲ್ಲಾ ಎಂಬ ಸ್ಥಳದಲ್ಲಿ ಪಾರ್ಟಿಗೆ ಸಂತ್ರಸ್ಥೆಯನ್ನು ಆಹ್ವಾನಿಸಿದ್ದಾನೆ. ಹೀಗಾಗಿ ಯುವತಿ ಮಧ್ಯರಾತ್ರಿಯ ನಂತರ ವಿಲ್ಲಾಗೆ ಹೋಗಿದ್ದು, ಈ ವೇಳೆ ಡಿಕ್ಸನ್ ತನ್ನ ಸಹಚರ ನಿಖಿಲ್ (35) ಜೊತೆ ವಿಲ್ಲಾದಲ್ಲಿದ್ದರು, ನಿಖಿಲ್ ಸಕಲೇಶಪುರದ ನಿವಾಸಿ ಎಂದು ವರದಿಯಾಗಿದೆ.
ಪಾರ್ಟಿ ವೇಳೆ ಮಾದಕವಸ್ತು!
ಪಾರ್ಟಿ ವೇಳೆ ಡಿಕ್ಸನ್ ತನಗೆ ಬಲವಂತವಾಗಿ ಗುಲಾಬಿ ಬಣ್ಣದ ಮಾತ್ರೆ ನೀಡಿದ್ದರು. ಬಳಿಕ ನನಗೆ ಪ್ರಜ್ಞೆ ತಪ್ಪಿತು. ಈ ವೇಳೆ ತನ್ನ ಇಚ್ಛೆಗೆ ವಿರುದ್ಧವಾಗಿ, ಆರೋಪಿಗಳಿಬ್ಬರೂ ವಿಲ್ಲಾದಲ್ಲಿನ ಒಂದು ಕೋಣೆಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಾಲ್ ಬಳಿ ಬಿಡುವ ಮೊದಲು, ಆರೋಪಿಗಳಲ್ಲಿ ಒಬ್ಬನು ತನ್ನನ್ನು ಕೋಣೆಯಲ್ಲಿ ಹಲವಾರು ಗಂಟೆಗಳ ಕಾಲ ಬಂಧಿಸಿಟ್ಟಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಯಾರಿಗಾದರೂ ಈ ಕುರಿತು ಮಾಹಿತಿ ನೀಡಿದರೆ, ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಮೌನ ಮುರಿದ ಸಂತ್ರಸ್ಥೆ ಹೇಳಿದ್ದೇನು?
ಇನ್ನು ಅತ್ತ ಪೊಲೀಸ್ ದೂರು ದಾಖಲಾದ ಬೆನ್ನಲ್ಲೇ ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಸಂತ್ರಸ್ಥೆ, 'ಡಿಕ್ಸನ್ ಮತ್ತು ನಿಖಿಲ್ ಇಬ್ಬರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇವರಿಬ್ಬರಿಗೂ ಇದೇ ಕೆಲಸ. ನನ್ನಂತಹ ಹಲವಾರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದಾರೆ. ನನಗೆ ನ್ಯಾಯಬೇಕು.. ಎಂದು ಹೇಳಿದ್ದಾರೆ.
ಪ್ರೀತಿ ಹೆಸರಲ್ಲಿ ಮೋಸ
ಇದೇ ವೇಳೆ ಪ್ರಮುಖ ಆರೋಪಿ ಡಿಕ್ಸನ್ ತನ್ನನ್ನು ಪ್ರೀತಿಸುವುದಾಗಿ ಹೇಳಿ ಮೋಸ ಮಾಡಿದ. ನನ್ನನ್ನು ಟ್ರಾಪ್ ಮಾಡಿ ತನ್ನ ಕೆಲಸಗಳಿಗೆ ಬಳಸಿಕೊಂಡ. ಇನ್ ಸ್ಟಾಗ್ರಾಮ್ ನಲ್ಲಿ ಡಿಕ್ಸನ್ ಪರಿಚಯವಾಗಿತ್ತು. ಫೋಟೋ ಶೂಟ್ ಮಾಡುವುದಾಗಿ ಹೇಳಿ ಆತ ಸ್ನೇಹ ಬೆಳೆಸಿದ್ದ.
ಬಳಿಕ ಪ್ರೀತಿಸುವುದಾಗಿ ಹೇಳಿದ್ದ. ಅವನ ಮಾತನ್ನು ನಂಬಿದ್ದೆ. ಒಂದು ದಿನ ಜಕ್ಕೂರಿನ ರೆಕ್ಸ್ ವಿಲ್ಲಾಗೆ ತೆರಳಿದಾಗ ನೀರಿನಲ್ಲಿ ನನಗೆ ಗುಲಾಬಿ ಬಣ್ಣದ ಮಾತ್ರೆ ಹಾಕಿ ಕೊಟ್ಟು ಪ್ರಜ್ಞಾಹೀನಾಳಾದ ಬಳಿಕ ಅತ್ಯಾಚಾರ ಮಾಡಿದರು. ಆರಂಭದಲ್ಲಿ ನಾನು ಇದಕ್ಕೆ ಪ್ರತಿರೋಧ ತೋರಿದೆ. ಆದರೆ ಸಮಯ ಕಳೆಯುತ್ತಿದ್ದಂತೆಯೇ ಪ್ರಜ್ಞೆ ತಪ್ಪಿತು. ಕೊಂಚ ಸಮಯದ ಬಳಿಕ ಎಚ್ಚರವಾದಾಗ ನನ್ನ ದೇಹದ ಮೇಲೆ ನಿಖಿಲ್ ಮತ್ತು ಕೆಳಗೆ ಡಿಕ್ಸನ್ ಇದ್ದರು. ಇಬ್ಬರೂ ಏಕಕಾಲದಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದರು ಎಂದು ಹೇಳಿದರು.
ಯಾವ ಹನಿಟ್ರ್ಯಾಪ್ ಇಲ್ಲ... ನಾನು ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ..
ಇದೇ ವೇಳೆ ವಿಡಿಯೋದಲ್ಲಿ ಯುವತಿ ತಾನು ಯಾರಿಗೂ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿಲ್ಲ.. ಅವರ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



