ರಾಜ್ಯ

AI Impact Summit: ವಿವಾಟೆಕ್-ಪೋಲೆಂಡ್ ಜೊತೆ ಕರ್ನಾಟಕ ಮಹತ್ವದ ಒಪ್ಪಂದ; ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಅವಕಾಶ..!

ನವದೆಹಲಿಯಲ್ಲಿ ನಡೆದ AI Impact Summit ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಎರಡು ಪ್ರಮುಖ ಒಪ್ಪಂದಗಳಿಗೆ (Letters of Intent – LoI) ಸಹಿ ಹಾಕಿದೆ.

AI Impact Summit: ವಿವಾಟೆಕ್-ಪೋಲೆಂಡ್ ಜೊತೆ ಕರ್ನಾಟಕ ಮಹತ್ವದ ಒಪ್ಪಂದ; ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಅವಕಾಶ..!
ಸಚಿವ ಪ್ರಿಯಾಂಕ್ ಖರ್ಗೆ
Published On :

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಮತ್ತು ತಂತ್ರಜ್ಞಾನ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಹೂಡಿಕೆ ಹೆಚ್ಚಿಸಲು ಮುಂದಾಗಿದೆ.

ನವದೆಹಲಿಯಲ್ಲಿ ನಡೆದ AI Impact Summit ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವ ತಂತ್ರಜ್ಞಾನ ಹಾಗೂ ವಿಜ್ಞಾನ-ತಂತ್ರಜ್ಞಾನ ಇಲಾಖೆಯು ಎರಡು ಪ್ರಮುಖ ಒಪ್ಪಂದಗಳಿಗೆ (Letters of Intent – LoI) ಸಹಿ ಹಾಕಿದೆ.

ಪೋಲೆಂಡ್‌ನ ಕಟೊವೀಸ್‌ನ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (CCI) ಮತ್ತು ಯುರೋಪಿನ ವಿವಾಟೆಕ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಕಟೊವೀಸ್‌ನ ಸಿಸಿಐ ಜೊತೆಗಿನ ಒಪ್ಪಂದದಲ್ಲಿ ಕರ್ನಾಟಕ–ಕಟೊವೀಸ್ ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್ ಸ್ಥಾಪನೆಗೆ ಪ್ರಸ್ತಾಪಿಸಲಾಗಿದೆ.

ಕೃತಕ ಬುದ್ಧಿಮತ್ತೆ, ಡೀಪ್ ಟೆಕ್, ಗೇಮಿಂಗ್ ಮತ್ತು ಇಮ್ಮರ್ಸಿವ್ ತಂತ್ರಜ್ಞಾನಗಳಲ್ಲಿ ಸಹಯೋಗ, ಡಿಜಿಟಲ್ ಅಭಿವೃದ್ಧಿ, ಸ್ಟಾರ್ಟ್‌ಅಪ್ ಮತ್ತು ಇನೊವೇಷನ್ ವಿನಿಮಯ ಕಾರ್ಯಕ್ರಮಗಳು, ಸಂಯುಕ್ತ ಇಂಕ್ಯೂಬೇಶನ್ ಹಾಗೂ ಅಕ್ಸಿಲರೇಶನ್ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಇದಲ್ಲದೆ, ಡೆಮೊ ಡೇಗಳು, ಹೂಡಿಕೆದಾರರ ಸಂಪರ್ಕ ಕಾರ್ಯಕ್ರಮಗಳು, ಕ್ರಾಸ್-ಬಾರ್ಡರ್ ಮಾರುಕಟ್ಟೆ ಪ್ರವೇಶಕ್ಕೆ ಇನೊವೇಷನ್ ಮಿಷನ್‌ಗಳು, ಅಕಾಡೆಮಿಕ್ ಮತ್ತು ಸಂಶೋಧನಾ ಸಹಕಾರ, ಆರ್‌ಅಂಡ್‌ಡಿ ಯೋಜನೆಗಳು ಹಾಗೂ ಪೈಲಟ್ ಯೋಜನೆಗಳ ಜಾರಿಗೆ ಜಂಟಿ ಕಾರ್ಯಪಡೆ ರಚಿಸುವುದೂ ಈ ಒಪ್ಪಂದದ ಭಾಗವಾಗಿದೆ.

ವಿವಾಟೆಕ್ ಜೊತೆಗಿನ ಒಪ್ಪಂದದಲ್ಲಿ, ಪ್ಯಾರಿಸ್‌ನಲ್ಲಿ ನಡೆಯುವ VivaTech ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಭಾಗವಹಿಸುವಿಕೆ ಅವಕಾಶ ನೀಡಲಾಗುತ್ತದೆ. ಇದರ ಜೊತೆಗೆ ಯುರೋಪಿನ ಸ್ಟಾರ್ಟ್‌ಅಪ್‌ಗಳು ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ.

AI, ಕ್ಲೈಮೇಟ್ ಟೆಕ್, ಇನೊವೇಷನ್ ಚಾಲೆಂಜ್‌ಗಳು, ಉದ್ಯಮ ಸಹಭಾಗಿತ್ವ, ವೆಂಚರ್ ಕ್ಯಾಪಿಟಲ್ ಸಂಪರ್ಕ ಮತ್ತು ಪ್ರಮುಖ ತಂತ್ರಜ್ಞಾನ ಕಾರ್ಯಕ್ರಮಗಳ ಪರಸ್ಪರ ಪ್ರಚಾರಕ್ಕೂ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಸಹಕಾರದಿಂದ ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶ, ಹೂಡಿಕೆ ಅವಕಾಶಗಳು ಮತ್ತು ಸಂಶೋಧನಾ ಸಹಕಾರ ಹೆಚ್ಚಾಗುವ ನಿರೀಕ್ಷೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.