ಮದುವೆ, ಬ್ಲಾಕ್ ಮೇಲ್: ತಾಯಿ-ದೊಡ್ಡಮ್ಮ ಬೆ*ಲೆ ಫೋಟೋ ಕೇಸ್ ಗೆ ಟ್ವಿಸ್ಟ್
ತಾಯಿ ಹಾಗೂ ದೊಡ್ಡಮ್ಮರ ಬೆತ್ತಲೆ ಫೋಟೋ ಕಳುಹಿಸಿದ್ದ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಯುವತಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಬ್ಯಾಟರಾಯನಪುರ ಬೆತ್ತಲೆ ಫೋಟೋ ಪ್ರಕರಣಕ್ಕೆ ಭಾರಿ ತಿರುವು ದೊರೆತಿದ್ದು, ಹೆತ್ತ ತಾಯಿ-ದೊಡ್ಡಮ್ಮರ ಖಾಸಗಿ ಫೋಟೋ ಗಳನ್ನು ಪ್ರಿಯತಮನಿಗೆ ಕಳುಹಿಸಿದ್ದ ಯುವತಿ ನಡೆಗೆ ಕಾರಣ ತಿಳಿದುಬಂದಿದೆ.
ತಾಯಿ ಹಾಗೂ ದೊಡ್ಡಮ್ಮರ ಬೆತ್ತಲೆ ಫೋಟೋ ಕಳುಹಿಸಿದ್ದ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಯುವತಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆಕೆಯಿಂದ ಬೆತ್ತಲೆ ಫೋಟೋಗಳನ್ನು ಕಳುಹಿಸಿಕೊಂಡಿದ್ದ ಆರೋಪಿ ಯುವಕ ಕುಟುಂಬಸ್ಥರು ಮದುವೆಗೆ ಒಪ್ಪದಿದ್ದರೆ ಈ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುವಂತೆ ಯುವತಿಗೆ ತಿಳಿಸಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಪ್ರಿಯಕರನಿಗೆ ತಾಯಿ ಮತ್ತು ದೊಡ್ಡಮ್ಮನ ಖಾಸಗಿ ಫೋಟೋ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್.ಎನ್ ಪ್ರತಿಕ್ರಿಯಿಸಿದ್ದು, ಮಗಳೇ ತನ್ನ ತಾಯಿ ಹಾಗೂ ದೊಡ್ಡಮ್ಮಳ ಖಾಸಗಿ ಫೋಟೋಗಳನ್ನು ಲವರ್ ಗೆ ಕಳುಹಿಸಿರುವುದು ಹೇಗೆ ಬೆಳಕಿಗೆ ಬಂದಿದೆ ಎಂದು ಎಳೆ ಎಳೆಯಾಗಿಬಿಚ್ಚಿಟ್ಟಿದ್ದಾರೆ.
ಬ್ಯಾಟರಾಯನಪುರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು. ಓರ್ವ ಮಹಿಳೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಅವರು ಸ್ವತಃ ಅವರ ಮಗಳ ವಿರುದ್ಧ ಆರೋಪ ಮಾಡಿದ್ದರು. ಅವರ ಹಾಗೂ ಅವರ ಅಕ್ಕನ ಖಾಸಗಿ ಫೋಟೋ ತೆಗೆದು ಇನ್ನೊಬ್ಬ ವ್ಯಕ್ತಿಗೆ ಕಳಿಸಿದ್ದಾಗಿ ಹೇಳಿದ್ದಾರೆ.
ಮಹಿಳೆಯ ಎರಡನೇ ಮಗಳು ಮನೆಬಿಟ್ಟು ಹೋಗಿ ಪ್ರೀತಿಸಿದ ಹುಡಗನನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ, ಹುಡುಗಿ ಮನೆಯಲ್ಲಿ ತನ್ನ ಮೊಬೈಲ್ ಮತ್ತು ಲ್ಯಾಪ್ ಟಾಪ್ ಬಿಟ್ಟು ಹೋಗಿದ್ದಳು. ಆಗ ಮನೆಯವರು ಮಗಳ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಚೆಕ್ ಮಾಡಿದಾಗ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋ ಕಳಿಸಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಮಗಳು ಆಕೆಯ ಪ್ರಿಯಕರನಿಗೆ ತಾಯಿ ಹಾಗೂ ಸಂಬಂಧಿಕರ ಫೋಟೋ ಕಳಿಸಿದ್ದಾಳೆ. ಯಾವ ಉದ್ದೇಶಕ್ಕಾಗಿ ಈ ಕೃತ್ಯ ಆಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಮೊಬೈಲ್ ಅನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಿ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಯುವತಿ ಹೆತ್ತಮ್ಮನ ಖಾಸಗಿ ಫೋಟೋಗಳನ್ನು ಏಕೆ ತನ್ನ ಬಾಯ್ ಫ್ರೆಂಡ್ ಗೆ ಕಳುಹಿಸಿದ್ದಳು? ಇದರ ಹಿಂದಿನ ಉದ್ದೇಶ ಏನಾಗಿತ್ತು ಎನ್ನುವ ಅಸಲಿ ಕಾರಣ ಪೊಲೀಸ್ ತನಿಖೆಯಲ್ಲಿ ಗೊತ್ತಾಗಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



