ಹಾಸನ ನವವಿವಾಹಿತೆ ಕಣ್ಮರೆ ಕೇಸ್ಗೆ ಬಿಗ್ ಟ್ವಿಸ್ಟ್: ನೀರಿನಲ್ಲಿ ಮುಳುಗಿದಳಾ ಇಲ್ಲ ಓಡಿಹೋದಳಾ? ಪತಿ ಕುಟುಂಬಸ್ಥರ ಸ್ಫೋಟಕ ಆರೋಪ
ಹಾಸನ ಜಿಲ್ಲೆಯ ಹೇಮಾವತಿ ಎಡದಂಡೆ ನಾಲೆಯಲ್ಲಿ ಕಣ್ಮರೆಯಾಗಿರುವ ನವವಿವಾಹಿತೆ ಘಟನೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಒಂದೆಡೆ ಆಕೆಯ ಪೋಷಕರು ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರೆ, ಮತ್ತೊಂದೆಡೆ, ಆಕೆಗೆ ಇದು 2ನೇ ವಿವಾಹ ಎಂದು ಪತಿಕಡೆಯವರು ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಚಿಕ್ಕನಾಯಕನಹಳ್ಳಿ (ಹಾಸನ): ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. 24 ವರ್ಷದ ನವವಿವಾಹಿತೆ ಜಯಶೀಲಾ ಬಿ.ಕೆ. (ಪ್ರಿಯಾಂಕ) ಅನುಮಾನಾಸ್ಪದವಾಗಿ ಕಣ್ಮರೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಪೋಷಕರು ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಕಣ್ಮರೆಯಾದ ಜಯಶೀಲಾ ಅವರಿಗೆ ಕೇವಲ 8 ತಿಂಗಳ ಹಿಂದೆಯಷ್ಟೇ ಕುರುವಂಕ ಗ್ರಾಮದ ರಾಜಶೇಖರ (27) ಎಂಬಾತನೊಂದಿಗೆ ಮದುವೆಯಾಗಿತ್ತು. ಇನ್ನು, ಜಯಶೀಲಾ ಅವರು ಪ್ರಸ್ತುತ ಎರಡುವರೆ ತಿಂಗಳ ಗರ್ಭಿಣಿಯಾಗಿದ್ದರು. ಆದರೆ, ಸೆಪ್ಟೆಂಬರ್ 19 ರಂದು ಪತಿ ರಾಜಶೇಖರ ಆಕೆಯನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಜಯಶೀಲಾ ತನ್ನ ತಂದೆ ದೊರೆಸ್ವಾಮಿಗೆ ಫೋನ್ ಮಾಡಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು. ತಂದೆಗೆ ಫೋನ್ ಮಾಡಿದ ವಿಷಯವಾಗಿ ಪತಿ ಹಾಗೂ ಅತ್ತೆ ವಿಜಯಲಕ್ಷ್ಮಿ ಜಗಳವಾಡಿದ್ದರು ಎನ್ನಲಾಗಿದೆ.
ಮುಂದುವರೆದು, ಆಸ್ಪತ್ರೆಗೆ ತೋರಿಸಿ ವಾಪಸ್ ಚಿಕ್ಕನಾಯಕನಹಳ್ಳಿ ಗ್ರಾಮದ ಹೇಮಾವತಿ ಎಡದಂಡೆ ನಾಲೆ ಬಳಿ ಬರುವಾಗ, ಪತ್ನಿ ಬೈಕ್ ನಿಲ್ಲಿಸುವಂತೆ ಹೇಳಿ ಧಿಡೀರ್ ಎಂದು ನಾಲೆ ನೀರಿಗೆ ಜಿಗಿದಿದ್ದಾಳೆ ಎಂದು ಪತಿ ರಾಜಶೇಖರ ಹೇಳಿಕೊಂಡಿದ್ದಾನೆ. ಜೊತೆಗೆ, ಆಕೆಯನ್ನು ರಕ್ಷಿಸಲು ತಾನೂ ಸಹ ನೀರಿಗೆ ಜಿಗಿದಿದ್ದೆ, ಆದರೆ ನೀರು ಕುಡಿದು ಅಸ್ವಸ್ಥನಾದೆನೇ ಹೊರತು ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದರೊಂದಿಗೆ, ತಾನು ಅಥವಾ ತನ್ನ ಮನೆಯವರು ಯಾವುದೇ ವರದಕ್ಷಿಣೆ ಕಿರುಕುಳ ನೀಡಿಲ್ಲ ಎಂದು ಆತ ವಾದಿಸಿದ್ದಾನೆ.

'ಪ್ಲೀಸ್ ಬಿಟ್ ಬಿಡಿ': ಒಡಿಶಾದಲ್ಲೂ ಶಾಕಿಂಗ್ ಘಟನೆ, ಬೈಕ್ ನಲ್ಲಿ ತೆರಳುತ್ತಿದ್ದ ಜೋಡಿಗೆ ಹಲ್ಲೆ-ಕಿರುಕುಳ, Video
ಮತ್ತೊಂದೆಡೆ, ಜಯಶೀಲಾ ಪೋಷಕರ ಪ್ರಕಾರ, ಮದುವೆಯಾದಾಗಿನಿಂದಲೂ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು ಮತ್ತು ಈ ಸಂಬಂಧ ಈ ಹಿಂದೆ ಎರಡು ಬಾರಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಪತಿಯೇ ಆಕೆಯನ್ನು ನಾಲೆಗೆ ತಳ್ಳಿ ಕೊಲೆ ಮಾಡಿ, ಈಗ ಕಥೆ ಕಟ್ಟುತ್ತಿದ್ದಾನೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಇದರ ನಡುವೆಯೇ, ಪ್ರಿಯಾಂಕ ಪತಿಯ ದೊಡ್ಡಪ್ಪ ಮಂಜುನಾಥ್, ಪ್ರಿಯಾಂಕ ಪೋಷಕರ ವಿರುದ್ಧ ಗಂಭೀರ ವಂಚನೆಯ ಆರೋಪ ಮಾಡಿದ್ದು, ಪ್ರಿಯಾಂಕಾಗೆ ಮೊದಲೇ ಒಂದು ಮದುವೆಯಾಗಿದ್ದು, ಆ ವಿಚಾರವನ್ನು ಮುಚ್ಚಿಟ್ಟು ರಾಜಶೇಖರ ಜೊತೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಮೊದಲೇ ನಡೆದಿದ್ದ ವಿವಾಹ ಮತ್ತು ಪ್ರೇಮ ಪ್ರಕರಣವನ್ನು ಮರೆಮಾಚಿ ಸಂಬಂಧ ಬೆಳೆಸಿದ್ದರಿಂದ ಈಗ ತಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


