ರಾಜ್ಯ

ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡಬೇಡಿ: ಬಿಜೆಪಿ ಪಾದಯಾತ್ರೆಗೆ ಪರಮೇಶ್ವರ್ ಕೆಂಡಾಮಂಡಲ

ಆದರೆ ವಿಧಾನಸಭೆಯಲ್ಲಿ ಸರ್ಕಾರದ ವೈಫಲ್ಯದ ಆರೋಪಗಳನ್ನು ಪ್ರಶ್ನೆ ಎತ್ತಬೇಕು, ಅದನ್ನು ಬಿಟ್ಟು ಬೀದಿಯಲ್ಲಿ ಮಾಡಿದರೆ ಏನು ಮಾಡೋಕಾಗುತ್ತೆ ಎಂದರು. ಅವರು ಪಾದಯಾತ್ರೆ ಮಾಡಲಿ ಆದರೆ ಯಾವ ವೈಫಲ್ಯ? ಎಂಬುದನ್ನು ಅವರು ವಿಧಾನಸಭೆಯಲ್ಲಿ ಹೇಳಬೇಕು.

ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡಬೇಡಿ: ಬಿಜೆಪಿ ಪಾದಯಾತ್ರೆಗೆ ಪರಮೇಶ್ವರ್ ಕೆಂಡಾಮಂಡಲ
ಡಿಸಿಎಂ ಪರಮೇಶ್ವರ್
Published On :

ತುಮಕೂರು: ಸೆಪ್ಟಂಬರ್ 1 ರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ಬಿಜೆಪಿ ವಿರುದ್ದ ಡಿಸಿಎಂ ಜಿ ಪರಮೇಶ್ವರ್ ಹರಿಹಾಯ್ದಿದ್ದಾರೆ.

ರಾಜ್ಯ ಸರಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸೆ.1ರಿಂದ ಲಿಂಗಸುಗೂರಿನಿಂದ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿಗ ಅವರು , ವಿರೋಧ ಪಕ್ಷವು ಪಾದಯಾತ್ರೆ ಕೈಗೊಳ್ಳಲು ಸ್ವತಂತ್ರವಾಗಿದೆ.

ಆದರೆ ವಿಧಾನಸಭೆಯಲ್ಲಿ ಸರ್ಕಾರದ ವೈಫಲ್ಯದ ಆರೋಪಗಳನ್ನು ಪ್ರಶ್ನೆ ಎತ್ತಬೇಕು, ಅದನ್ನು ಬಿಟ್ಟು ಬೀದಿಯಲ್ಲಿ ಮಾಡಿದರೆ ಏನು ಮಾಡೋಕಾಗುತ್ತೆ ಎಂದರು. ಅವರು ಪಾದಯಾತ್ರೆ ಮಾಡಲಿ ಆದರೆ ಯಾವ ವೈಫಲ್ಯ? ಎಂಬುದನ್ನು ಅವರು ವಿಧಾನಸಭೆಯಲ್ಲಿ ಹೇಳಬೇಕು.

ಅವರು ಮಾಡಲಿ. ನಾವು ಅವರಿಗೆ ಅದನ್ನು ಮಾಡಬೇಡಿ ಎಂದು ಹೇಳಿದ್ದೇವೆಯೇ? ಅವರು ಸ್ವತಃ ನಿರ್ಧರಿಸಿದ್ದಾರೆ ಅವರು ಅದನ್ನು ಮಾಡಲಿ ಬಿಡಿ. ಸರಿಯಾಗಿ ಅರ್ಥಮಾಡಿಕೊಳ್ಳದೆ, ಅವರು ಜನರಿಗೆ ಮಂಕು ಬೂದಿ ಎರಚಬಾರದು ಎಂದು ಪರಮೇಶ್ವರ್ ಕಿಡಿ ಕಾರಿದ್ದಾರೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಪಾದಯಾತ್ರೆ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 10 ರಂದು ಮುಕ್ತಾಯಗೊಳ್ಳಲಿದೆ ಎಂದು ಘೋಷಿಸಿದ ನಂತರ ಉಪಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.