ಅವರು ಪಾದಯಾತ್ರೆ ಮಾಡಿದ್ರೆ ನಾವ್ ಕಳ್ಳೇಕಾಯ್ ತಿನ್ಕೊಂಡು ಕೂತ್ಕೋತಿವಾ; ನಮ್ಮದು ರಣತಂತ್ರವಿದೆ: ಡಿ.ಕೆ ಶಿವಕುಮಾರ್
ಈ ಅಭಿಯಾನ ನಿಜವಾದ ರಾಜಕೀಯ ಚಳುವಳಿಯಲ್ಲ ಬಿಜೆಪಿ ತನ್ನ ಆಂತರಿಕ ಬಿಕ್ಕಟ್ಟನ್ನು ನಿವಾರಿಸಲು ನಡೆಸುತ್ತಿರುವ ಪ್ರಯತ್ನ ಎಂದು ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು: ಹಲವಾರು ವಿಷಯಗಳ ಸಂಬಂಧ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ಪಾದಯಾತ್ರೆ ಆರಂಭಿಸುತ್ತಿರುವುದರಿಂದ, ವಿರೋಧ ಪಕ್ಷ ಪಡೆದುಕೊಳ್ಳುತ್ತಿರುವ ಪ್ರಚಾರವನ್ನು ರಾಜಕೀಯವಾಗಿ ಎದುರಿಸಲು ಆಡಳಿತ ಪಕ್ಷ ಸಿದ್ಧತೆ ನಡೆಸುತ್ತಿದೆ. ತಾವು ಸುಮ್ಮನೆ ಕುಳಿತಿಲ್ಲ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆದರೆ ಬಿಜೆಪಿಯ ಪಾದಯಾತ್ರೆಯನ್ನು ಹೇಗೆ ಎದುರಿಸಬೇಕೆಂದು ಕಾಂಗ್ರೆಸ್ ನಾಯಕತ್ವ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮೂಲಗಳ ಪ್ರಕಾರ, ಎಸ್ಟಿ ನಾಯಕ ಸಮುದಾಯ ಮತ್ತು ಒಟ್ಟಾರೆ ಕಲ್ಯಾಣ ಕರ್ನಾಟಕ ಪ್ರದೇಶದ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಯತ್ತ ಗಮನಹರಿಸುವ ಮೂಲಕ ಬಿಜೆಪಿ ಅಭಿಯಾನವನ್ನು ರದ್ದುಗೊಳಿಸಲು ಪಕ್ಷದೊಳಗೆ ಸಲಹೆ ಕೇಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಹಿಂದೆ ನಡೆದ "ತಪ್ಪುಗಳನ್ನು" ಮುಚ್ಚಿಕೊಳ್ಳಲು ಬಿಜೆಪಿವರು "ಪ್ರಾಯಶ್ಚಿತ್ತ ಯಾತ್ರೆ" ನಡೆಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ನೀವು ರಾಜ್ಯದಲ್ಲಿ ಮಾಡಿದ ಅನ್ಯಾಯಗಳನ್ನು ಮುಚ್ಚಲು ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದೀರಿ. ಇದಕ್ಕೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಕೂಡ ಯಾತ್ರೆ ಕೈಗೊಳ್ಳುತ್ತದೆ. ನಾವು ಕೈಕಟ್ಟಿ ಸುಮ್ಮನಿರುವುದಿಲ್ಲ. ಕಾಂಗ್ರೆಸ್ ನಿಮಗೆ ಸೂಕ್ತ ಉತ್ತರ ನೀಡುತ್ತದೆ" ಎಂದು ತಿಳಿಸಿದ್ದಾರೆ.
ಈ ಅಭಿಯಾನ ನಿಜವಾದ ರಾಜಕೀಯ ಚಳುವಳಿಯಲ್ಲ ಬಿಜೆಪಿ ತನ್ನ ಆಂತರಿಕ ಬಿಕ್ಕಟ್ಟನ್ನು ನಿವಾರಿಸಲು ನಡೆಸುತ್ತಿರುವ ಪ್ರಯತ್ನ ಎಂದು ಶಿವಕುಮಾರ್ ಹೇಳಿದ್ದಾರೆ, ಅದೇ ಸಮಯದಲ್ಲಿ, ವಿರೋಧ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ತನ್ನದೇ ಆದ ತಂತ್ರವನ್ನು ಹೊಂದಿದೆ ಎಂದು ಹೇಳಿದರಾದರೂ ಅವರು ವಿವರಗಳನ್ನು ಬಹಿರಂಗಪಡಿಸಲಿಲ್ಲ. "ಅವರು ಪಾದಯಾತ್ರೆಯನ್ನು ಕೈಗೊಳ್ಳಲಿ. ಈ ಹಂತದಲ್ಲಿ ನಮ್ಮ ಯಾತ್ರೆ ಯಾವುದಕ್ಕಾಗಿ ಎಂಬುದನ್ನು ನಾನು ಬಹಿರಂಗಪಡಿಸುವುದಿಲ್ಲ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.
ಆಡಳಿತ ಪಕ್ಷವು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಕಲ್ಯಾಣ ಖಾತರಿಗಳು, ಬರ ಪರಿಹಾರ ಕ್ರಮಗಳು ಮತ್ತು ರೈತರು ಮತ್ತು ದುರ್ಬಲ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅದರ ಪ್ರತಿಕ್ರಿಯೆಯ ಮೇಲೆ ತನ್ನ ಪ್ರತಿ-ಪ್ರಚಾರವನ್ನು ಕೇಂದ್ರೀಕರಿಸುವ ನಿರೀಕ್ಷೆಯಿದೆ. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಅಕ್ರಮಗಳೊಂದಿಗೆ ಬಿಜೆಪಿ ನಾಯಕರ ಸಂಬಂಧಗಳನ್ನು ಎತ್ತುವ ಮೂಲಕ ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿದರು.
ಬಿಜೆಪಿ ನಾಯಕರು ಭಾಗಿಯಾಗಿರುವ ಆರೋಪದ ಮಾಹಿತಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕೆಪಿಎಸ್‌ಸಿಯಲ್ಲಿನ ಅಕ್ರಮಗಳ ಹಿಂದೆ ಯಾರಿದ್ದಾರೆಂದು ತನಿಖೆಯಿಂದ ಬಹಿರಂಗವಾಗುತ್ತದೆ. (ಅಮಾನತುಗೊಂಡ) ಕೆಪಿಎಸ್‌ಸಿ ಅಧ್ಯಕ್ಷರನ್ನು ಯಾರು ನೇಮಿಸಿದರು ಮತ್ತು ಬಿಜೆಪಿ ನಾಯಕರೊಂದಿಗೆ ಯಾರು ಸಂಪರ್ಕದಲ್ಲಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು" ಎಂದು ಅವರು ಹೇಳಿದರು. ಮಾಜಿ ಕೆಪಿಎಸ್‌ಸಿ ಅಧ್ಯಕ್ಷರನ್ನು ಬಿಜೆಪಿ ಆಡಳಿತಾವಧಿಯಲ್ಲಿ ನೇಮಕ ಮಾಡಲಾಗಿತ್ತು ಎಂದು ಸಿಎಂ ಹೇಳಿಕೊಂಡಿದ್ದು, ಅವರನ್ನು ಅಮಾನತುಗೊಳಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬರೆದ ಪತ್ರವನ್ನು ಉಲ್ಲೇಖಿಸಿದ್ದಾರೆ.
ವಿಪಕ್ಷಗಳ ಪ್ರಚಾರವನ್ನು ಹತ್ತಿಕ್ಕಲು ಕೆಪಿಎಸ್‌ಸಿ ವಿಷಯ ಮತ್ತು ಹಿಂದಿನ ಬಿಜೆಪಿ ಆಡಳಿತದ ವಿರುದ್ಧದ ಇತರ ಆರೋಪಗಳನ್ನು ಕಾಂಗ್ರೆಸ್ ಬಳಸಿಕೊಳ್ಳುವ ಸಾಧ್ಯತೆಯಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ನಿರಂತರ ರಾಜಕೀಯ ನಿರೂಪಣೆಯನ್ನು ಹೊಂದದಂತೆ ತಡೆಯಲು ಕಾಂಗ್ರೆಸ್ ನಾಯಕತ್ವ ಉತ್ಸುಕವಾಗಿದೆ.
ಈ ಮಧ್ಯೆ, ಬಿಜೆಪಿಯ ಪಾದಯಾತ್ರೆ ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಕ ಸಾಗುತ್ತಿರುವಾಗ ಮತ್ತು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಕೆಪಿಸಿಸಿ ಮುಖ್ಯಸ್ಥ ಬಿ ಕೆ ಹರಿಪ್ರಸಾದ್ ಕಲ್ಯಾಣ ಕರ್ನಾಟಕ ಪ್ರದೇಶದ ನಾಯಕರ ನಿರ್ಣಾಯಕ ಸಭೆ ನಡೆಸಿದರು. ಬಿಜೆಪಿ ಎತ್ತಿರುವ ಸಮಸ್ಯೆಗಳಿಗೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ಉತ್ತರಿಸುವಂತೆ ಅವರು ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



