ರಾಜ್ಯ

'ಸೇಫ್ ಫುಟ್‌ಪಾತ್ ಅಭಿಯಾನ' ಕೆಲವೇ ವಾರಗಳಿಗೆ ಸೀಮಿತವಾಯ್ತೇ?: ಶಿವಾಜಿನಗರದಲ್ಲಿ ಮತ್ತೆ ಬೀದಿ ವ್ಯಾಪಾರಿಗಳ ಹಾವಳಿ; Video

ಆದರೆ ಈ ನಿಯಮ ಕೆಲವೇ ದಿನಗಳ ಮಟ್ಟಿಗೆ ಸೀಮಿತವೇ ಎಂಬ ಸಂಶಯ ಉಂಟಾಗುತ್ತಿದೆ. ಈಗ ಕಂಡುಬರುವ ದೃಶ್ಯಗಳಲ್ಲಿ ವ್ಯಾಪಾರಿಗಳು ಮತ್ತೆ ಫುಟ್‌ಪಾತ್‌ಗಳನ್ನು ಬಟ್ಟೆ ಹಾಗೂ ಇತರ ವಸ್ತುಗಳ ಮಾರಾಟಕ್ಕೆ ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ.

'ಸೇಫ್ ಫುಟ್‌ಪಾತ್ ಅಭಿಯಾನ' ಕೆಲವೇ ವಾರಗಳಿಗೆ ಸೀಮಿತವಾಯ್ತೇ?: ಶಿವಾಜಿನಗರದಲ್ಲಿ ಮತ್ತೆ ಬೀದಿ ವ್ಯಾಪಾರಿಗಳ ಹಾವಳಿ; Video
ಶಿವಾಜಿನಗರದ ಬೀದಿ
Published On :

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜುಲೈ 1ರಂದು ‘ಸೇಫ್ ಫುಟ್‌ಪಾತ್ ಅಭಿಯಾನ’ ಆರಂಭಿಸಿತ್ತು. ಶಿವಾಜಿನಗರ ಸೇರಿದಂತೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಮುಕ್ತ ಸ್ಥಳ ಕಲ್ಪಿಸುವುದು ಇದರ ಉದ್ದೇಶವಾಗಿತ್ತು.

ಆದರೆ ಈ ನಿಯಮ ಕೆಲವೇ ದಿನಗಳ ಮಟ್ಟಿಗೆ ಸೀಮಿತವೇ ಎಂಬ ಸಂಶಯ ಉಂಟಾಗುತ್ತಿದೆ. ಈಗ ಕಂಡುಬರುವ ದೃಶ್ಯಗಳಲ್ಲಿ ವ್ಯಾಪಾರಿಗಳು ಮತ್ತೆ ಫುಟ್‌ಪಾತ್‌ಗಳನ್ನು ಬಟ್ಟೆ ಹಾಗೂ ಇತರ ವಸ್ತುಗಳ ಮಾರಾಟಕ್ಕೆ ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ. ಇದರಿಂದ ಪಾದಚಾರಿಗಳು ಮತ್ತೆ ರಸ್ತೆಯಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಭಿಯಾನದ ಪರಿಣಾಮ ಎಷ್ಟು ದಿನ ಉಳಿಯಲಿದೆ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ. ಪ್ರತಿಪಕ್ಷಗಳು ಇದನ್ನು ರಾಜಕೀಯ ನಾಟಕ ಎಂದು ಸರ್ಕಾರವನ್ನು ಟೀಕಿಸಿವೆ. ಮತ್ತೊಂದೆಡೆ, ಕೆಲವರು ನ್ಯಾಯಸಮ್ಮತ ತೆರವು ಕ್ರಮಕ್ಕಾಗಿ 2014ರ ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಅನುಸರಿಸುವಂತೆ ಹಾಗೂ ದೀರ್ಘಕಾಲಿಕ ಪರಿಹಾರಕ್ಕಾಗಿ ನಿಗದಿತ ವ್ಯಾಪಾರ ವಲಯಗಳನ್ನು ರೂಪಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.