ರಾಜ್ಯ

'ಹರ್ ಘರ್ ತಿರಂಗಾ' ಅಭಿಯಾನ RSS ಕೇಂದ್ರ ಕಚೇರಿಯಿಂದ ಆರಂಭಿಸಬೇಕು ಎಂಬುದು ಪ್ರಧಾನಿ ಮೋದಿಗೆ ನನ್ನ ಮನವಿ: ಸಚಿವ ಪ್ರಿಯಾಂಕ್ ಖರ್ಗೆ; Video

ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ಪ್ರಶ್ನಿಸಿದ ಅವರು, 2002ರಲ್ಲಷ್ಟೇ ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು ಎಂದು ಹೇಳಿದ್ದಾರೆ.

'ಹರ್ ಘರ್ ತಿರಂಗಾ' ಅಭಿಯಾನ RSS ಕೇಂದ್ರ ಕಚೇರಿಯಿಂದ ಆರಂಭಿಸಬೇಕು ಎಂಬುದು ಪ್ರಧಾನಿ ಮೋದಿಗೆ ನನ್ನ ಮನವಿ: ಸಚಿವ ಪ್ರಿಯಾಂಕ್ ಖರ್ಗೆ; Video
ಪ್ರಿಯಾಂಕ್ ಖರ್ಗೆ
Published On :

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ‘ಹರ್ ಘರ್ ತಿರಂಗಾ’ ಅಭಿಯಾನದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಈ ಅಭಿಯಾನವು ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಕೇಂದ್ರ ಕಚೇರಿಯಿಂದಲೇ ಆರಂಭವಾಗಬೇಕು ಎಂದು ಹೇಳಿದ್ದಾರೆ.

ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ಪ್ರಶ್ನಿಸಿದ ಅವರು, 2002ರಲ್ಲಷ್ಟೇ ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದ ನಂತರ ಐದು ದಶಕಗಳಿಗೂ ಹೆಚ್ಚು ಕಾಲ ಆರ್‌ಎಸ್‌ಎಸ್ ತನ್ನ ನಾಗ್ಪುರದ ಕೇಂದ್ರ ಕಚೇರಿಯಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. 2002ರಲ್ಲಷ್ಟೇ ಅಲ್ಲಿ ಅಧಿಕೃತವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.‘ಹರ್ ಘರ್ ತಿರಂಗಾ’ ಅಭಿಯಾನವನ್ನು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿಂದಲೇ ಆರಂಭಿಸಬೇಕು ಎಂಬುದು ಪ್ರಧಾನಿಗೆ ನನ್ನ ಮನವಿ ಎಂದು ಹೇಳಿದ್ದಾರೆ.

ದೇಶಭಕ್ತಿಯ ವಿಚಾರದಲ್ಲಿ ಬಿಜೆಪಿಯ ನಿರೂಪಣೆಯನ್ನು ಪ್ರಶ್ನಿಸಿದ ಖರ್ಗೆ, ಅದರ ವೈಚಾರಿಕ ಮೂಲವಾದ ಆರ್‌ಎಸ್‌ಎಸ್ ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜವನ್ನು ಏಕೆ ಆಯ್ಕೆ ಮಾಡಿಕೊಂಡಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್‌ನ ಪಥಸಂಚಲನಗಳಲ್ಲಿ ಸ್ವಯಂಸೇವಕರು ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿರುವುದನ್ನು ನೋಡಿದ್ದೀರಾ ಎಂದು ಕೇಳಿದರು.

ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಹೇಳುವ ಮೊದಲು, ಬಿಜೆಪಿಯು ತನ್ನ ವೈಚಾರಿಕ ಮೂಲವಾದ ಆರ್‌ಎಸ್‌ಎಸ್ ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜವನ್ನು ಏಕೆ ಆಯ್ಕೆ ಮಾಡಿಕೊಂಡಿತ್ತು, ತನ್ನದೇ ಕೇಂದ್ರ ಕಚೇರಿಯಲ್ಲಿ ಇಷ್ಟು ದೀರ್ಘಕಾಲ ರಾಷ್ಟ್ರಧ್ವಜ ಏಕೆ ಇರಲಿಲ್ಲ ಎಂಬುದನ್ನು ಮೊದಲು ವಿವರಿಸಬೇಕು.

ಒಂದು ಸರಳ ಪ್ರಶ್ನೆ ಇನ್ನೂ ಉಳಿದಿದೆ, ಪೂರ್ಣ ಸಮವಸ್ತ್ರದಲ್ಲಿ ಸ್ವಯಂಸೇವಕರು ಹೆಮ್ಮೆಯಿಂದ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಎಷ್ಟು ಆರ್‌ಎಸ್‌ಎಸ್ ಪಥಸಂಚಲನಗಳನ್ನು ನೀವು ನೋಡಿದ್ದೀರಿ? ಯಾವುದೂ ಇಲ್ಲ. ಆದರೆ, ಇದೇ ಮಂದಿ ಎಲ್ಲರಿಗೂ ‘ದೇಶಭಕ್ತ’ ಪ್ರಮಾಣಪತ್ರ ನೀಡಲು ಸುತ್ತಾಡುತ್ತಾರೆ ಎಂದು ಖರ್ಗೆ ಟೀಕಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ನಡೆಯುತ್ತಿರುವ ‘ಹರ್ ಘರ್ ತಿರಂಗಾ’ ಅಭಿಯಾನದ ಹಿನ್ನೆಲೆಯಲ್ಲಿ ಖರ್ಗೆ ಅವರ ಈ ಹೇಳಿಕೆಗಳು ಬಂದಿವೆ. ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಗಳ ಭಾಗವಾಗಿ ಈ ಅಭಿಯಾನವು ಪ್ರಮುಖ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಕರೆ ನೀಡಿದ್ದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಂಕಲ್ಪ ಮಾಡೋಣ. ಹರ್ ಘರ್ ತಿರಂಗಾ, ಘರ್ ಘರ್ ತಿರಂಗಾ, ಹರ್ ಮನ್ ತಿರಂಗಾ (ಪ್ರತಿ ಮನೆಯಲ್ಲೂ ತ್ರಿವರ್ಣ, ಪ್ರತಿಯೊಬ್ಬರ ಹೃದಯದಲ್ಲೂ ತ್ರಿವರ್ಣ). ಬನ್ನಿ, ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸೋಣ ಎಂದು ಅವರು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.