ರಾಜ್ಯ

ಅಮೆರಿಕ ನಿರ್ಧಾರದಿಂದ ಭಾರತದ IT ಕಂಪನಿಗಳ ಮೇಲೆ ಪರಿಣಾಮ; ಮೋದಿ ಸರ್ಕಾರ ರಾಜತಾಂತ್ರಿಕವಾಗಿ ಸೋತಿದೆ: ಪ್ರಿಯಾಂಕ್ ಖರ್ಗೆ; Video

ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಐಟಿ ಕಂಪನಿಗಳ ನಿರ್ವಹಣಾ ವೆಚ್ಚ ಹೆಚ್ಚಾಗಬಹುದು. ನುರಿತ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು ಹಾಗೂ ಭಾರತೀಯ ವೃತ್ತಿಪರರನ್ನು ಅಮೆರಿಕದಲ್ಲಿರುವ ಯೋಜನಾ ಸ್ಥಳಗಳಿಗೆ ನಿಯೋಜಿಸುವಲ್ಲಿ ದಕ್ಷತೆ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಅಮೆರಿಕ ನಿರ್ಧಾರದಿಂದ ಭಾರತದ IT ಕಂಪನಿಗಳ ಮೇಲೆ ಪರಿಣಾಮ; ಮೋದಿ ಸರ್ಕಾರ ರಾಜತಾಂತ್ರಿಕವಾಗಿ ಸೋತಿದೆ: ಪ್ರಿಯಾಂಕ್ ಖರ್ಗೆ; Video
ಪ್ರಿಯಾಂಕ್ ಖರ್ಗೆ
Published On :

ಬೆಂಗಳೂರು: ಪ್ರಮುಖ ಐಟಿ ಹೊರಗುತ್ತಿಗೆ ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮವನ್ನು (Permanent Labour Certification Programme) ಅಮೆರಿಕ ಸರ್ಕಾರ ಅಮಾನತುಗೊಳಿಸಿರುವುದರಿಂದ ಭಾರತದ ಮೇಲೆ ಸಂಕೀರ್ಣ ಹಾಗೂ ದೂರಗಾಮಿ ಪರಿಣಾಮಗಳು ಉಂಟಾಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಹೊಂದಿರುವ ಪ್ರಿಯಾಂಕ್ ಖರ್ಗೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಐಟಿ ಕಂಪನಿಗಳ ನಿರ್ವಹಣಾ ವೆಚ್ಚ ಹೆಚ್ಚಾಗಬಹುದು. ನುರಿತ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು ಹಾಗೂ ಭಾರತೀಯ ವೃತ್ತಿಪರರನ್ನು ಅಮೆರಿಕದಲ್ಲಿರುವ ಯೋಜನಾ ಸ್ಥಳಗಳಿಗೆ ನಿಯೋಜಿಸುವಲ್ಲಿ ದಕ್ಷತೆ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಪಿಟಿಐ ವಿಡಿಯೋಸ್‌ ಜತೆ ಮಾತನಾಡಿದ ಅವರು, ಭಾರತದ ಪ್ರಮುಖ ಐಟಿ ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮವನ್ನು ಅಮಾನತುಗೊಳಿಸುವ ಅಮೆರಿಕದ ನಿರ್ಧಾರ ಅತ್ಯಂತ ಸಂಕೀರ್ಣ ವಿಷಯವಾಗಿದೆ ಎಂದರು.

ಇದರಿಂದ ಭಾರತೀಯ ಕಂಪನಿಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದೆ. ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಅದಕ್ಕಿಂತ ಮುಖ್ಯವಾಗಿ, ದೀರ್ಘಾವಧಿಯಲ್ಲಿ ಕಂಪನಿಗಳು ತಮ್ಮ ಕಾರ್ಯತಂತ್ರವನ್ನು ಮರುರೂಪಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಆದರೆ, ಈ ನಿರ್ಧಾರದಿಂದ ಮತ್ತೊಂದು ಅವಕಾಶವೂ ಸೃಷ್ಟಿಯಾಗಬಹುದು ಎಂದು ಖರ್ಗೆ ಅಭಿಪ್ರಾಯಪಟ್ಟರು.

ಪ್ರತಿಭೆ ಇರುವ ಸ್ಥಳದತ್ತ ಮಾರುಕಟ್ಟೆ ಚಲಿಸಲಿದೆ ಎಂಬ ಭರವಸೆ ನಮಗಿದೆ. ಅಂದರೆ, ಭಾರತದಲ್ಲಿಯೇ ಕಾರ್ಯನಿರ್ವಹಿಸುವ ಆಫ್‌ಶೋರ್‌ ಕೇಂದ್ರಗಳತ್ತ ಗಮನ ಹರಿಯಬಹುದು. ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (Global Capability Centres — GCCs) ಸ್ಥಾಪಿಸುವಲ್ಲಿಯೂ ನಮಗೆ ಉತ್ತಮ ಸಾಮರ್ಥ್ಯವಿದೆ. ಪರಿಸರ ವ್ಯವಸ್ಥೆಯಾಗಿ ಮತ್ತು ರಾಷ್ಟ್ರವಾಗಿ ನಾವು ಇದಕ್ಕೆ ಇನ್ನಷ್ಟು ಉತ್ತಮವಾಗಿ ಸಿದ್ಧರಾಗಿರಬೇಕು ಎಂದು ಹೇಳಿದರು.

ಅಮೆರಿಕ ಸರ್ಕಾರ ಮೈಕ್ರೋಸಾಫ್ಟ್‌, ಟಾಟಾ, ಇನ್ಫೋಸಿಸ್‌ ಮತ್ತು ವಿಪ್ರೊ ಸೇರಿದಂತೆ ಎಂಟು ಐಟಿ ಕಂಪನಿಗಳನ್ನು ವಿದೇಶಿ ಉದ್ಯೋಗಿಗಳಿಗಾಗಿ ಗ್ರೀನ್‌ ಕಾರ್ಡ್‌ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ. ಇದರಿಂದ ಅಮೆರಿಕದ ಪ್ರಜೆಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶಗಳು ಕಡಿಮೆಯಾಗಿವೆ ಎಂಬುದು ಅಮೆರಿಕದ ವಾದವಾಗಿದೆ.

ಅಮೆರಿಕದ ವಂಚನೆ ತಡೆ ಕಾರ್ಯಪಡೆಯ (US Anti-Fraud Task Force) ಅಡಿಯಲ್ಲಿ ಕೈಗೊಂಡ ಕ್ರಮದ ಭಾಗವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌, ಕಾರ್ಮಿಕ ಕಾರ್ಯದರ್ಶಿ ಕೀತ್‌ ಸೊಂಡರ್‌ಲಿಂಗ್‌ ಮತ್ತು ಅಟಾರ್ನಿ ಜನರಲ್‌ ಟಾಡ್‌ ಬ್ಲಾಂಚ್‌ ಈ ಘೋಷಣೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.