Metro ನಿಲ್ದಾಣದಿಂದ ರಸ್ತೆಗೆ ಬಿದ್ದ ಡೆಡ್ಲಿ ಮೆಟಲ್ ಶೀಟ್: ಬ್ರೇಕ್ ಹಾಕಿ ಬಚಾವಾದ ಕಾರು ಚಾಲಕ..!
ಆಗಸ್ಟ್ 6 ರಂದು ರಾತ್ರಿ ಸುಮಾರು 9:48 ರ ಸುಮಾರಿಗೆ ಹೊರಗಿನ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು. ಈ ವೇಳೆ ಎತ್ತರಿಸಿದ ಮೆಟ್ರೋ ಮಾರ್ಗದಿಂದ (Viaduct) ಸುಮಾರು ಒಂದು ಮೀಟರ್ ಉದ್ದದ ಭಾರೀ ಲೋಹದ ಶೀಟ್ ಏಕಾಏಕಿ ಕೆಳಗೆ ಬಿದ್ದಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಹೊರಗಿನ ವರ್ತುಲ ರಸ್ತೆಯಲ್ಲಿ (ORR) ಗುರುವಾರ ರಾತ್ರಿ ಮತ್ತೊಂದು ಮೆಟ್ರೋ ಕಾಮಗಾರಿ ಲೋಪ ಬೆಳಕಿಗೆ ಬಂದಿದ್ದು, ಪ್ರಾಣಾಪಾಯದಿಂದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಾರತ್ತಹಳ್ಳಿ ಸಮೀಪದ ಕಡುಬೀಸನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದಿಂದ ಭಾರೀ ಗಾತ್ರದ ಮೆಟಲ್ ಶೀಟ್ (ಲೋಹದ ತಗಡು) ಒಂದು ಚಲಿಸುವ ವಾಹನಗಳ ನಡುವೆಯೇ ರಸ್ತೆಗೆ ಬಿದ್ದಿದೆ.
ಈ ಭೀಕರ ದೃಶ್ಯ ಕಾರೊಂದರ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗಸ್ಟ್ 6 ರಂದು ರಾತ್ರಿ ಸುಮಾರು 9:48 ರ ಸುಮಾರಿಗೆ ಹೊರಗಿನ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿತ್ತು. ಈ ವೇಳೆ ಎತ್ತರಿಸಿದ ಮೆಟ್ರೋ ಮಾರ್ಗದಿಂದ (Viaduct) ಸುಮಾರು ಒಂದು ಮೀಟರ್ ಉದ್ದದ ಭಾರೀ ಲೋಹದ ಶೀಟ್ ಏಕಾಏಕಿ ಕೆಳಗೆ ಬಿದ್ದಿದೆ.
ಇದು ರಸ್ತೆಯಲ್ಲಿ ಚಲಿಸುತ್ತಿದ್ದ BMTC ಎಸಿ ಎಲೆಕ್ಟ್ರಿಕ್ ಬಸ್ ಮತ್ತು ಕಾರಿನ ಮಧ್ಯದಲ್ಲೇ ಬಿದ್ದಿದೆ. ಕಾರು ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣ ಬ್ರೇಕ್ ಹಾಕಿದ್ದರಿಂದ ದೊಡ್ಡ ಗಂಡಾಂತರ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ಈ ಘಟನೆಯ ವಿಡಿಯೋ ಹೊರಬರುತ್ತಿದ್ದಂತೆ ಬಿಎಂಆರ್‌ಸಿಎಲ್ (BMRCL) ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಈ ಲೋಹದ ತಗಡು ದ್ವಿಚಕ್ರ ವಾಹನ ಸವಾರರು ಅಥವಾ ಪಾದಚಾರಿಗಳ ಮೇಲೆ ಬಿದ್ದಿದ್ದರೆ ಸಾವು-ನೋವು ಸಂಭವಿಸುತ್ತಿತ್ತು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


