ರಾಜ್ಯ

ಕುದೂರು BDCC ಬ್ಯಾಂಕಿನಲ್ಲಿ ನಕಲಿ ಚಿನ್ನದ ಹಗರಣ: ಮಾಗಡಿಯ ಮಾಜಿ-ಹಾಲಿ ಶಾಸಕರ ಬಹಿರಂಗ ಚರ್ಚೆ! ಚಕ್ರಬಾವಿಯಲ್ಲಿ ನಿಷೇಧಾಜ್ಞೆ ಜಾರಿ!

ಚಕ್ರಬಾವಿ ಗ್ರಾಮದ ವಿ.ಎಸ್.ಎಸ್. ಎನ್ ಸೂಸೈಟಿ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹೆಚ್. ಎನ್. ಅಶೋಕ್, ಕೃಷ್ಣಮೂರ್ತಿ ಮತ್ತಿತರರ ಮುಖಂಡರನ್ನು ಬಹಿರಂಗ ಚರ್ಚೆಗೆ ಎ. ಮಂಜುನಾಥ್ ಆಹ್ವಾನಿಸಿದ್ದರು.

ಕುದೂರು BDCC ಬ್ಯಾಂಕಿನಲ್ಲಿ ನಕಲಿ ಚಿನ್ನದ ಹಗರಣ: ಮಾಗಡಿಯ ಮಾಜಿ-ಹಾಲಿ ಶಾಸಕರ ಬಹಿರಂಗ ಚರ್ಚೆ! ಚಕ್ರಬಾವಿಯಲ್ಲಿ ನಿಷೇಧಾಜ್ಞೆ ಜಾರಿ!
ಎ.ಮಂಜುನಾಥ್ ಹಾಗೂ ಶಾಸಕ ಹೆಚ್. ಸಿ. ಬಾಲಕೃಷ್ಣ
Published On :

ರಾಮನಗರ: ಕುದೂರು ಬಿಡಿಸಿಸಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ನಕಲಿ ಚಿನ್ನದ ಹಗರಣ ಕುರಿತು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಇಂದು ಹಾಲಿ ಶಾಸಕ ಹೆಚ್. ಸಿ. ಬಾಲಕೃಷ್ಣ ಹಾಗೂ ಜೆಡಿಎಸ್ ಮಾಜಿ ಶಾಸಕ ಎ. ಮಂಜುನಾಥ್ ಮುಖಾಮುಖಿಯಾಗುತ್ತಿದ್ದಾರೆ.

ಚಕ್ರಬಾವಿ ಗ್ರಾಮದ ವಿ.ಎಸ್.ಎಸ್. ಎನ್ ಸೂಸೈಟಿ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹೆಚ್. ಎನ್. ಅಶೋಕ್, ಕೃಷ್ಣಮೂರ್ತಿ ಮತ್ತಿತರರ ಮುಖಂಡರನ್ನು ಬಹಿರಂಗ ಚರ್ಚೆಗೆ ಎ. ಮಂಜುನಾಥ್ ಆಹ್ವಾನಿಸಿದ್ದರು.

ಈ ಸವಾಲನ್ನು ಸ್ವೀಕರಿಸಿರುವ ಶಾಸಕ ಹೆಚ್. ಸಿ. ಬಾಲಕೃಷ್ಣ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಉಭಯ ಪಕ್ಷದವರು ತಮ್ಮ ಮುಖಂಡರುಗಳೊಂದಿಗೆ ಬಹಿರಂಗ ಚರ್ಚೆಗೆ ಹೋಗುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಕೂಡಾ ನಡೆದಿದೆ. ಬೆಂಬಲಿಗರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಿಸಲು ಮತ್ತು ಶಾಂತಿ ಕಾಪಾಡುವ ಹಿನ್ವೆಲೆಯಲ್ಲಿ ಚಕ್ರಬಾವಿ ಗ್ರಾಮದ ವಿ.ಎಸ್. ಎಸ್. ಎನ್. ಕಟ್ಟಡದ ಸಭಾಂಗಣ ಹಾಗೂ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಮಾಗಡಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

Story image

ಬಹಿರಂಗ ಸಭೆ ಮಾಡಬಾರದು. ಆದಾಗ್ಯೂ, ಸಭೆ ನಡೆಸಿ ಸ್ಥಳದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಆಡಚಣೆ ಉಂಟಾಗಿ, ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟಾದಲ್ಲಿ, ಸಂಬಂಧಪಟ್ಟವರನ್ನು ನೇರ ಹೊಣೆಗಾರನ್ನಾಗಿ ಮಾಡಿ, ಅವರ ವಿರುದ್ಧ ನಿರ್ದಾಕ್ಷೀಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.