ರಾಜಕೀಯ

ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇದ್ದರೆ ಅದು ರಾಜಣ್ಣ ಒಬ್ಬರಿಗೇ: ಹೆಚ್.ಸಿ ಬಾಲಕೃಷ್ಣ ವ್ಯಂಗ್ಯ

ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿ ಕಾಣುತ್ತಿದ್ದಾರೆ. ಅಗಾಧ ಶಕ್ತಿ ಇರುವ ಅವರನ್ನು ಇಂತಹ ಸ್ಥಿತಿಯಲ್ಲಿ ನಾನು ಎಂದಿಗೂ ನೋಡಿರಲಿಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ ಅನುಮಾನ ಕಾಡುತ್ತಿದೆ ಎಂದು ರಾಜಣ್ಣ ನಿನ್ನೆ ಮಾಧ್ಯಮಗಳ ಮುಂದೆ ಹೇಳಿದ್ದರು.

ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇದ್ದರೆ ಅದು ರಾಜಣ್ಣ ಒಬ್ಬರಿಗೇ: ಹೆಚ್.ಸಿ ಬಾಲಕೃಷ್ಣ ವ್ಯಂಗ್ಯ
ಹೆಚ್ ಸಿ ಬಾಲಕೃಷ್ಣ
Published On :

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಮಾಟ ಮಂತ್ರ ಮಾಡಿಸುವ ಶಕ್ತಿ ಇದ್ದರೆ ಅದು ರಾಜಣ್ಣ ಒಬ್ಬರಿಗೇ, ಸಿಎಂ ಆಪ್ತರೇ ಅವರಿಗೆ ಮಾಟ ಮಂತ್ರಿ ಮಾಡಿಸಿರಬೇಕು, ಬೇರೆ ಯಾರಿಗೂ ಆ ಶಕ್ತಿ ಇಲ್ಲ ಎಂದು ಮಾಗಡಿ ಕ್ಷೇತ್ರದ ಶಾಸಕ ಹೆಚ್ ಸಿ ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿ ಕಾಣುತ್ತಿದ್ದಾರೆ. ಅಗಾಧ ಶಕ್ತಿ ಇರುವ ಅವರನ್ನು ಇಂತಹ ಸ್ಥಿತಿಯಲ್ಲಿ ನಾನು ಎಂದಿಗೂ ನೋಡಿರಲಿಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ ಅನುಮಾನ ಕಾಡುತ್ತಿದೆ ಎಂದು ರಾಜಣ್ಣ ನಿನ್ನೆ ಮಾಧ್ಯಮಗಳ ಮುಂದೆ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿರುವ ಬಾಲಕೃಷ್ಣ, ಸಿಎಂ ಸಿದ್ದರಾಮಯ್ಯನವರ ಮೇಲೆ ಮಾಟ ಮಂತ್ರ ಮಾಡಬೇಕೆಂದರೆ ಅವರ ಬಗ್ಗೆ ತಿಳಿದಿರಬೇಕು, ಬೇರೆಯವರು ಮಾಡಿದರೆ ಅವರು ಬಿಡುತ್ತಾರಾ, ರಾಜಣ್ಣ ಅವರೇ ಮಾಡಿರಬೇಕು, ಅವರೆಲ್ಲ ಮಾಡಿದರೆ ಕ್ಷಮೆ ಇರುತ್ತದೆ ಎಂದರು.

ರಾಜಣ್ಣನವರ ಮಾತುಗಳನ್ನು ಅಷ್ಟೊಂದು ಗಂಭೀರವಾಗಿ ನೀವು ಪರಿಗಣಿಸಿದ್ದರೆ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ, ಮಾಟ-ಮಂತ್ರ ಎಂದು ರಾಜಣ್ಣ ಅವರು ಸಾಮಾನ್ಯವಾಗಿ ಹೇಳಿದ್ದಾರೆ ಎನಿಸುತ್ತದೆ, ಮಾಟ-ಮಂತ್ರ ಮಾಡಿ ಅಧಿಕಾರ ಕಸಿದುಕೊಳ್ಳುವ ಕಾಲ ಹೋಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.