ರಾಜಕೀಯ

ಮೇನಲ್ಲೇ ನಾಯಕತ್ವ ಬದಲಾವಣೆ; ಮಾಟ-ಮಂತ್ರದಿಂದಾಗಿ ಸಿದ್ದರಾಮಯ್ಯ ಅಸಹಾಯಕ?: ಕೆ.ಎನ್ ರಾಜಣ್ಣ

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಸಾಕಷ್ಟು ದಿನಗಳಿಂದ ಹಗ್ಗಜಗ್ಗಾಟ ಮುಂದುವರೆದಿದೆ. ಈ ಮಧ್ಯೆ ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಮೇನಲ್ಲೇ ನಾಯಕತ್ವ ಬದಲಾವಣೆ; ಮಾಟ-ಮಂತ್ರದಿಂದಾಗಿ ಸಿದ್ದರಾಮಯ್ಯ ಅಸಹಾಯಕ?: ಕೆ.ಎನ್ ರಾಜಣ್ಣ
ಸಿದ್ದರಾಮಯ್ಯ-ಕೆಎನ್ ರಾಜಣ್ಣ
Published On :

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಸಾಕಷ್ಟು ದಿನಗಳಿಂದ ಹಗ್ಗಜಗ್ಗಾಟ ಮುಂದುವರೆದಿದೆ. ಈ ಮಧ್ಯೆ ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ನಿಂತ ನೀರಲ್ಲ. ಅದು ಪರಿಶುದ್ಧವಾಗಿರಬೇಕೆಂದರೆ ಹರಿವಿಯುತ್ತಿರಬೇಕು. ಮೇ ತಿಂಗಳಲ್ಲಿ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂದರು. ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿ ಕಾಣುತ್ತಿದ್ದಾರೆ. ಅಗಾಧ ಶಕ್ತಿ ಇರುವ ಅವರನ್ನು ಇಂತಹ ಸ್ಥಿತಿಯಲ್ಲಿ ನಾನು ಎಂದಿಗೂ ನೋಡಿರಲಿಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ ಎಂಬ ಆಲೋಚನೆ ಬರುತ್ತದೆ ಎಂದರು. ನಾನು ಮಾಟ ಮಂತ್ರವನ್ನು ನಂಬಲ್ಲ. ಆಗಂತ ಅದನ್ನು ಮಾಡಿಸುವುದಿಲ್ಲ ಅಂತಲ್ಲ. ನಮ್ಮ ಹಳೆ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ದರು. ಕೇರಳದಲ್ಲಿ ಮಾಟ-ಮಂತ್ರ ಮಾಡಿಸುತ್ತಾರೆ ಎಂದು ಶಾಸಕ ರಾಜಣ್ಣ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.