ಬಿಜೆಪಿಯವರು ರಣಹದ್ದುಗಳಂತೆ, ರಾಜಕೀಯ ಲಾಭಕ್ಕಾಗಿ ಕೋಮು ಗಲಭೆ ಮಾಡಲು ಕಾಯುತ್ತಿರುತ್ತಾರೆ: ಯತೀಂದ್ರ ಸಿದ್ದರಾಮಯ್ಯ; Video
ಬಿಜೆಪಿ ಸದಸ್ಯರು ರಣಹದ್ದುಗಳಂತೆ. ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಅವಕಾಶ ಸಿಗುವುದನ್ನೇ ಅವರು ಕಾಯುತ್ತಿರುತ್ತಾರೆ ಎಂದು ಟೀಕಿಸಿದರು.

ಬೆಂಗಳೂರು: ಸಚಿವ ಯತೀಂದ್ರ ಸಿದ್ದರಾಮಯ್ಯ ಮತ್ತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿರುವ ರಣಹದ್ದುಗಳಂತೆ ಬಿಜೆಪಿ ಸದಸ್ಯರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗಣೇಶ ಪೂಜಾ ಸಮಿತಿಯ ಸದಸ್ಯರಿಗೆ ನಿಯಮಗಳನ್ನು ಪಾಲಿಸುವಂತೆ, ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದರು ಎನ್ನಲಾದ ಘಟನೆಗೆ ಸಂಬಂಧಿಸಿ ಕಳೆದ ವಾರ ಟಿ. ನರಸೀಪುರದಲ್ಲಿ ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆ ಕುರಿತು ಅವರು ಮಾತನಾಡಿದರು.
ಬಿಜೆಪಿ ಸದಸ್ಯರು ರಣಹದ್ದುಗಳಂತೆ. ರಾಜಕೀಯ ಲಾಭಕ್ಕಾಗಿ ಕೋಮು ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಅವಕಾಶ ಸಿಗುವುದನ್ನೇ ಅವರು ಕಾಯುತ್ತಿರುತ್ತಾರೆ ಎಂದು ಟೀಕಿಸಿದರು.
ಟಿ.ನರಸೀಪುರ ಗಣೇಶ ಮೆರವಣಿಗೆಯ ಕುರಿತು ಇನ್ಸ್ಪೆಕ್ಟರ್ ವೈರಲ್ ವಿಡಿಯೋ ಸರಿಯಿದೆ. ಮಸೀದಿ ಮುಂದೆ, ಚರ್ಚ್ಗಳ ಮುಂದೆ ದೇವಸ್ಥಾನಗಳ ಮುಂದೆ ಪಟಾಕಿ ಹೊಡೆಯುವುದು ತಪ್ಪು. ಯಾರಾದರು ದೇವಸ್ಥಾನಗಳ ಮುಂದೆ ಬೇರೆಯವರು ಬಂದು ಪಟಾಕಿ ಹೊಡೆದರೆ ಸರಿನಾ?, ಸುಮ್ಮನೆ ಪಟಾಕಿ ಹೊಡೆಯುವುದು ಸರಿಯಲ್ಲ.
ಕಳೆದ ಬಾರಿ ಅನುಮತಿ ಪಡೆಯದೇ ಆ ರಸ್ತೆಯಲ್ಲಿ ಹೋಗಿದ್ದಾರೆ. ಆಗ ಪೊಲೀಸ್ ಇರಲಿಲ್ಲ. ಈಗ ಹೆಚ್ಚು ಕಡಿಮೆ ಆದರೆ ಯಾರು ಹೊಣೆ. ಆದ್ದರಿಂದ ಅನುಮತಿ ಕೊಟ್ಟಿದ್ದಾರೆ, ಅನುಮತಿ ಪಡೆದು ಯಾವ ರಸ್ತೆಯಲ್ಲಿ ಬೇಕಾದರೂ ಮೆರವಣಿಗೆ ಹೋಗಬಹುದು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಗಣೇಶ ಉತ್ಸವ ಆರಂಭಿಸಿದ್ದೇ ಬಾಲಗಂಗಾಧರನಾಥ ತಿಲಕರು, ತಿಲಕರು ಯಾವ ಪಕ್ಷದವರು ಎಂದು ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



