ರಾಜ್ಯ

ಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್? Video ಹಂಚಿಕೊಂಡು, ಯುವ ಜನತೆ ಎಚ್ಚರಿಸಿದ ನಟ ದುನಿಯಾ ವಿಜಯ್!

ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ವಿಡಿಯೋ ಒಂದನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್? Video ಹಂಚಿಕೊಂಡು, ಯುವ ಜನತೆ ಎಚ್ಚರಿಸಿದ ನಟ ದುನಿಯಾ ವಿಜಯ್!
ಝೋಂಬಿ ಡ್ರಗ್ಸ್ ತೆಗೆದುಕೊಂಡ ಯುವಕನ ವಿಡಿಯೋ, ದುನಿಯಾ ವಿಜಯ್ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್ (Zombie Drugs) ಕಾಲಿಟ್ಟಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ವಿಡಿಯೋ ಒಂದನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ. ಯುವಕನೋರ್ವ ರಸ್ತೆಯಲ್ಲಿ ತೂರಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಝೋಂಬಿ ಡ್ರಗ್ಸ್ ಬಗ್ಗೆ ಯುವಜನರನ್ನು ಎಚ್ಚರಿಸಿದ್ದಾರೆ.

ನಮಸ್ಕಾರ. ಈಗಾಗಲೇ ಭೀಮ ಸಿನಿಮಾ ನೋಡಿದ್ದೀರಿ. ಅದರಲ್ಲಿ ಗಾಂಜಾ ಮತ್ತು ಟೈಡಲ್ ಬಗ್ಗೆ ಮಾತನಾಡಿದ್ದೆವು. ಈಗ ಹೊಸದೊಂದು ಡ್ರಗ್ಸ್ ಬೆಂಗಳೂರಿಗೆ ಬಂದಿದೆ ಅಂತ ಮಾಹಿತಿ ಇದೆ. ಅದು ಝೋಂಬಿ ಅಂತ, ಹಾಗಾಗಿ ಯುವಕರು ತುಂಬಾ ಹುಷಾರಾಗಿರಬೇಕು. ಯುವಕರಷ್ಟೇ ಪೋಷಕರು ಕೂಡಾ ಎಚ್ಚರವಾಗಿರಬೇಕು ಎಂದು ಕರೆ ನೀಡಿದ್ದಾರೆ.

ಮನೆಯಲ್ಲಿರೋ ಮಕ್ಕಳ ಬಗ್ಗೆ ಗಮನಹರಿಸ್ಬೇಕು. ಇದನ್ನು ಪೊಲೀಸ್ ಡಿಪಾರ್ಟ್​ಮೆಂಟ್ ಇದನ್ನು ನಿಜಾನಾ ಸುಳ್ಳಾ ಅಂತ ಪತ್ತೆ ಹಚ್ಚಿ ಜನರಿಗೆ ಮಾಹಿತಿ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ನಿಜವಾಗಿಯೂ ಆ ಕೆಲಸ ಮಾಡುವುದರಲ್ಲಿ ನಮ್ಮ ಕರ್ನಾಟಕ ಪೊಲೀಸ್ ಮೇಲುಗೈ ಸಾಧಿಸಿದೆ. ನನ್ನ ಮನವಿ ಏನೆಂದರೆ ಆ ರೀತಿ ಕಂಡುಬಂದರೆ ಹತ್ತಿರದ ಪೊಲೀಸ್​ ಸ್ಟೇಷನ್​ಗೆ ವಿಷಯ ತಿಳಿಸಿ. ಝೋಂಬಿ ಡ್ರಗ್ಸ್ ಬಗ್ಗೆ ಗೊತ್ತಾದರೆ ಪೊಲೀಸರಿಗೆ ಹೇಳಿ ಅಂತ ಕೇಳಿಕೊಳ್ತೀನಿ ಎಂದು ಮನವಿ ಮಾಡಿದ್ದಾರೆ.

ಝೋಂಬಿ ಡ್ರಗ್ಸ್ ಸೇವನೆ ಮಾಡಿರುವ ವ್ಯಕ್ತಿ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ನಿಂತುಬಿಡುತ್ತಾನೆ. ಮೈ ಮೇಲೆ ಪ್ರಜ್ಞೆ ಇಲ್ಲದ ಸ್ಥಿಯಲ್ಲಿರುವ ವ್ಯಕ್ತಿ ಅರೆಪ್ರಜ್ಞಾಸ್ಥಿತಿಯಲ್ಲಿ ಇರುವ ಕೆಲ ವಿಡಿಯೋಗಳು ಸಾರ್ವಜನಿಕರು ಭಯಪಡುವಂತೆ ಮಾಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.