ಸಂಪುಟ ಸಭೆಯಲ್ಲಿ ಸಚಿವರ ಜಟಾಪಟಿ: ಡಾ. ಹೆಚ್.ಸಿ ಮಹಾದೇವಪ್ಪ- ಕೆ.ಜೆ ಜಾರ್ಜ್ ಕಿತ್ತಾಡಿಕೊಂಡ್ರಾ?
ಮತ್ತೊಂದೆಡೆ ಬೋರ್‌ವೆಲ್ ಕರೆಂಟ್ ಸಂಪರ್ಕ ವಿಚಾರವಾಗಿ ಸಚಿವರ ನಡುವಿನ ಜಟಾಪಟಿ ವಿಚಾರವನ್ನು ಸಚಿವ ಹೆಚ್‌ಕೆ ಪಾಟೀಲ್ ತಳ್ಳಿಹಾಕಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್‌ಸಿ ಮಹದೇವಪ್ಪ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ನಡುವೆ ಭಾರೀ ಜಟಾಪಟಿ ನಡೆದಿರುವುದಾಗಿ ವರದಿಯಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಟಿಎಸ್ಪಿ ಅನುದಾನದ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಮಾತಿನ ಸಮರ ನಡೆದಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಯಲು ಪಂಪ್ ಸೆಟ್‌ಗಳನ್ನು ಸರಬರಾಜು ಮಾಡುವ ಯೋಜನೆ ಬಗ್ಗೆ ಚರ್ಚಿಸುವಾಗ ಉಭಯ ಸಚಿವರ ನಡುವೆ ವಾಕ್ಸಮರ ನಡೆದಿದೆ.
ಸಭೆಯಲ್ಲಿ ಹೆಚ್‌ಸಿ ಮಹದೇವಪ್ಪ ಏರುಧ್ವನಿಯಲ್ಲೇ ಕೂಗಾಡಿದ್ದು, ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ಹಾಕಲಾಗಿದೆ. ಆದರೆ ಇಲ್ಲಿಯವರೆಗೆ ಪವರ್ ಕನೆಕ್ಶನ್ ಕೊಟ್ಟಿಲ್ಲ. ಬಡವರಿಗೆ ಕೊರೆದಿರುವ ಬೋರ್ ವೆಲ್ ಅದು. ಪವರ್ ಕೊಡದಿದ್ರೆ ಅವರು ನೀರು ಎತ್ತೋದು ಹೇಗೆ? ಅಂತ ಇಂಧನ ಸಚಿವರ ಜಾರ್ಜ್ ವಿರುದ್ಧ ಕಿಡಿಕಾರಿದ್ದಾರೆ.
ಮತ್ತೊಂದೆಡೆ ಬೋರ್‌ವೆಲ್ ಕರೆಂಟ್ ಸಂಪರ್ಕ ವಿಚಾರವಾಗಿ ಸಚಿವರ ನಡುವಿನ ಜಟಾಪಟಿ ವಿಚಾರವನ್ನು ಸಚಿವ ಹೆಚ್‌ಕೆ ಪಾಟೀಲ್ ತಳ್ಳಿಹಾಕಿದ್ದಾರೆ. ಸೌಹಾರ್ದಯುತ ಮಾತುಕತೆ ಆಗಿದೆ. ನೀವು ಕೇಳಿದ ರೀತಿಯಲ್ಲಿ ಯಾವುದೇ ಮಾತುಕತೆ ಆಗಿಲ್ಲ, ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



