ಅನಾಥ ಮಕ್ಕಳು ಕಳ್ಳಸಾಗಣೆದಾರರ ಕೈ ಸೇರುತ್ತಿವೆಯೇ? ದತ್ತು ಸ್ವೀಕಾರ ಸಂಸ್ಥೆಯ ಸಿಇಒ ಹೇಳೋದೇನು?
ಕಳೆದ ವರ್ಷ, ಭಾರತದಲ್ಲಿ, ಕೇವಲ 4,515 ದತ್ತು ಸ್ವೀಕಾರಗಳು ನಡೆದಿವೆ. ಕಳೆದ ಹತ್ತು ವರ್ಷಗಳಲ್ಲಿ ಇದು ಅತ್ಯಧಿಕವಾಗಿದ್ದರೂ ಇದು ಕಡಿಮೆ ಅಂಕಿ ಅಂಶವಾಗಿದೆ.

ಬೆಂಗಳೂರು: ದತ್ತು ಸ್ವೀಕಾರ ನೆಪದಲ್ಲಿ ಅನಾಥ ಮಕ್ಕಳು ಕಳ್ಳಸಾಗಣೆದಾರರ ಕೈ ಸೇರುತ್ತಿದ್ದು, ಈ ಬಗೆಗಿನ ಕಾನೂನು ವ್ಯವಸ್ಥೆ ಕುರಿತು ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ.
ಬೆಂಗಳೂರಿನ ಬಾಲಭವನದಲ್ಲಿ 'ವಿಶೇಷ ಅಗತ್ಯವಿರುವ ಮಕ್ಕಳ ದತ್ತು' ಎಂಬ ವಿಷಯದ ಕುರಿತು ಮಕ್ಕಳ ರಕ್ಷಣಾ ನಿರ್ದೇಶನಾಲಯವು ಆಯೋಜಿಸಿದ್ದ ರಾಜ್ಯಮಟ್ಟದ ದತ್ತು ಕುಟುಂಬಗಳು ಮತ್ತು ನಿರೀಕ್ಷಿತ ದತ್ತು ಪೋಷಕರ (PAP) ಸಭೆಯಲ್ಲಿ ಮಾತನಾಡಿದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್ಎ) ಸದಸ್ಯ ಕಾರ್ಯದರ್ಶಿ ಮತ್ತು ಸಿಇಒ ಭಾವನಾ ಸಕ್ಸೇನಾ ಅವರು ಮಾತನಾಡಿದರು.
ಈ ವೇಳೆ ರಾಜ್ಯ ದತ್ತು ಸಂಪನ್ಮೂಲ ಕೇಂದ್ರ ಮತ್ತು ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ ನೋಂದಣಿ ಏಕೆ ಕಡಿಮೆಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವರ್ಷ, ಭಾರತದಲ್ಲಿ, ಕೇವಲ 4,515 ದತ್ತು ಸ್ವೀಕಾರಗಳು ನಡೆದಿವೆ. ಕಳೆದ ಹತ್ತು ವರ್ಷಗಳಲ್ಲಿ ಇದು ಅತ್ಯಧಿಕವಾಗಿದ್ದರೂ ಇದು ಕಡಿಮೆ ಅಂಕಿ ಅಂಶವಾಗಿದೆ ಎಂದು ತಿಳಿಸಿದ್ದಾರೆ.
ಅನಾಥ ಮಕ್ಕಳು ಕಳ್ಳಸಾಗಣೆದಾರರ ಕೈಗೆ ಸಿಲುಕುತ್ತಿದ್ದಾರೆಯೇ? ಕಾನೂನು ವ್ಯವಸ್ಥೆಯಲ್ಲಿ ಲೋಪವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅನಾಥ, ಪರಿತ್ಯಕ್ತ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆಂಬುದನ್ನು ಪರಿಶೀಲಿಸಬೇಕಿದೆ. ವಿವಿಧ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿ ಈ ಸಮಸ್ಯೆಯನ್ನು ಸರಿಪಡಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
33,000 ನಿರೀಕ್ಷಿತ ಪೋಷಕರು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ದತ್ತು ಸ್ವೀಕಾರಕ್ಕಾಗಿ ಕಾಯುತ್ತಿದ್ದಾರೆ. ಆದರೆ ವಿವಿಧ ಮಕ್ಕಳ ಆರೈಕೆ ಸಂಸ್ಥೆಗಳಲ್ಲಿರುವ ಕೇವಲ 2,000 ಮಕ್ಕಳು ಮಾತ್ರ ದತ್ತು ಪಡೆಯಲು ಕಾನೂನುಬದ್ಧವಾಗಿ ಮುಕ್ತರಾಗಿದ್ದಾರೆ (LFA). 1.3 ಶತಕೋಟಿ ಜನರಿರುವ ದೇಶದಲ್ಲಿ ಇಂತಹ ಅಂಕಿಅಂಶಗಳನ್ನು ನೋಡುವುದು ಆಘಾತಕಾರಿ.
ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು, ವಿಶೇಷ ದತ್ತು ಸಂಸ್ಥೆಗಳು (SAA) ಮತ್ತು ಮಕ್ಕಳ ಆರೈಕೆ ಸಂಸ್ಥೆಗಳು ಸೇರಿದಂತೆ ಪಾಲುದಾರರ ಜವಾಬ್ದಾರಿಗಳನ್ನು ಬಾಲ ನ್ಯಾಯ ಕಾಯ್ದೆ, 2015 ರಲ್ಲಿ ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ದಂಪತಿಗಳು ಸಾಮಾನ್ಯವಾಗಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಬಯಸುತ್ತಾರೆ. ದತ್ತು ಸಂಸ್ಥೆಗಳು ಮತ್ತು CWCಗಳು ಅನಾಥ ಅಥವಾ ಸಂಬಂಧಿಕರಿಂದ ಭೇಟಿ ಪಡೆಯದ ಮಕ್ಕಳನ್ನು ಗುರುತಿಸಿ ಅವರನ್ನು LFA ವ್ಯಾಪ್ತಿಗೆ ತರಬೇಕು. ಈ ಮಕ್ಕಳು ನಿರೀಕ್ಷಿತ ಪೋಷಕರು ನೋಂದಾಯಿಸಿರುವ ಉಲ್ಲೇಖಿತ ಸೈಟ್‌ಗಳಲ್ಲಿ ಪಟ್ಟಿ ಮಾಡಲ್ಪಟ್ಟಿದ್ದಾರೆಯೇ ಎಂದು CWCಗಳು ಖಚಿತಪಡಿಸಿಕೊಳ್ಳಬೇಕು.
ಹೆಚ್ಚಿನ ಪೋಷಕರು 2 ವರ್ಷಕ್ಕಿಂತ ಕಡಿಮೆ ಅಥವಾ ಗರಿಷ್ಠ ನಾಲ್ಕು ವರ್ಷ ವಯಸ್ಸಿನ ಮಗುವನ್ನು ದತ್ತು ಪಡೆಯಲು ಬಯಸುತ್ತಾರೆ. ಮಕ್ಕಳ ಆರೈಕೆ ಸಂಸ್ಥೆ (CCI)ಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿ (CWC)ಗಳು ಸಮಯಕ್ಕೆ ಬದ್ಧವಾಗಿಲ್ಲದಿದ್ದರೆ, ಮಗು ಬೆಳೆಯುತ್ತದೆ ಮತ್ತು ಯಾವುದೇ ಪೋಷಕರು ಅವರನ್ನು ದತ್ತು ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ಅನೇಕ ಹಿರಿಯ ಮಕ್ಕಳು ಇನ್ನೂ ಮಕ್ಕಳ ಆರೈಕೆ ಸಂಸ್ಥೆಗಳಲ್ಲಿದ್ದಾರೆ. ಮಕ್ಕಳು ಮಕ್ಕಳ ಆರೈಕೆ ಸಂಸ್ಥೆಗಳಿಗೆ ಬಂದ ನಂತರ, ಎರಡರಿಂದ ನಾಲ್ಕು ತಿಂಗಳೊಳಗೆ ಅವರನ್ನು ದತ್ತು ಪಡೆಯಲು ಕಾನೂನುಬದ್ಧವಾಗಿ ಮುಕ್ತರಾಗಿದ್ದಾರೆಂದು ಘೋಷಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ,
ಮಕ್ಕಳ ವೈದ್ಯಕೀಯ ಮತ್ತು ಇತರ ಅವಶ್ಯಕತೆಗಳನ್ನು ಪರಿಹರಿಸುವ ನೀತಿಗಳನ್ನು ರೂಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




