ಅನಾಥ ಮಕ್ಕಳು

ಅನಾಥ ಮಕ್ಕಳ ಕೋಟಿ ಕೋಟಿ ಹಣ ಗುಳಂ: ಸರ್ಕಾರದ ವಿರುದ್ಧ BJP ತೀವ್ರ ಕಿಡಿ
ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಅನಾಥರಾದ ಮಕ್ಕಳನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ. ಪ್ರತಿ ಮಗುವಿಗೆ ತಿಂಗಳಿಗೆ ಸುಮಾರು ರೂ.4,000 ಸಹಾಯಧನ ನೀಡಲಾಗುತ್ತಿದೆಯಾದರೂ, ಅನುದಾನ ಬಿಡುಗಡೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯ.

ಅನಾಥ ಮಕ್ಕಳು ಕಳ್ಳಸಾಗಣೆದಾರರ ಕೈ ಸೇರುತ್ತಿವೆಯೇ? ದತ್ತು ಸ್ವೀಕಾರ ಸಂಸ್ಥೆಯ ಸಿಇಒ ಹೇಳೋದೇನು?
ಕಳೆದ ವರ್ಷ, ಭಾರತದಲ್ಲಿ, ಕೇವಲ 4,515 ದತ್ತು ಸ್ವೀಕಾರಗಳು ನಡೆದಿವೆ. ಕಳೆದ ಹತ್ತು ವರ್ಷಗಳಲ್ಲಿ ಇದು ಅತ್ಯಧಿಕವಾಗಿದ್ದರೂ ಇದು ಕಡಿಮೆ ಅಂಕಿ ಅಂಶವಾಗಿದೆ.

ಅನಾಥ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ: ವಿಧಾನಸಭೆಯಲ್ಲಿ Congress ಶಾಸಕಿ ನಯನಾ ಮೋಟಮ್ಮ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ!
ಅನಾಥ ಮಕ್ಕಳನ್ನು ಎಸ್‌ಸಿ, ಎಸ್‌ಟಿ ಅಥವಾ ಹಿಂದುಳಿದ ವರ್ಗಗಳ ಅಡಿಯಲ್ಲಿ ಸೇರಿಸಲು ತಮ್ಮ ಇಲಾಖೆಯು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯನ್ನು ವಿನಂತಿಸಿತ್ತು. ಆದರೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಸಚಿವರು ಹೇಳಿದರು.

ಕೋವಿಡ್ ನಿಂದ ರಾಜ್ಯದಲ್ಲಿ 115 ಮಕ್ಕಳು ಅನಾಥ; ಬಾಲ ಸೇವಾ ಯೋಜನೆಗೆ 113 ಮಕ್ಕಳು ಅರ್ಹ!
ಕೋವಿಡ್-19 ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು, ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ.

ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗೆ ಪ್ರಧಾನಿಯಿಂದ "ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್' ಉಚಿತ ಶಿಕ್ಷಣದ ಘೋಷಣೆ!
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ವರ್ಷ ಪೂರ್ಣಗೊಳಿಸುತ್ತಿರುವ ನಡುವೆ ಮೇ.29 ರಂದು ಮಹತ್ವದ ಘೋಷಣೆ ಪ್ರಕಟಿಸಿದ್ದು, ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಕೊರೋನಾದಿಂದ ಅನಾಥವಾದ ಮಕ್ಕಳಿಗೆ ಸರ್ಕಾರದ ನೆರವು: 3,500 ರೂ. ಮಾಸಾಶನ ಘೋಷಣೆ
ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಬಾಲ್ ಸ್ವರಾಜ್ ಪೋರ್ಟಲ್ ನಲ್ಲಿ ಕೋವಿಡ್ ನಿಂದ ಅನಾಥರಾದ ಮಕ್ಕಳ ದಾಖಲೆ ನೀಡಿ: ರಾಜ್ಯಗಳಿಗೆ ಎನ್ ಸಿಪಿಸಿಆರ್ ಸೂಚನೆ
ಕೋವಿಡ್-19 ಸೋಂಕಿನಿಂದ ಪೋಷಕರಿಬ್ಬರನ್ನೂ ಕಳೆದುಕೊಂಡು ಅನಾಥವಾಗಿರುವ ಮಕ್ಕಳ ಬಗ್ಗೆ ದಾಖಲೆಗಳನ್ನು ಅಪ್ ಲೋಡ್ ಮಾಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ ಆದೇಶ ನೀಡಿದೆ.

'ಕೊರೋನಾದಿಂದ ಎಷ್ಟು ಮಕ್ಕಳು ಅನಾಥರಾಗಿದ್ದಾರೋ ಊಹಿಸಲು ಅಸಾಧ್ಯ': ನೆರವಾಗುವಂತೆ ರಾಜ್ಯಗಳಿಗೆ 'ಸುಪ್ರೀಂ' ಸೂಚನೆ
ವಿನಾಶಕಾರಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ದೇಶದಲ್ಲಿ ಎಷ್ಟು ಮಕ್ಕಳು ಅನಾಥರಾಗಿದ್ದಾರೆಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಕೂಡಲೇ ಅವರನ್ನು ಗುರುತಿಸಿ ಪರಿಹಾರ ನೀಡುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಕೋವಿಡ್-19 ನಿಂದ ಈ ವರೆಗೂ 577 ಮಕ್ಕಳು ಅನಾಥ: ವರದಿ!
ಕೋವಿಡ್-19 ನಿಂದಾಗಿ ಈ ವರೆಗೂ 577 ಮಕ್ಕಳು ಅನಾಥರಾಗಿದ್ದಾರೆ, ಅವರು ಕುಟುಂಬದ ಇತರ ಸದಸ್ಯರೊಂದಿಗೆ ಇದ್ದಾರೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.

