ರಾಜ್ಯ

Bengaluru: ಮೇಕ್ರಿ ಸರ್ಕಲ್‌ನಲ್ಲಿ ಹೈಡ್ರಾಮ; ಕ್ಯಾಬ್ ಚಾಲಕನ ಜೊತೆ ಪ್ರಯಾಣಿಕನ ಜಗಳ, ಕಾರಿನ ಮೇಲೆ ನಿಂತು ಹುಚ್ಚಾಟ!

ಅಂದಹಾಗೆ, ಸೂಪರ್ ಮಾರ್ಕೆಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಸಂತೋಷ್‌ ಬದರಿನಾಥ, ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕ್ಯಾಬ್‌ ಬುಕ್‌ ಮಾಡಿದ್ದ ಎನ್ನಲಾಗಿದೆ.

Bengaluru: ಮೇಕ್ರಿ ಸರ್ಕಲ್‌ನಲ್ಲಿ ಹೈಡ್ರಾಮ; ಕ್ಯಾಬ್ ಚಾಲಕನ ಜೊತೆ ಪ್ರಯಾಣಿಕನ ಜಗಳ, ಕಾರಿನ ಮೇಲೆ ನಿಂತು ಹುಚ್ಚಾಟ!
ಕಾರಿನ ಬಾನೆಟ್ ಮೇಲೆ ನಿಂತ ಪ್ರಯಾಣಿಕ
Published On :

ಬೆಂಗಳೂರು: ನಗರದ ಕೇಂದ್ರಭಾಗದಲ್ಲಿರುವ ಹೆಚ್ಚು ವಾಹನ ದಟ್ಟಣೆಯ ಪ್ರದೇಶವಾದ ಮೇಖ್ರಿ ಸರ್ಕಿಲ್ ನಲ್ಲಿ ಸೋಮವಾರ ದೊಡ್ಡ ಹೈಡ್ರಾಮ ನಡೆದಿದೆ. ಪ್ರಯಾಣಿಕನೊಬ್ಬ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿ ನಡು ರಸ್ತೆಯಲ್ಲಿ ಹುಚ್ಚಾಟ ನಡೆಸಿದ್ದಾನೆ.

ಅಂದಹಾಗೆ, ಸೂಪರ್ ಮಾರ್ಕೆಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಸಂತೋಷ್‌ ಬದರಿನಾಥ, ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕ್ಯಾಬ್‌ ಬುಕ್‌ ಮಾಡಿದ್ದ ಎನ್ನಲಾಗಿದೆ.

ಮೆಕ್ರಿ ಸರ್ಕಲ್‌ ಬಳಿ ಚಾಲಕನ ಜೊತೆ ಮಾತನಾಡುತ್ತಾ ಜಗಳ ಮಾಡಿದ್ದಾನೆ. ಬಳಿಕ ನಡು ರಸ್ತೆಯಲ್ಲಿ ಕಾರಿನ ಮೇಲೆ ಹತ್ತಿ ಹುಚ್ಚನಂತೆ ವರ್ತಿಸಿದ್ದಾನೆ.

ಸ್ಥಳದಲ್ಲಿದ್ದ ಜನರು ಹಾಗೂ ಸಂಚಾರಿ ಪೊಲೀಸರು ಸಮಾಧಾನ ಮಾಡಲು ಮುಂದಾದಾಗ ಅವರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಹುಚ್ಚಾಟ ಜೋರಾಗುತ್ತಿದ್ದಂತೆ ಬೇರೆ ಯಾರ ಮೇಲೂ ಹಲ್ಲೆ ಮಾಡಬಾರದು ಎಂದು ಪೊಲೀಸರು ಕೈ ಕಾಲು ಕಟ್ಟಿ ರಸ್ತೆಯಲ್ಲಿ ಮಲಗಿಸಿದ್ದಾರೆ.ಸಂತೋಷ್‌ ಆರು ತಿಂಗಳಿಂದ ಕೆಲಸ ಕಳೆದುಕೊಂಡು ಮಾನಸಿಕ ಅಸ್ವಸ್ಥನಾಗಿ ವರ್ತಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ದಾಂಪತ್ಯ ಜೀವನದಲ್ಲೂ ಸಮಸ್ಯೆ ಹೊಂದಿದ್ದ ಎನ್ನಲಾಗಿದೆ.

ಸದಾಶಿವನಗರ ಪೊಲೀಸರು ಕೈಕಾಲು ಕಟ್ಟಿ ಸಂತೋಷನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.